2

ಸಿಎಸ್‌ಆರ್ ನಿಧಿಯನ್ನು ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡಲು ಆಗ್ರಹಿಸಿ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 10- ಗಿಣಿಗೇರಾ ಗಂಗಾವತಿ ಸರ್ಕಲ್ ನಲ್ಲಿ ಗಿಣಿಗೇರ ನಾಗರಿಕ ಹೋರಾಟ ಸಮಿತಿ ಮತ್ತು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷ ನೇತೃತ್ವದಲ್ಲಿ ಗಿಣಿಗೇರಿಯಿಂದ ಗಬ್ಬೂರು, ಕೂಕನಪಳ್ಳಿವರೆಗೆ ರಸ್ತೆ ಡಾಂಬರಿಕರಣ, ಸಾರ್ವಜನಿಕ ಆಸ್ಪತ್ರೆ ಉನ್ನತಿಕರಣ ಸಿಎಸ್‌ಆರ್ ನಿಧಿಯನ್ನು ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡಲು ಗಂಗಾವತಿಯಿAದ ಬರುವ ಬಸ್ ಬೈಪಾಸ್ ಹೋಗದಂತೆ ಕ್ರಮ ಕೈಗೊಳ್ಳಲು ಹಾಗೂ ಇನ್ನಿತರ ಬೇಡಿಕೆಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು.

ಈ ಪ್ರತಿಭಟನೆ ಉದ್ದೇಶಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷ ಮುಖಂಡ ಶರಣು ಗಡ್ಡಿ ಮಾತನಾಡಿ ಗಿಣಿಗೇರಾ ಗ್ರಾಮ ದಿನೇ ದಿನೇ ಜನ ಬಿಡಿ ಪ್ರದೇಶವಾಗುತ್ತಿದ್ದು ವಲಸೆ ಕಾರ್ಮಿಕರು ಬೀಡಾಗುತ್ತಿದೆ.ಗ್ರಾಮದ ಸುತ್ತ ಬೃಹತ್ ಕೈಗಾರಿಕೆಗಳು ಹೊರಸೂಸುವ ಹಾನಿಕಾರಕ ಹೊಗೆ, ಧೂಳು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಕೆಮ್ಮು, ನೆಗಡಿ,ಅಸ್ತಮಾ, ಟಿಬಿ, ಕ್ಯಾನ್ಸರ್, ಉಸಿರಾಟದ ತೊಂದರೆಗಳು ಮುಂತಾದ ಮರಣಾಂತಕ ಕಾಯಿಲೆಗಳು ಜನರನ್ನ ಆತಂಕಗೊಳಿಸಿದೆ. ಇಂಥ ಸಮಸ್ಯೆಗಳು ಒಂದಡೆಯಾದರೆ ಗಿಣಿಗೇರಾ ಮಾರ್ಗವಾಗಿ ಗಬ್ಬೂರು ಮೂಲಕ ಕೂಕನಪಳ್ಳಿ ಹೋಗುವ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದೆ ಈ ಕುರಿತು ಹಲವಾರು ಬಾರಿ ಸಂಬAಧ ಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಗಿಣಿಗೇರಿಯಿAದ ವಿವಿಧ ಹಳ್ಳಿಗಳಿಗೆ ಹೋಗುವ ಇಂತ ಮುಖ್ಯ ರಸ್ತೆ ಈ ರೀತಿ ಗುಂಡಿಗಳು ಇರುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಮಕ್ಕಳು, ವೃದ್ಧರು,ಕಲ್ಯಾಣಿ ಕಂಪನಿಯಲ್ಲಿ ಶಿಫ್ಟ್ ವೈಸ್ ಕೆಲಸ ಮಾಡುವಂತ ಕಾರ್ಮಿಕರು ಸೈಕಲ್, ಬೈಕ್ ಮೂಲಕ ಹೋಗುವಾಗ ರಸ್ತೆಯಲ್ಲಿ ಬಿದ್ದು ಕೈಕಾಲು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಈ ಹಾಳಾದ ರಸ್ತೆ ಮೂಲಕನೇ ಗಿಣಿಗೆರಾ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿರುವುದರಿಂದ ರೋಗಿಗಳು, ಗರ್ಭಿಣಿಯರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಕೂಡಲೇ ರಸ್ತೆ ಮಾಡಬೇಕು. ಅಲ್ಲಿವರೆಗೆ ರಸ್ತೆ ಗುಂಡಿ ಮುಚ್ಚಿ ಮರ್ಮ ಹಾಕಬೇಕು.ಗಿಣಿಗೇರಾ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ಸಮುದಾಯ ಅರೋಗ್ಯ ಕೇಂದ್ರವಾಗಿ ಉನ್ನತಿಕರಿಸಬೇಕು. ಆಸ್ಪತ್ರೆಗೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಬೇಕು. ಊರಿನ ಸ್ವಚ್ಛತೆ ನೈರ್ಮಲ್ಯ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕೆಂದು ಹೇಳಿದರು.

