IMG_20241002_103051

ಗಾಂಧೀಜಿ ಕನಸಿನಂತೆ ಗ್ರಾಮಸ್ವರಾಜ್ಯಕ್ಕೆ ಪಣ ತೊಡಿ, ಸ್ವಚ್ಚತೆಗೆ ಆಧ್ಯತೆ ನೀಡಿ: ಹಿರಿಯ ಸಿವಿಲ್‌ ನ್ಯಾಯಧೀಶರಾದ ಮಂಜುನಾಥ ಆರ್.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಜಿಯವರು ನಮ್ಮ ದೇಶದ ಪ್ರತಿಯೊಂದು ಗ್ರಾಮಗಳು ಅಭಿವೃದ್ಧಿಹೊಂದಿ ಗ್ರಾಮ ಸ್ವಾರಾಜ್ಯವಾಗಬೇಕು ಎಂದು ಕನಸು ಕಂಡಂತೆ ನಾವೆಲ್ಲರೂ ನನಸು ಮಾಡಬೇಕಾದರೆ ಮೊದಲು ಸ್ವಚ್ಚತೆಗೆ ಆಧ್ಯತೆ ನೀಡಿ ಪಣತೊಡಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಧೀಶರಾದ ಮಂಜುನಾಥ ಆರ್ ಅಭಿಪ್ರಾಯಪಟ್ಟರು.

ತಾಲೂಕ ಕಾನೂನು ಸೇವಾ ಸಮಿತಿ, ತಾಲೂಕ ಆಡಳಿತ ಹಾಗೂ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಾಗೂ ಜಿ.ಬೆಂಚಮಟ್ಟಿ ದತ್ತು ಗ್ರಾಮದ ಉದ್ಘಾಟನಾ ಹಾಗೂ ಚಾಲನಾ ಸಮಾರಂಭವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ನಂತರ ಮಾತನಾಡಿ ಎಲ್ಲರೂ ತಮ್ಮ ಮನೆಯನ್ನೆ ಸ್ವಚ್ಚ ಮಾಡುವುದು ಕಷ್ಟ ಇದೆ. ಆದರೆ ಈ ಗ್ರಾಮವನ್ನು ಸ್ವಚ್ಚಮಾಡುವ ಪಣ ತೊಟ್ಟು ಇಲ್ಲಿ ಗ್ರಾಮದ ನಾಗರಿಕರು ಹಾಗೂ ತಾಲೂಕ ಆಡಳಿತ ನೆರೆದಿರುವುದು ಶ್ಲಾಘನೀಯ. ಅಕ್ಕ ಪಕ್ಕ ಏನಾದರೂ ಆಗಲಿ ನಾನು ಚೆನ್ನಾಗಿರಬೇಕು ಎನ್ನುವ ಮನಸ್ಥತಿ ಬೇಡ. ನಮ್ಮ ಹಿರಿಯರು ಸ್ವತಂತ್ರ್ಯಕ್ಕಾಗಿ ತಾನು ತನ್ನದು ಎನ್ನದೇ ಹೋರಾಡಿ ನಮಗೆ ಸ್ವತಂತ್ರ ನೀಡಿದ್ದಾರೆ. ಅವರು ಕಂಡ ಕನಸು ನನಸಾಗಲು ನಾವೆಲ್ಲ ಶ್ರಮಿಸಬೇಕು. ಗ್ರಾಮ ಸ್ವರಾಜ್ಯ ಗಾಂಧಿ ಯವರ ಕನಸು ಆಗಿತ್ತು. ಅವರ ಕನಸಿನಂತೆ ಸ್ವಚ್ಚತೆಗೆ ಮೊದಲ ಆಧ್ಯತೆ ನೀಡೋಣ. ಇಂದಿನ ಕಾರ್ಯಕ್ರಮದ ನಮ್ಮ ಮುಖ್ಯ ಉದ್ದೇಶ ತ್ಯಾಜ್ಯ ಮತ್ತು ವ್ಯಾಜ್ಯ ಮುಕ್ತ ಮಾಡುವುದು ನಮ್ಮ ಕನಸು. ಗ್ರಾಮಕ್ಕೆ ಬೇಕಾಗಿರುವ ತಮ್ಮ ಸಮಸ್ಯೆಗಳನ್ನು ತಾಲೂಕ ಆಡಳಿತವೇ ಇಲ್ಲಿ ಇದ್ದು ನ್ಯಾಯಾಲಯದ ಎಲ್ಲಾ ಅಧಿಕಾರಿಗಳು ಇಲ್ಲಿ ಇದ್ದು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿರಿ. ಈಗ ಮಾಡಿದ ಸ್ವಚ್ಚತೆ ಮತ್ತೆ ಒಂದು ವಾರದಲ್ಲಿ ಹಳೆ ಸ್ಥಿತಿ ಬರದಂತೆ ನೋಡಿಕೊಳ್ಳಿ. ನಿಮ್ಮ ಸುತ್ತಲಿನ ಪರಿಸರ ಚೆನ್ನಾಗಿ ಸ್ವಚ್ಚವಾಗಿಟ್ಟುಕೊಳ್ಳಿ. ಇದರಿಂದ ಇಮ್ಮ ನೆಮ್ಮದಿ,ಆರೋಗ್ಯ ಚೆನ್ನಾಗಿರುತ್ತೆ. ಆದ್ದರಿಂದ ನಿಮ್ಮ ಗ್ರಾಮ ನಿಮ್ಮ ಕುಟುಂಬ ಎಂದುಕೊಂಡು ಕಸಮುಕ್ತ ಗ್ರಾಮ ಮಾಡಿ ಮಾದರಿ ಗ್ರಾಮದ ಅಭ್ಯುದಯವನಾಗಿ ತೋರಿಸಬೇಕು ಎಂದರು.

