ಭಾಗ್ಯನಗರ : ಬಯಲು ಶೌಚಮುಕ್ತ ಪಟ್ಟಣ ಘೋಷಣೆಗೆ ಆಕ್ಷೇಪಣೆ ಆಹ್ವಾನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 22- ಭಾಗ್ಯನಗರದಲ್ಲಿನ ಪಟ್ಟಣವನ್ನು ಎಲ್ಲಾ ಶಾಲೆಗಳಿಂದ, ಸ್ವಸಹಾಯ ಗುಂಪುಗಳಿAದ ಮತ್ತು ಪಟ್ಟಣ ಪಂಚಾಯತಿ ಸದಸ್ಯರುಗಳಿಂದ ದೃಡೀಕರಣ ಪಡೆದು ಭಾಗ್ಯನಗರವನ್ನು ಒ.ಡಿ.ಎಫ್+ ಬಯಲು ಶೌಚಮುಕ್ತ ಪಟ್ಟಣವೆಂದು ಘೋಷಿಸಲು ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿದೆ.

ಭಾಗ್ಯನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ೫೨೮ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿ ಶೇ.೧೦೦ ರಷ್ಟು ಪ್ರಗತಿ ಸಾಧಿಸಲಾಗಿದೆ ಹಾಗೂ ೦೭ ಸಮುದಾಹಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.

ಸಾರ್ವಜನಿಕರು ಶೌಚಾಲಯಕ್ಕಾಗಿ ಬಯಲು ಹೋಗುವ ಸಂದರ್ಭ ಇಲ್ಲದಿರುವ ಕಾರಣ ಭಾಗ್ಯನಗರ ಪಟ್ಟಣವನ್ನು ಒ.ಡಿ.ಎಫ್+ ಬಯಲು ಶೌಚಮುಕ್ತ ಪಟ್ಟಣವನ್ನಾಗಿ ಘೋಷಿಸಲು ಯೋಗ್ಯ ಕ್ರಮಗಳನ್ನು ಈ ಮೂಲಕ ಕೈಗೊಳ್ಳಲಾಗುತ್ತಿದ್ದು, ಈ ಕುರಿತು ಸಾರ್ವಜನಿಕರಲ್ಲಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಈ ಪ್ರಕಟಣೆ ಪ್ರಕಟಗೊಂಡ ೧೫ ದಿನಗಳೊಳಗಾಗಿ ಭಾಗ್ಯನಗರ ಪಟ್ಟಣ ಪಂಚಾಯತ ಕಾರ್ಯಲಯಕ್ಕೆ ಲಿಖಿತ ಮತ್ತು ಸೂಕ್ತ ದಾಖಲೆಗಳೊಂದಿಗೆ ತಮ್ಮ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಮುಖ್ಯಾಧಿಕಾರಿ ಪ್ರಕಟಣೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!