WhatsApp Image 2024-08-19 at 5.03.51 PM

ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಪ್ರತಿಭಟನಾಕಾರರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 19- ಇಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎ.ಐ.ಎಂ.ಎಸ್.ಎಸ್) ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ (ಎಐಡಿವೈಓ), ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್ಓ) ಬಳ್ಳಾರಿ ಜಿಲ್ಲಾ ಸಮಿತಿಗಳ ವತಿಯಿಂದ ಪ್ರತಿಭಟನೆ ಮಾಡಿ ಮಾನ್ಯ ರಾಷ್ರ್ಟಪತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ.

ಈ ಸಂದರ್ಭದಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಎ.ಎಂಎಸ್ಎಸ್ ರಾಜ್ಯಧ್ಯಕ್ಷ ಎಂ.ಎನ್.ಮಂಜುಳಾ ರವರು ಮಾತನಾಡುತ್ತಾ, ‘ಕೊಲ್ಕತ್ತಾದ ಸರ್ಕಾರಿ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿನಿರತ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಘಟನೆಯು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಪೈಶಾಚಿಕ ಅತ್ಯಾಚಾರ, ಕೊಲೆ ಹಾಗೂ ಪ್ರತಿಭಟನಾಕಾರರ ಮೇಲಿನ ದಾಳಿಯನ್ನು ಅತ್ಯುಗ್ರವಾಗಿ ಖಂಡಿಸುತ್ತದೆ.

ಆಗಸ್ಟ್ ೯ ರಂದು ರಾತ್ರಿ ಪಾಳಿಯಲ್ಲಿ ಕೆಲಸದಲ್ಲಿದ್ದ ೩೧ ವರ್ಷದ ತರಬೇತಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಭೀಕರ ಹತ್ಯೆಯ ಘಟನೆ ಅತ್ಯಂತ ಆಘಾತಕಾರಿಯಾಗಿದೆ. ಇಂತಹ ವಿಕೃತ ಪಾತಕಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ ಮತ್ತು ಮಹಿಳೆ ಎಷ್ಟು ಅಸುರಕ್ಷಿತಳು ಎನ್ನುವುದಕ್ಕೆ ಅವು ಸಾಕ್ಷö್ಯವನ್ನು ಪದೇ ಪದೇ ನಮ್ಮ ಮುಂದಿಡುತ್ತಿವೆ. ಮತ್ತೊಂದೆಡೆ ಇಂತಹ ಬರ್ಬರ ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿ ಪಾತಕಿಗಳನ್ನು ರಕ್ಷಿಸಲು ಯತ್ನಿಸಿದ ಆಡಳಿತದ ದುಷ್ಟ ಉದ್ದೇಶವು ಬೆತ್ತಲಾಗಿದೆ.

ವೈದ್ಯ ವಿದ್ಯಾರ್ಥಿನಿಯ ಮೇಲಾದ ಕೃತ್ಯದ ವಿರುದ್ಧ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಏಕಾಏಕಿ ಸಮಾಜಘಾತುಕ ಶಕ್ತಿಗಳು ದಾಳಿ ಮಾಡಿದ್ದಾರೆ. ಸಾಕ್ಷ್ಯವನ್ನು ನಾಶಪಡಿಸುವ ಮತ್ತು ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಮತ್ತು ಪ್ರತಿಭಟನಾಕಾರರ ಮನಸ್ಸಿನಲ್ಲಿ ಭಯದ ಭಾವನೆಯನ್ನು ಹುಟ್ಟಿಸಲು ೧೪ ಆಗಸ್ಟ್ ೨೦೨೪ ರಂದು ಮಧ್ಯರಾತ್ರಿ ಆರ್ ಜಿ ಕರ್ ವೈದ್ಯಕೀಯ ಕಾಲೇಜಿಗೆ ನುಗ್ಗಿ ಪ್ರತಿಭಟನೆಯ ಸ್ಥಳವನ್ನು ಧ್ವಂಸಗೊಳಿಸಿದ್ದಾರೆ.

