
ಸಿದ್ದರಾಮಯ್ಯರ ಬಗ್ಗೆ ಮೋಶಾಗೆ ಭಯ, ಅದಕ್ಕೆ ಸಿಎಂ ವಿರುದ್ಧ ಷಡ್ಯಂತ್ರ ಪತ್ರ ಚಳುವಳಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 18- ರಾಜ್ಯ ಕಾಂಗ್ರೆಸ್ ಶಕ್ತಿ, ಗ್ಯಾರಂಟಿಯ ಲಾಭ ಕಂಡು ಕಂಗಾಲಾಗಿರುವ ಬಿಜೆಪಿ ಮತ್ತು ಮೋಶಾ ಅವರ ಹೇಡಿತನಕ್ಕೆ ಸಾಕ್ಷಿಯೇ ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ಎಂದು ಕಾಂಗ್ರೆಸ್ ಮುಖಂಡರು, ಗ್ಯಾರಂಟಿ ಸಮಿತಿ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಹೇಳಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿದ್ದು, ರಾಜ್ಯಪಾಲರಿಗೆ ಇರುವ ಅಧಿಕಾರ ಮತ್ತು ರಾಜ್ಯಪಾಲರ ನೇಮಕ ಪ್ರಕ್ರಿಯೆಗಳೇ ಇಂದು ತಮ್ಮ ಬೆಲೆ ಕಳೆದುಕೊಂಡಿವೆ, ರಾಜ್ಯಪಾಲರು ಬಿಜೆಪಿಯ ಏಜಂಟರಾಗಿ ಇಡಿ, ಐಟಿ ನಂತರ ಮತ್ತೊಂದು ಹೆದರಿಸುವ ದಾಳವಾಗಿದ್ದಾರೆ ಎನ್ನುವದು ಅತ್ಯಂತ ಸ್ಪಷ್ಟ ಮತ್ತು ನಾಚಿಕೆಗೇಡಿತನದ ಪರಮಾವಧಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಹಗೆತನದ ರಾಜಕಾರಣಕ್ಕೆ ಬಿಜೆಪಿ ಇಂದಲ್ಲ ನಾಳೆ ಬೆಲೆ ತೆರಲೇಬೇಕು, ಧರ್ಮ ರಾಜಕಾರಣವೂ ನಡೆಯದ ಕಾರಣಕ್ಕೆ ಈಗ ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ಪ್ರಾಬಲ್ಯವಿರುವ ವಿರೋಧ ಪಕ್ಷವನ್ನು ಮುಗಿಸುವ ಹುನ್ನಾರದಲ್ಲಿ ತೊಡಗಿದ್ದಾರೆ, ರಾಜ್ಯಪಾಲರ ಈ ನಡೆಯ ಬಗ್ಗೆ ಬಿಜೆಪಿ ಜೆಡಿಎಸ್ ನಾಯಕರಿಗೆ ಮುಂಚಿತವಾಗಿ ಹೇಳಿದ್ದರಿಂದ ಸರಕಾರ ಉರುಳುವ ಮಾತನ್ನು ಹಲವು ವಾರಗಳ ಹಿಂದೆಯೇ ಆಡುತ್ತಿದ್ದರು.
ರಾಜ್ಯಪಾಲರನ್ನು ಕೂಡಲೇ ವಾಪಾಸ್ ಕರೆಸಿಕೊಳ್ಳಬೇಕು, ದೊಡ್ಡ ಬಹುಮತದ ಸರಕಾರ ಕೆಡವಲು ಪ್ರಯತ್ನ ಮಾಡುತ್ತಿದ್ದಾರೆ.
ಇಂತಹ ಕೃತ್ಯ ನಿಲ್ಲಿಸಬೇಕು ಎಂದು ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.