
ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ನಿವೇಶನ ಮಂಜೂರಾತಿ : ಆಕ್ಷೇಪಣೆ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ನಿವೇಶನಗಳನ್ನು ಮಂಜೂರಿ ಮಾಡುವುದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಆಹ್ವಾನಿಸಲಾಗಿದೆ.
ಕುಷ್ಟಗಿ ಪಟ್ಟಣದ ವಾರ್ಡ ನಂ.05ರಲ್ಲಿ ಸರ್ವೇ ನಂ. 119/2/1ರ ಸಿದ್ದಣ್ಣ ಫಕೀರಪ್ಪ ಪಟ್ಟಣಶೆಟ್ಟಿ ರವರ ವಸತಿ ವಿನ್ಯಾಸದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನ, ವಾರ್ಡ ನಂ.01ರಲ್ಲಿ ಬರುವ ಸರ್ವೆ ನಂ. 46/1/ಎ ಮತ್ತು ಸರ್ವೆ ನಂ. 46/1/ಬಿರ ಬಸಯ್ಯ ಮಹಾಂತಯ್ಯ ಅರಳಿಲಿಮಠ, ರಾಜಶೇಖರಯ್ಯ ಅಡಿವೆಯ್ಯ ಅರಳಲಿಮಠ ಬರುವ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನ, ವಾರ್ಡ ನಂ.15ರಲ್ಲಿ ಬರುವ ಸರ್ವೆ ನಂ.218/4ರ ಕಿಲ್ಲೇದಾರ@ ಬಿ.ಎಮ್ ಕಿಲ್ಲೇದಾರ ತಂದೆ ಮೆಹಬೂಬಸಾಬ ರವರ ವಸತಿ ವಿನ್ಯಾಸದಲ್ಲಿರುವ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನ ವಾರ್ಡ ನಂ.03ರಲ್ಲಿ ಬರುವ ಸರ್ವೆ ನಂ 53/2/ಬಿ/2ರ ಕರಿಬಸಯ್ಯ ಮಡಿವಾಳಯ್ಯ ಹಿರೇಮಠ ರವರ ವಸತಿ ವಿನ್ಯಾಸದಲ್ಲಿರುವ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನ, ವಾರ್ಡ ನಂ.04ರಲ್ಲಿ ಸರ್ವೆ ನಂ 113/1 ಶ್ರೀ ಸಂತೋಷ ನಾಗಭೂಷಣ ಪಟ್ಟಣಶೆಟ್ಟಿ ರವರ ವಸತಿ ವಿನ್ಯಾಸದಲ್ಲಿರುವ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನ, ವಾರ್ಡ ನಂ.02ರ ಸರ್ವೆ ನಂ.53/3 ಶರಣಪ್ಪಗೌಡ ವೀರನಗೌಡ ಪಾಟೀಲ್ ರವರ ವಸತಿ ವಿನ್ಯಾಸದಲ್ಲಿರುವ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನ, ವಾರ್ಡ ನಂ.15 ಸರ್ವೆ ನಂ.221/2 ಸ್ಥಳೀಯ ಸಂಸ್ಥೆಯ ಆಶ್ರಯ ಜಮೀನಿನಲ್ಲಿ ಕಾಯ್ದಿರಿಸಿದ ನಿವೇಶನ, ವಾರ್ಡ ನಂ.4 ಸರ್ವೆ ನಂ.111/2 ರವಿಕುಮಾರ ಸದಾನಂದಪ್ಪ ಪಾಲನಕರ ರವರ ವಸತಿ ವಿನ್ಯಾಸದಲ್ಲಿರುವ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನ, ವಾರ್ಡ ನಂ.03 ಸರ್ವೆ ನಂ. 53/4, 53/5ರ ಬಸವರಾಜ ಬೈಲಪ್ಪ ಕುದರಿಮೋತಿ ರವರ ವಸತಿ ವಿನ್ಯಾಸದಲ್ಲಿರುವ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನ. ವಾರ್ಡ ನಂ.13 ಸರ್ವೆ ನಂ.453/2 ಮಹಾಂತೇಶ ರುದ್ರಗೌಡ ಪಾಟೀಲ್ ರವರ ವಸತಿ ವಿನ್ಯಾಸದಲ್ಲಿರುವ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನ.
ವಾರ್ಡ ನಂ.07 ಸರ್ವೆ ನಂ. 118/4 ಯಮನಪ್ಪ ಸಣ್ಣ ದುರಗಪ್ಪ ಚೂರಿ ರವರ ವಸತಿ ವಿನ್ಯಾಸದಲ್ಲಿರುವ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನ, ವಾರ್ಡ ನಂ.04 ಸರ್ವೆ ನಂ.110/5ರ ಶಾಂತಕುಮಾರ ಚಂದಾಲಿಂಗಪ್ಪ ಬಾಚಾಲಾಪೂರ ರವರ ವಸತಿ ವಿನ್ಯಾಸದಲ್ಲಿರುವ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನಗಳನ್ನು ಕುಷ್ಟಗಿ ಪಟ್ಟಣದ ಅಂಗನವಾಡಿ ಕೇಂದ್ರಗಳಿಗೆ ಹಂಚಿಕೆ ಮಾಡಲು ಹಾಗೂ ವಾರ್ಡ ನಂ.01ರಲ್ಲಿ ಬರುವ ಸರ್ವೆ ನಂ 58/3 ಸುರ್ವಣಾ ಗಂಡ ಮಲ್ಲಪ್ಪ ಸೂಡಿ ರವರ ವಸತಿ ವಿನ್ಯಾಸದಲ್ಲಿರುವ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನ, ಕುಷ್ಟಗಿ ಪಟ್ಟಣದ ಶರೀಫ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮರು ಕಟ್ಟಡಕ್ಕಾಗಿ ನೀಡಲು 2024ರ ಫೆಬ್ರವರಿ 02ರಂದು ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆ ನೀಡಿದ್ದು, ಈ ನಿವೇಶನಗಳನ್ನು ಸಂಬಂಧಪಟ್ಟವರಿಗೆ ಮಂಜೂರಿ ನೀಡುವಲ್ಲಿ ಸಾರ್ವಜನಿಕರಿಂದ ತಂಟೆ, ತಕರಾರು ಆಕ್ಷೇಪಣೆಗಳಿದ್ದಲ್ಲಿ ತಮ್ಮ ತಕರಾರುಗಳನ್ನು 15 ದಿನಗಳ ಒಳಗಾಗಿ ಕುಷ್ಟಗಿ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬಹುದು ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.