ಈ ಕೃತ್ಯ ಎಸಗಿರುವ ಅಪರಾಧಿಗಳನ್ನು ರಕ್ಷಿಸಲು ಗೂಂಡಾಗಳು ನಡೆಸಿರುವ ಈ ಉದ್ದೇಶಪೂರ್ವಕ ಮತ್ತು ವ್ಯವಸ್ಥಿತ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಆಸ್ಪತ್ರೆಯ ಅಧಿಕಾರಿಗಳು ಸಹ ಈ ಘಟನೆಗೆ ತಕ್ಷಣ ಪ್ರತಿಕ್ರಿಯಿಸಿಲ್ಲ, ಬದಲಾಗಿ ಅಪರಾಧಿಗಳೊಂದಿಗೆ ಶಾಮೀಲಾಗಿದ್ದು ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ. ಇಂತಹ ಘಟನೆಗಳು ಹೆಚ್ಚಾಗಲು ಕಾರಣವಾಗಿರುವ ಅಶ್ಲೀಲತೆ, ಅಂತರ್ಜಾಲ, ವೆಬ್‌ಸೈಟ್‌ಗಳು, ಮದ್ಯ-ಮಾದಕ ವಸ್ತುಗಳು ಒಂದು ಕಡೆಯಾದರೆ ಮತ್ತೊಂದೆಡೆ ಹೆಣ್ಣು ಕೇವಲ ಭೋಗದ ವಸ್ತು ಎಂದು ಬಿಂಬಿಸುವ ಪುರುಷಪ್ರಧಾನ ಧೋರಣೆ ಬದಲಾಗಬೇಕಿದೆ ಹಾಗೂ ಇಂತಹ ಘಟನೆಯ ವಿರುದ್ಧ ಇಡೀ ದೇಶದ ಜನತೆ ಧ್ವನಿ ಎತ್ತಬೇಕು’ ಎಂದು ಕರೆ ನೀಡಿದರು.

ಎಐಡಿವೈಓ ಜಿಲ್ಲಾ ಅಧ್ಯಕ್ಷರು ಪಂಪಾಪತಿ ಕೋಳೂರು ಮಾತನಾಡಿ – ಈ ಕೃತ್ಯಕ್ಕೆ ಕಾರಣರಾದ ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚಲು ನಿಷ್ಪಕ್ಷಪಾತ ತನಿಖೆ ನಡೆಸಬೇಕು; ಅಪರಾಧಿಗಳಿಗೆ ನಿದರ್ಶನೀಯ ಅತ್ಯುಗ್ರ ಶಿಕ್ಷೆಗೆ ಒಳಪಡಿಸಬೇಕು; ಸಾವಿಗೀಡಾದ ವೈದ್ಯ ವಿದ್ಯಾರ್ಥಿನಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು; ವೈದ್ಯರು, ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ, ರೋಗಿಗಳ ಮತ್ತು ಅವರ ಬಂಧುಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದರು.

ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರು ಕೆ.ಈರಣ್ಣ ಮಾತಾನಾಡಿದ ಅವರು ವಿದ್ಯಾರ್ಥಿಗಳಲ್ಲಿ ಉನ್ನತ ನೀತಿ, ನೈತಿಕತೆ ಹಾಗೂ ಸಂಸ್ಕೃತಿ ಬೆಳೆಸಲು ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಖುದಿರಾಮ್ ಬೋಸ್ ಇನ್ನಿತರೆ ಕ್ರಾಂತಿಕಾರಿಗಳು, ನವೋದಯ ಚಿಂತಕರು ವಿಚಾರಗಳು ಹರಿಬಿಡುವುದು ಅವಶ್ಯಕತೆ ಇದೆ ಎಂದರು.

ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಐಎಮ್ಎಸ್ಎಸ್ ಜಿಲ್ಲಾ ಅಧ್ಯಕ್ಷರು ಈಶ್ವರಿ.ಕೆ.ಎಮ್ , AIDSO ಜಿಲ್ಲಾಧ್ಯಕ್ಷರು ಈರಣ್ಣ , ಹಾಗೂ AIDYO ಜಿಲ್ಲಾಧ್ಯಕ್ಷರು ಪಂಪಾಪತಿ , ಜಗದೀಶ್ ಮತ್ತು ರವಿಕಿರಣ್ , ಅಭಿಲಾಷ , ಶಾಂತಿ, ವಿದ್ಯಾ, ಉಮಾ, ಅನುಪಮ, ನಿಹಾರಿಕ , ಪ್ರಮೋದ್, ಸಿದ್ದು ಇನ್ನೂ ಮುಂತಾದವರು ಭಾಗವಹಿಸಿದ್ದರ.

Leave a Reply

Your email address will not be published. Required fields are marked *

error: Content is protected !!