
ಸದ್ಭಾವನಾ ದಿನಾಚರಣೆ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ವಿಧಿ ಭೋಧನೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 23- ಎಲ್ಲಾ ಧರ್ಮಗಳ ಭಾರತೀಯ ಜನರಲ್ಲಿ ರಾಷ್ಟ್ರೀಯ ಏಕೀಕರಣ, ಶಾಂತಿ, ವಾತ್ಸಲ್ಯ ಮತ್ತು ಕೋಮು ಸೌಹಾರ್ದತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ದಿನವನ್ನು ’ಸದ್ಭಾವನಾ ದಿವಸ್’ ಅಥವಾ ಸಾಮರಸ್ಯ ದಿನ ಎಂದು ಆಚರಿಸಲಾಗುತ್ತದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜ್ ಉಪ ಪ್ರಾಚಾರ್ಯರಾದ ಬಾಬುಸಾಬ ಲೈನ್ದಾರ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಸರಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢ ಶಾಲೆ ವಿಭಾಗದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆ ವಿಧಿಯನ್ನು ” ಜಾತಿ, ಧರ್ಮ,ಪ್ರದೇಶ,ಮತ ಅಥವಾ ಭಾಷೆಯ ಭೇದ ಭಾವವಿಲ್ಲದೇ ಭಾರತದ ಎಲ್ಲ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೆನೆಂದು ನಾನು ಪ್ರತಿಜ್ಞೆ ಮಾಡುತ್ತೆನೆ ಅಲ್ಲದೇ ವೈಯಕ್ತಿಕವಾಗಿಯಾಗಲಿ ಅಥವಾ ಸಾಮೂಹಿಕ ವಾಗಿಯಾಗಲಿ ನಮ್ಮಲ್ಲಿರುವ ಎಲ್ಲ ಭೇದ ಭಾವನೆಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೆವೆಂದು ಸಹ ಪ್ರತಿಜ್ಞೆ ಮಾಡುತ್ತೇನೆ”ಎಂದು ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಸಹ ಶಿಕ್ಷಕ ಶಿವರಾಜ ಮೇಟಿ ಪ್ರತಿಜ್ಞಾನ ವಿಧಿ ಭೋದನೆ ಮಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರುಗಳಾದ ತಿಮ್ಮಣ್ಣ ಜಗ್ಗಲ್ ,ಮೌನೇಶ ಕೊಂಡಗುರಿ,ಶೋಭಾ ಬಾಗೇವಾಡಿ ,ರಶ್ಮೀಕುಮಾರಿ, ದೊಡ್ಮನಿ ಶಶಿಕಲಾ,ಬಸಮ್ಮ ನೀರಲಗಿ, ಶಕುಂತಲಾ ಸಜ್ಜನ್ ,ದೈಹಿಕ ಶಿಕ್ಷಕ ಭೀಮಪ್ಪ ಚಂದ್ರಗೀರಿ ಶಶಿಧರಗೌಡ ಗೌಡ್ರ,ಬಸವರಾಜ ಹಿರೇಮನಿ,ಅತಿಥಿ ಶಿಕ್ಷರುಗಳಾದ ಶಿವರಾಜ ಮಾಟ್ರಂಗಿ,ವಿಶ್ವನಾಥ ಹೆಚ್,ಫರೀದಾ ಬೇಗಂ,ಸುನೀತಾ ಮಾರುತೇಶ,ಮತ್ತು ವಿದ್ಯಾರ್ಥಿಗಳು ಹಾಗೂ ಇತರರು ಭಾಗವಹಿಸಿದ್ದರು.