IMG20240923150431

ಪರಿಶಿಷ್ಟರ ಒಳಮೀಸಲಾತಿಗಾಗಿ ಸರಕಾರಕ್ಕೆ ಮುಖಂಡರ ಆಗ್ರಹ

ಕುಷ್ಟಗಿ: ಸುಪ್ರೀಂ ಕೋರ್ಟ ನಿರ್ದೇಶನದಂತೆ ಪರಿಶಿಷ್ಟರಿಗೆ ಒಳಮೀಸಲಾತಿ ಕಲ್ಪಿಸುವುದು ಸೂಕ್ತವಿದೆ ಎಂದು ತಿಳಿಸಿದ್ದರೂ ರಾಜ್ಯ ಸರಕಾರ ಒಳಮೀಸಲಾತಿಯನ್ನು ಮಾಡದೇ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಅನ್ಯಾಯ ಮಾಡುತ್ತಿದ್ದು ಕೂಡಲೇ ಸರಕಾರ ಒಳಮೀಸಲಾತಿ ಜಾರಿಗೊಳಿಸುವಂತೆ ಪರಿಶಿಷ್ಟ ಮುಖಂಡರು ಆಗ್ರಹಿಸಿದರು. 

ಈ ಕುರಿತು ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಸೋಮವಾರದಂದು ಸುದ್ದಿಗೋಷ್ಟಿ ನಡೆಸಿದ ಮುಖಂಡರು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಆಗ್ರಹಿಸಿದರು. ಮುಖಂಡ ವಸಂತ ಮೇಲಿನಮನಿ ಮಾತನಾಡಿ ಒಳಮೀಸಲಾತಿ ಬಗ್ಗೆ ಸರಕಾರ ಮೀನಾಮೇಷ ಎಣಿಸುತ್ತಿದೆ. ಸಿಎಂ‌ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕ್ಯಾಬಿನೆಟ್ ಸಭೆ ಕರೆದು ಚರ್ಚೆ ಮಾಡಬೇಕಿತ್ತು. ಸುಪ್ರೀಂ ಕೋರ್ಟ ಕೂಡ ಕೊಡುವುದು ತಪ್ಪಿಲ್ಲ ಎಂದು ಹೇಳಿದೆ. ಆದರೆ ರಾಜಕೀಯ ಜಟಾಪಟಿಯಲ್ಲಿ ಸಿದ್ದರಾಮಯ್ಯ ಮರೆತಿದ್ದಾರೆ. ಸರಕಾರ‌ ಸುಮ್ಮನೆ ಕುಳಿತರು ನಮ್ಮ‌ ಮುಖಂಡರು ಹಾಗೂ ಸ್ವಾಮೀಜಿಗಳು ನಮಗೆ ಹೋರಾಟಕ್ಕಿಳಿಯಲು ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಪಕ್ಷಗಳು ನಮಗೆ ಮೀಸಲಾತಿ‌ಬಗ್ಗೆ ಚಕಾರ ಎತ್ತಲ್ಲ. ಯಾವ ಪಕ್ಷಗಳೇ ಇರಲಿ ನಮಗೆ ಎಲ್ಲರೂ ಒಳ ಮೀಸಲಾತಿ ನೀಡದೇ ನಮಗೆ ಅನ್ಯಾಯ ಮಾಡಿದ್ದಾರೆ. ಪರಿಶಿಷ್ಟರ ಮೇಲೆ ಅಸಮಾನತೆ, ಅಸ್ಪೃಶ್ಯತೆ ಇನ್ನೂ ಜೀವಂತ ಇದೆ ಎನ್ನುವದಕ್ಕೆ ಅನೇಕ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಆ ನಿಟ್ಟಿನಲ್ಲಿ  ಬೆಂಗಳೂರು-ದೆಹಲಿ ವರೆಗೂ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯ ಸರಕಾರಕ್ಕೆ ಆಗ್ರಹಿಸಿ ದಿನಾಂಕ ನಿಗದಿ ಮಾಡಿ ಹೋರಾಟಕ್ಕಿಳಿಯುತ್ತೇವೆ ಎಂದರು.

ಶುಕರಾಜ ತಾಳಕೇರಿ ಮಾತನಾಡಿ ಜೆಡಿಎಸ್ ಅಧಿಕಾರಕ್ಕೆ‌ ಬಂದರೆ ಒಳಮೀಸಲಾತಿ ಜಾರಿ ಮಾಡುತ್ತೇವೆ ಅಂತಾ ಅಧಿಕಾರ ಬಂದಾಗ ಮರೆತು ಬಿಟ್ಟರು. ಬಿಜೆಪಿಯವರು ನಮಗೆ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದಂತೆ ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವೆ ಅಂತ ಅನ್ಯಾಯ ಮಾಡಿತು‌. ಅದಕ್ಕೆ‌ಇಂದು ಬಿಜೆಪಿ ಅಧಿಕಾರ ಕಳೆದುಕೊಂಡಿತು. ಈಗ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರ ಮಾಡದೇ ಇದ್ದರೆ ಇವರಿಗೂ ಇದೇ ಗತಿ ಶತಸಿದ್ಧ. ಸರಕಾರವೇ ಮಾಡಿರುವ ಜನಗಣತಿಯಂತೆ ನಮ್ಮ ಜನಸಂಖ್ಯೆ ಆಧಾರದ ಮೇಲೆ ನಮಗೆ ಸಿಗಬೇಕಾದ ಹಕ್ಕನ್ನು ನಮಗೆ ಕೊಡಿ‌ ಎಂದು ಕೆಳುತ್ತಿದ್ದೇವೆ. ಕೊಡದಿದ್ದರೆ ನಮ್ಮ ಹೋರಾಟ ಕಠಿಣಗೊಳಿಸಲಾಗುತ್ತದೆ ಎಂದರು. 

ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಮಾನಪ್ಪ ತಳವಾರ, ನಾಗರಾಜ ಮೇಲಿನಮನಿ, ಚಂದ್ರು ಹಿರೇಮನಿ, ಬಸವರಾಜ ಬೇವಿನಕಟ್ಟಿ, ಕೃಷ್ಣಮೂರ್ತಿ ಟೆಂಗುಂಟಿ, ಬಾಳಪ್ಪ ಬೇವಿನಕಟ್ಟಿ, ಹನಂತಪ್ಪ ಇಂಡಿ, ರಮೇಶ ಸೇರಿದಂತೆ ಮತ್ತಿತರರು ಇದ್ದರು. 

Leave a Reply

Your email address will not be published. Required fields are marked *

error: Content is protected !!