ಇಓ ಪಂಪಾಪತಿ ಹಿರೇಮಠ ಮಾತನಾಡಿ ತಾಲೂಕ ಆಡಳಿತವೇ ನಿಮಗಮ ಗ್ರಾಮಕಗಕೆ ಬಂದಿದ್ದು ವ್ಯಸನ ಮುಕ್ತ, ಬಯಲುಶೌಚ ಮುಕ್ತ, ಅನಾರೋಗ್ಯ ಮುಕ್ತ, ಕಸಮುಕ್ತ, ಅನಕ್ಷರತೆ ಮುಕ್ತ ಗ್ರಾಮವನ್ನಾಗಿ ಮಾಡುವಲಗಲಿ ಗ್ರಾಮಸ್ಥರು ಪಣ ತೊಡಬೇಕು. ಗ್ರಾಮಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದರು.‌

ಇದೇ ವೇಳೆ ಗ್ರಾಮಸ್ಥರಿಗೆ ಹಾಗೂ ನಾಗರಿಕರಿಗೆ ಸ್ವಚ್ಚತಾ ಆಂದೋಲನದ ಪ್ರಮಾಣವಚನ ಬೋಧಿಸಲಾಯಿತು. ನಂತರ ಗ್ರಾಮದ ಬೀದಿಗಳ ಹಾಗೂ ಇಕ್ಕೇಲಗಳಲ್ಲಿ ಎಲ್ಲಾ ನ್ಯಾಯಾಧೀಶರು ಹಾಗೂ ತಾಲೂಕ ಆಡಳಿತ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಗ್ರಾಮಸ್ಥರು ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳು ಸೇರಿ ಸ್ವಚ್ಚತಾ ಕಾರ್ಯ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕ ಪ್ರಧಾನ ಸಿವಿಲ್ ನ್ಯಾ. ಮಾಯಪ್ಪ ಪೂಜೇರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ಚೌಳಗಿ, ತಹಶೀಲ್ದಾರ ಅಶೋಕ ಶಿಗ್ಗಾವಿ, ತಾ.ಪಂ ಇಓ ಪಂಪಾಪತಿ ಹಿರೇಮಠ, ಬಿಇಓ ಸುರೇಂದ್ರ ಕಾಂಬಳೆ, ಸಿಡಿಪಿಒ ಯಲ್ಲಮ್ಮ ಹಂಡಿ, ಪಿಡಿಓ ದಸ್ತಗೀರಸಾಬ, ಎನ್ಎಸ್ಎಸ್ ಅಧಿಕಾರಿ ನಾಗರಾಜ ಹೀರಾ, ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ಎಚ್.ಬಿ ಕುರಿ, ಅಯ್ಯಪ್ಪ ಪಲ್ಲೇದ, ಪರಸಪ್ಪ ಗುಜಮಾಗಡಿ ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!