
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕಾನೂನಿನ ಅರಿವು ಪಡೆದುಕೊಳ್ಳಿ : ನ್ಯಾ.ರಂಗಸ್ವಾಮಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 1- ಪ್ರತಿಯೊಬ್ಬ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕಾನೂನಿನ ಅರಿವು ಮತ್ತು ಜ್ಞಾನ ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ ಹೇಳಿದರು.
ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳ ಕುರಿತು ಕಾನೂನಿನ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗಾಗಿ ವಿಶೇಷ ಹಕ್ಕುಗಳಿವೆ ಅವುಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದರು.
ಮೂಲಭೂತ ಹಕ್ಕುಗಳ ವ್ಯಕ್ತಿಗಳ ಬೌದ್ಧಿಕ ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು ಈ ಹಕ್ಕುಗಳ ವ್ಯಕ್ತಿಗಳ ಅಸ್ತಿತ್ವ ಜತೆಗೆ ಸರ್ವಾಂಗಣ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಎನ್.ತ್ಯಾಗೋಟಿ ಅವರು ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಎಸ್ ಬೇಲೇರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಸವರಾಜ ತೆನ್ನಳ್ಳಿ, ಸಹಾಯಕ ಸರಕಾರಿ ಅಭಿಯೋಜಕ ರವಿ ಹುಣಿಸಿಮರದ್, ಅಪರ ಸರಕಾರಿ ವಕೀಲರಾದ ಮಲ್ಲನಗೌಡ ಎಸ್.ಪಾಟೀಲ್, ಪ್ರಭಾರಿ ಬಿಇಓ ಅಶೋಕ್ ಗೌಡ, ಎಎಸ್‌ಐ ಪ್ರಕಾಶ್, ವಸತಿ ಶಾಲೆ ಪ್ರಾಚಾರ್ಯ ಹನುಮಪ್ಪ ಉಪ್ಪಾರ, ವಕೀಲರಾದ ಎಸ್.ಎನ್.ಜಾಗೋಟಿ, ಈರಣ್ಣ ಕೋಳೂರು, ಜಗದೀಶ ತೊಂಡಿಹಾಳ, ಸಂಗಮೇಶ ಅಂಗಡಿ, ಶಿಕ್ಷಕ ಶಿವರಾಜ ಕುಂಬಾರ, ನ್ಯಾಯಾಂಗ ಸಿಬ್ಬಂದಿಗಳು ರಾಘವೇಂದ್ರ ಕೋಳಿಹಾಳ, ವಿನಾಯಕ ಪಾಪ್ಪಳೆ ಮತ್ತು ಇತರರು ಭಾಗವಹಿಸಿದ್ದರು.