


ಹಿರೇಮನ್ನಾಪುರ ಕೊಲೆ ಪ್ರಕರಣ: ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ್ ಪಡೆ
ಇತ್ತೀಚೆಗೆ ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಮನ್ನಾಪುರ ಗ್ರಾಮದಲ್ಲಿ ಸೆ.29 ರಂದು ಯಾರೋ ದುಷ್ಕರ್ಮಿಗಳು ಶರಣಪ್ಪ ತಂದೆ ಶಿವಪ್ಪ ಮಸ್ಕಿ ವಯ:24 ವರ್ಷ ಈತನು ಅನುಮಾನಾಸ್ಪದ ಸಾವನ್ನು ಯುವಕ ತಂದೆ ಕೊಲೆ ಶಂಕೆ ವ್ಯಕ್ತ ಪಡಿಸಿದ್ದ ಹಿನ್ನೆಲೆಯಲ್ಲಿ ಕಾರ್ಯಗತರಾದ ಪೊಲೀಸ್ ಪಡೆ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಯಶವಂತ ಸಿಪಿಐ ಕುಷ್ಟಗಿ, ಕೊಲೆಯಾದ ಶರಣಪ್ಪ ಮಸ್ಕಿ ಈತನನ್ನು ಕೊಲೆ ಮಾಡಿ ಮನೆಯ ಹಾಸಿಗೆ ಮೇಲೆ ಹಾಕಿ, ದೇಹದ ಮೇಲೆ ಹಾಸಿಗೆ ಹಾಕಿ ಬೆಂಕಿ ಹಚ್ಚಿ ಯಾವುದೇ ಸುಳಿವು ನೀಡದಂತೆ ಶವ ಪತ್ತೆಯಾಗಿತ್ತು. ಘಟನೆ ಕುರಿತು ಮೃತನ ತಂದೆ ಶಿವಪ್ಪ ಮಸ್ಕಿ ರವರು ನೀಡಿದ ದೂರನ್ನು ಆಧರಿಸಿ ಕುಷ್ಟಗಿ ಪೊಲೀಸ್ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ಪತ್ತೆ ಕುರಿತು ರಚಿಸಿದ ತಂಡದಲ್ಲಿನ ಅಧಿಕಾರಿ ಹಾಗೂ ಸಿಬ್ಬಂಧಿಯವರು ಕಾರ್ಯಪ್ರವೃತ್ತರಾಗಿ ಮಾಹಿತಿಯನ್ನು ಸಂಗ್ರಹಿಸಿ ಭಾಗ್ಯಶ್ರೀ ಗಂಡ ಹನುಮಂತ ಡೋಣಿ, ಇಬ್ರಾಹಿಂ ತಂದೆ ದರಸಾಬ ಎಲಿಗಾರ ಸಾ:ಮುಗಳಖೋಡ ತಾ:ರಾಯಭಾಗ ಜಿ: ಬೆಳಗಾಂವ ಇವರನ್ನು ಪತ್ತೆ ಮಾಡಿ ಅ.6 ರಂದು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಪ್ರಕರಣದಲ್ಲಿ ಕೊಲೆ ಮಾಡಿರುವದಾಗಿ ಒಪ್ಪಿಕೊಂಡಿದ್ದು, ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್, ಮೊಬೈಲ್ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡು ಆಪಾದಿತರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ. ಆದರೆ ಕೊಲೆಗೆ ನಿಖರ ಕಾರಣ ಏನೆಂಬುದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿಲ್ಲ.
ಪ್ರಕರಣದಲ್ಲಿ ಕೊಲೆ ಮಾಡಿದ ಆಪಾದಿತರ ಪತ್ತೆ ಕುರಿತು ಹೇಮಂತ್ ಕುಮಾರ್ ಆರ್. ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಪ್ಪಳ ಮತ್ತು ಸಿದ್ದಲಿಂಗಪ್ಪಗೌಡ ಪಾಟೀಲ್ ಡಿ.ವೈಎಸ್.ಪಿ. ಗಂಗಾವತಿ ರವರ ಮಾರ್ಗದರ್ಶನದಲ್ಲಿ ಹನುಮಂತಪ್ಪ ತಳವಾರ ಪಿ.ಎಸ್.ಐ ಕುಷ್ಟಗಿ, ಎ.ಎಸ್.ಐ ದುರಗಪ್ಪ, ಸಿಬ್ಬಂದಿಗಳಾದ ಶ್ರೀಧರ, ಅಮರೇಶ, ಸಂಗಮೇಶ, ಪರಶುರಾಮ, ಪ್ರಸಾದ, ಮಂಜುನಾಥ ರವರನ್ನೊಳಗೊಂಡ ಒಂದು ವಿಶೇಷ ತಂಡವನ್ನು ರಚನೆ ಮಾಡಿ ಸುಳಿವು ಇಲ್ಲದ ಕೊಲೆ ಪ್ರಕರಣದಲ್ಲಿಯ ಆಪಾದಿತರನ್ನು ಪತ್ತೆ ಮಾಡಿ, ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡಕ್ಕೆ ಡಾ: ರಾಮ್ ಎಲ್. ಆರಸಿದ್ದಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಪ್ಪಳ, ರವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿರುತ್ತಾರೆ.