
ತಾಲೂಕಿನಲ್ಲಿರುವ ಕೂಸಿನ ಮನೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು : ಜಗದೀಶ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 20- ತಾಲೂಕಿನಲ್ಲಿರುವ ಕೂಸಿನ ಮನೆಯಗಳಿಗೆ ಬೇಟಿ ನೀಡಿ ಪರಿಶೀಲಿಸಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೂಸಿನ ಮನೆಯಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಕ್ರೆಚ್ಛಸ ಸಂಸ್ಥೆ ಬೆಂಗಳೂರು ಮುಖ್ಯಸ್ಥ ಜಗದೀಶ್.ಎಂ.ವಿ ಹೇಳಿದರು.
ತಾಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಅಕುಶಲ ಕೂಲಿಕಾರರ ಮಕ್ಕಳಿಗಾಗಿ ತೆರೆದಿರುವ ಕೂಸಿನ ಮನೆಗಳನ್ನು ಕ್ರೆಚ್ಛಸ್ ಸಂಸ್ಥೆ, ಬೆಂಗಳೂರು ರಾಜ್ಯ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ವೇಳೆ ಆಹಾರದ ಗುಣಮಟ್ಟ, ಮಕ್ಕಳ ಲಾಲನೆ ಪಾಲನೆ ಮಾಡುತ್ತಿತುವುದು, ಅದರ ನಿರ್ವಹಣೆ ಬಗ್ಗೆ ಕ್ರೆಚ್ಛಸ್ ಸಂಸ್ಥೆ ಬೆಂಗಳೂರು ತಂಡದ ಜಗದೀಶ ಎಂ.ವಿ ಮಾಹಿತಿ ಪಡೆದರು.
ಕೂಸಿನ ಮನೆಗೆ ಸಂಬAಧಿಸಿದ ಮಕ್ಕಳ ಹಾಜರಾತಿ, ಕೇರ್ ಟೇಕರ್ ಹಾಜರಾತಿ, ಗುಣಮಟ್ಟದ ಪೌಷ್ಟಿಕ ಆಹಾರ, ಉತ್ತಮ ಕಲಿಕಾ ವಾತಾವರಣ ಇತ್ಯಾದಿಗಳ ಮಾಹಿತಿ ಪಡೆದರು.
ಕ್ರೆಚ್ಛಸ್ ಸಂಸ್ಥೆ ಬೆಂಗಳೂರು ತಂಡದ ಜಗದೀಶ ಮಾತನಾಡಿ, ಯಲಬುರ್ಗಾ ತಾಲೂಕಿನಲ್ಲಿರುವ ಕೂಸಿನ ಮನೆಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಿದೆ ಇನ್ನಷ್ಟು ಮಕ್ಕಳನ್ನು ಕರೆದುಕೊಂಡು ಬಂದು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಅದಕ್ಕೆ ಗ್ರಾಪಂ ಪಿಡಿಒರವರು ಹಾಗೂ ಕೆರ್ ಟೇಕರ್ ಅವರು ಉತ್ತಮವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ, ಆರ್‌ಜಿಎಫ್‌ಪಿ ಸಂಯೋಜಕ ನವೀನ್, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಗೆದಗೇರಿ, ಚಿಕ್ಕಮ್ಯಾಗೇರಿ, ವಣಗೇರಿ ಹಾಗೂ ಸಂಗನಹಾಳ ಗ್ರಾಮ ಪಂಚಾಯತಿ ಪಿಡಿಒ ದೊಡ್ಡಪ್ಪ ನಾಯಕ, ವೆಂಕಟೇಶ ನಾಯಕ, ನಾಗರಾಜ್, ಸರ್ವಮಂಗಳ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಮತ್ತು ಇತರರು ಭಾಗವಹಿಸಿದ್ದರು.