ನಾಗರೀಕ ಹೋರಾಟ ಸಮಿತಿ ಮುಖಂಡರಾದ ಮಂಗಳೇಶ ರಾತೋಡ್ ಮಾತನಾಡಿ ಮುಖ್ಯ ರಸ್ತೆ ಬದಿಯಲ್ಲಿ ಗಿಡ ನೆಡಬೇಕೆಂದು ಹಲವಾರು ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.ಸಮರ್ಪಕವಾಗಿ ಬೀದಿ ದೀಪ ಹಾಕಬೇಕು.ಆಸ್ಪತ್ರೆ, ಶಿಕ್ಷಣ, ಸ್ವಚ್ಛತೆ ನೈರ್ಮಲ್ಯ, ಶುದ್ಧ ಕುಡಿಯುವ ನೀರು, ಇನ್ನಿತರ ಬೇಡಿಕೆಗಳಿಗೆ ಸಿ ಎಸ್ ಆರ್ ನಿಧಿಯನ್ನು ಗಿಣಿಗೇರಾ ಗ್ರಾಮದ ಅಭಿವೃದ್ಧಿ ಸಮರ್ಪಕವಾಗಿ ಬಳಕೆ ಮಾಡಬೇಕು.

ಈ ಎಲ್ಲಾ ಬೇಡಿಕೆಗಳನ್ನು ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ಗಿಣಿಗೇರಾ ನಾಗರಿಕ ಹೋರಾಟ ಸಮಿತಿ ಮತ್ತು ಸೋಷಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷ ದ ಮುಖಂಡರುಗಳಾದ ಮೌನೇಶ್,ಸುರೇಶ ಕಲಾಲ್,ದ್ಯಾಮಣ್ಣ ಡೊಳ್ಳಿನ, ಹನುಮಂತ ಕಟೀಗಿ,ರಾಘವೇಂದ್ರ, ಮಲ್ಲಿಕಾರ್ಜುನ ಲಕ್ಷ್ಮಣ ಗೋಡೆಕಾರ್ , ವಿಷ್ಣು, ರವಿ, ಅನುರಾಧ,ಚಿಕ್ಕಪ್ಪ ಉಪ್ಪಾರ, ನರಸಪ್ಪ ಗುಳದಲ್ಲಿ, ಜಂಬಣ್ಣ ಉಪ್ಪಾರ, ಎಸ್. ಬಿ. ಅಪ್ಪಣ್ಣ ಗೌಡ ಮುಂತಾದವರು ಭಾಗವಹಿಸಿದ್ದರು. ಮನವಿ ಪತ್ರವನ್ನು ಮಾನ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ, ಗಿಣಿಗೇರಿ ಪಿ ಎಚ್ ಸಿ ಮೆಡಿಕಲ್ ಆಫೀಸರ್ ಗೆ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ೧೫ ದಿನಗಳಲ್ಲಿ ತಮ್ಮ ಎಲ್ಲಾ ಬೇಡಿಕೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

ಬೇಡಿಕೆಗಳು : 

ಗಿಣಿಗೇರಿಯಿಂದ ಕುಕನಪಳ್ಳಿವರೆಗೆ ರಸ್ತೆ ಕೂಡಲೇ ಡಾಂಬರೀಕರಣ ಮಾಡಬೇಕು.

ಗಿಣಿಗೇರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತಿಕರಿಸಬೇಕು.

ಆಸ್ಪತ್ರೆಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು.

ಗಿಣಿಗೇರಾ ಮುಖ್ಯ ರಸ್ತೆ ಬದಿ ಗಿಡ ನೆಡಬೇಕು.

ಬಸ್‌ಗಳು ಬೈಪಾಸ್ ಹೋಗದಂತೆ ಕ್ರಮ ಕೈಗೊಳ್ಳಬೇಕು.

ಕಲ್ಯಾಣಿ ಸ್ಟೀಲ್ ಕಂಪನಿಯಿ0ದ ಸಿಎಸ್ಆರ್ ನಿಧಿಯನ್ನು ಗ್ರಾಮದ ಅಭಿವೃದ್ಧಿಗೆ ಸಮರ್ಪಕವಾಗಿ ಬಳಕೆಯಾಗಬೇಕು.

ಕಲ್ಯಾಣಿ ಸ್ಟೀಲ್ ಕಂಪನಿಯಲ್ಲಿ 20 ವರ್ಷಗಳಿಂದ ಕೆಲಸ ಮಾಡಿದ ಕಾರ್ಮಿಕರಿಗೆ ಕೆಲಸದ ಭದ್ರತೆ ಒದಗಿಸಬೇಕು.

ಗಿಣಿಗೆರೆ ಗ್ರಾಮದಲ್ಲಿ ಪಿಯುಸಿ ಕಾಲೇಜ್ ಕೂಡಲೆ ನಿರ್ಮಿಸಿ ವಿದ್ಯಾರ್ಥಿಗಳ ಅನುಕೂಲ ಮಾಡಬೇಕು.

ರಸ್ತೆ ಬದಿಗಳಲ್ಲಿ ಬೀದಿ ದೀಪಗಳನ್ನು ಸಮರ್ಪಕವಾಗಿ ಅಳವಡಿಸಬೇಕು.

ಗ್ರಾಮದ ಜನರ ಆರೋಗ್ಯ ತಪಾಸಣೆ ನಿರಂತರವಾಗಿ ಕೈಗೊಳ್ಳಬೇಕು.

Leave a Reply

Your email address will not be published. Required fields are marked *

error: Content is protected !!