
ಸಂಸ್ಥಾನ ಶ್ರೀ ಗವಿಮಠ ವೈಯಕ್ತಿಕವಾಗಿ ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸುವುದಿಲ್ಲ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 20- ಪರಮ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ವೈಯಕ್ತಿಕವಾಗಿ ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸುವುದಿಲ್ಲ ಮತ್ತು ಪರಮ ಪೂಜ್ಯರ ಹೆಸರಿನಲ್ಲಿ ಸಂಸ್ಥಾನ ಶ್ರೀ ಗವಿಮಠವು ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ತೆರೆದಿರುವುದಿಲ್ಲ.
ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಮತ್ತು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಹೆಸರಿನ ಮೇಲೆ ಸಾಮಾಜಿಕ ಜಾಲತಾಣಗಳಾದ Whatsapp, Facebook, Youtube, Instagram, Telegram ಗಳಲ್ಲಿ ಹಲವು ನಕಲಿ ಖಾತೆಗಳು ಅನಾಮಧೇಯ ವ್ಯಕ್ತಿಗಳಿಂದ ರಚನೆಯಾಗಿವೆ. ಈ ನಕಲಿ ಖಾತೆ ಹಾಗೂ ಇವುಗಳಲ್ಲಿ ಅಪ್ಲೋಡ್ ಆಗುವ ಸಂದೇಶಗಳಾಗಲಿ, ವೀಡಿಯೊಗಳಾಗಲಿ ಅಥವಾ ಇನ್ನಿತರ ವಿಷಯಗಳಿಗೆ ಶ್ರೀ ಗವಿಮಠಕ್ಕೆ ಯಾವುದೇ ರೀತಿಯ ಸಂಭಂಧವಿರುವುದಿಲ್ಲ.
ಶ್ರೀ ಗವಿಮಠದ ಅಧಿಕೃತ ಸಾಮಾಜಿಕ ಜಾಲತಾಣಗಳು ಈ ಕೆಳಗಿನಂತಿವೆ :
ಈ ಕೆಳಗಿನ ಖಾತೆಯಿಂದ ಬರುವ ವಿಷಯಗಳು ಮಾತ್ರ ಶ್ರೀಮಠದ ಅಧಿಕೃತ ಪ್ರಕಟಣೆಗಳಾಗಿವೆ.
*Facebook :Gavimath Koppal
Link:https://www.facebook.com/gavimath.koppal/
* youtube:Gavimath Koppal Official
Link : https://www.youtube.com/@gavimathkoppal-official
* Instagram : gavimathkoppal_official
Link: https://www.instagram.com/gavimathkoppal_official/
ಇವುಗಳನ್ನು ಹೊರತುಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿನ ನಕಲಿ ಖಾತೆಗಳನ್ನು ಅಥವಾ ನಕಲಿ ವಿಷಯಗಳನ್ನು DELETE / UNFOLLOW ಮಾಡುವುದರ ಮೂಲಕ ತಪ್ಪು ಮಾಹಿತಿ ರವಾನೆಯಾಗುವುನ್ನು ನಿಲ್ಲಿಸಲು ವಿನಂತಿಸಲಾಗಿದೆ ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.