
17ನೇ ಕೊಪ್ಪಳ ಜಿಲ್ಲಾ ಉತ್ಸವಕ್ಕೆ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತವಾಗಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 23- ನಗರದ ಪ್ರವಾಸಿ ಮಂದಿರದಲ್ಲಿ ನಿನ್ನೆ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಮೂಲಕ ಜರುಗುವ ೧೭ನೇ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ, ಮೂರನೆಯ ಪ್ರಕಾಶಕರ ಸಮ್ಮೇಳನ ಸರ್ವಧ್ಯಕ್ಷರಾದ ಸಾಹಿತಿ, ಶಿಕ್ಷಕ ಶ್ರೀನಿವಾಸ್ ಚಿತ್ರಗಾರ. 17ನೇ ತಿರುಳ್ಗನ್ನಡ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾದ ರಥ ಶಿಲ್ಪಿ, ಶ್ರೀಯುತ ಯಲ್ಲಪ್ಪ ಬಡಿಗೇರ. ಹಾಗೆಯೇ ಮೂರನೇ ಸಾಂಸ್ಕೃತಿಕ ಸಮ್ಮೇಳದ ಸರ್ವಧ್ಯಕ್ಷರಾಗಿ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ರಾಮ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂವರನ್ನು ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನ ನೀಡಿ ಸನ್ಮಾನಿಸಿ ಆಹ್ವಾನಿಸಲಾಯಿತು.
ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯ ರಾಜ್ಯ ಅಧ್ಯಕ್ಷ ಮಹೇಶ್ ಬಾಬು ಸುರ್ವೆ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಉತ್ಸವದ ಜೊತೆ ಜೊತೆಗೆ ಪ್ರಕಾಶಕರ, ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನ ಹಾಗೂ ಯುವ ಸಾಂಸ್ಕೃತಿಕ ಸಮ್ಮೇಳನ ಆಯೋಜಿಸಲಾಗಿದ್ದು ಸಾಹಿತಿಗಳು ಬರಹಗಾರರು ಕಲಾವಿದರು ಚಿಂತಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮ್ಮೇಳನವನ್ನು ಯಶಸ್ವಿ ಯಾಗಿಸಬೇಕೆಂದು ಕರೆ ನೀಡಿದರು.
ನಾಗರಿಕರ ವೇದಿಕೆ ಜಿಲ್ಲಾಧ್ಯಕ್ಷ ಜಿ.ಎಸ್. ಗೋನಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ವೀರಯ್ಯ ಹಿರೇಮಠ. ಮಂಜುನಾಥ ಚಿತ್ರಗಾರ, ಶ್ರೀನಿವಾಸ್ ಚಿತ್ರಗಾರ ಮತ್ತು ಯಲ್ಲಪ್ಪ ಬಡಿಗೇರ. ರಾಮು ಪೂಜಾರ, ಇಂಗ್ಲೀಷ್ ಉಪನ್ಯಾಕರಾದ ಎಸ್.ಎ.ರಜಪೂತ ಮಾತನಾಡಿದರು.
ಈ ಸಂದರ್ಭದಲ್ಲಿ ಛಾಯಾಗ್ರಾಹಕ ಉಮೇಶ್ ಪೂಜಾರ್, ಎಂ.ಎನ್ನ ಕುಂದಗೋಳ, ಉದಯ ತೋಟದ, ರವಿ ಭೋವಿ, ಇತರರು ಉಪಸ್ಥಿತರಿದ್ದರು. ಕೊನೆಯದಾಗಿ ವಂದನಾರ್ಪಣೆಯನ್ನು ಪತ್ರಕರ್ತ ಸಿದ್ದಲಿಂಗಯ್ಯ ಹಿರೇಮಠ ಕೋರಿದರು.