KB

ನಾಮನಿರ್ದೇಶಿತ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 3- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿಯಲ್ಲಿ ಸಹಾಯಧನ, ಸಾಲ ಸೌಲಭ್ಯ, ಗಂಗಾಕಲ್ಯಾಣ, ಯೋಜನೆಗಳಲ್ಲಿ ಸೌಲಭ್ಯಗಳನ್ನು ನೀಡುವ ಸಲುವಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳುರವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಜಿಲ್ಲಾ ಆಯ್ಕೆ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವಕರ್ಮ ಸಮುದಾಯದ ಜನಾಂಗದವರಿಗೆ 02 ವರ್ಷಗಳ ಅವಧಿಗೆ ಓರ್ವ ಅಧೀಕಾರೇತರ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಬೇಕಾಗಿರುತ್ತದೆ.

ಅರ್ಹತೆಗಳು: ಸದರಿ ಜಿಲ್ಲೆಯಲ್ಲಿ ಕನಿಷ್ಠ 15 ವರ್ಷಗಳ ಕಾಲ ವಾಸವಾಗಿರಬೇಕು. (ವಾಸಸ್ಥಳ ದೃಢಿಕರಣ ಪತ್ರ ಸಲ್ಲಿಸಬೇಕು), ಕನಿಷ್ಠ 35 ರಿಂದ ಗರಿಷ್ಠ 65 ವರ್ಷ ವಯೋಮಿತಿ ಒಳಗಿರಬೇಕು, ಕನಿಷ್ಠ ಎಸ್.ಎಸ್.ಎಲ್.ಸಿ ರವರೆಗೆ ವಿದ್ಯಾಭ್ಯಾಸ ಮಾಡಿರಬೇಕು. (ಎಸ್.ಎಸ್.ಎಲ್.ಸಿ ಅಂಕಪಟ್ಟಿ), ಆಯ್ಕೆಯಾಗುವ ವ್ಯಕ್ತಿಯು ಯಾವುದೇ ಕ್ರಿಮಿನಲ್ ಮೊಕ್ಕದ್ದಮೆಗಳನ್ನು ಎದುರಿಸುತ್ತಿರಬಾರದು/ದಂಡ/ಜುಲ್ಮಾನೆ/ಶಿಕ್ಷೆ ಅನುಭವಿಸಿರಬಾರದು. (ಜಿಲ್ಲಾ ಪೋಲಿಸ್ ಅಧೀಕ್ಷಕರು ಕೊಪ್ಪಳರವರಿಂದ ಗುಣ ನಡತೆ ಪರಿಶೀಲನಾ ವರದಿ, ಯಾವ್ಯದೇ ಕ್ರಿಮಿನಲ್ ಮೊಕ್ಕದ್ದಮೆ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು, ಆಯ್ಕೆಗೊಳ್ಳುವ ವ್ಯಕ್ತಿಯು ವಿಶ್ವಕರ್ಮ ಪಂಚವೃತ್ತಿ ಯೋಜನೆಗಳ ಪರಂಪರಾಗತವಾಗಿ ಸ್ವಂತ ನಿರ್ವಹಿಸಿರುವ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ : ಸಂಬಂಧಿಸಿದ ಜಿಲ್ಲೆಯ ಸಮಗ್ರ ಮಾಹಿತಿ ಹಾಗೂ ವಿಶ್ವಕರ್ಮ ಜನಾಂಗದವರು ವಾಸಿಸುವ ಸ್ಥಳ, ಕೈಗೊಳ್ಳುತ್ತಿರುವ ಉದ್ಯೋಗ ಇತ್ಯಾದಿ ಅಂಕಿ ಅಂಶಗಳ ಮಾಹಿತಿ ತಿಳಿದಿರಬೇಕು, ಆಯ್ಕೆ ಸಮಿತಿಯು ಜಿಲ್ಲಾ ಮಟ್ಟದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯಾಗಿದ್ದು, ಅಂತಹ ಸಮಿತಿಗೆ ಸರಳ, ಸಜ್ಜನಿಕೆ ಹಾಗೂ ಇತರರೊಂದಿಗೆ ಗೌರವಾನ್ವಿತವಾಗಿ ವರ್ತಿಸುವಂತಹ ವಿವೇಕವುಳ್ಳ ಪ್ರಜ್ಞಾವಂತರನ್ನು ಗುರುತಿಸಿ ಆಯ್ಕೆ ಮಾಡುವುದು, ಈ ಆಯ್ಕೆಯು ನೇಮಕಗೊಂಡಂದಿನಿಂದ 02 ವರ್ಷಗಳ ಕಾಲಾವಧಿ ಇರುತ್ತದೆ. ಈ ಅವಧಿಯಲ್ಲಿ ಸತತ 03 ಸಭೆಗಳಿಗೆ ಗೈರು ಹಾಜರಾದಲ್ಲಿ ಮತ್ತು ಆಯ್ಕೆ ಸಮಿತಿಯು ಅಧ್ಯಕ್ಷರು/ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲಿ ವಜಾ ಮಾಡಬಹುದಾಗಿದೆ.

ಸದರಿ ನಾಮನಿರ್ದೇಶಿತ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರು, ಜಿಲ್ಲಾ ವ್ಯವಸ್ಥಾಪಕರ ಕಛೇರಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕೊಪ್ಪಳ ಜಿಲ್ಲೆ ಈ ಕಾರ್ಯಲಯಕ್ಕೆ ಅರ್ಜಿಗಳನ್ನು ಅಕ್ಟೋಬರ್ 07 ರ ಸಂಜೆ 5 ಗಂಟೆಯೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಹಾಗೂ ಅನುಸರಿಸಬೇಕಾದ ಮಾನದಂಡಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!