
27 ರಂದು ವಿಕಲಚೇತನರಿಗೆ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 22- ಜಿಲ್ಲೆಯ ವಿಕಲಚೇತನರಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ನ.೨೭ ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿವರ : ವಿಕಲಚೇತನರ ವೈಯಕ್ತಿಕ ಕ್ರೀಡೆಗಳ ವಿವರ : ದೈಹಿಕ ಅಂಗವಿಕಲರಿಗೆ – ಗುಂಡು ಎಸೆತ, ಜಾವೆಲಿನ್ ಥ್ರೋ, ಬಗಲುಗೋಲು ಓಟ. ದೃಷ್ಟಿದೋಷವುಳ್ಳವರಿಗೆ – ಕ್ರೇನೇಸ್, ಗುಂಡು ಎಸೆತ. ಶ್ರವಣದೋಷವುಳ್ಳವರಿಗೆ – ೧೦೦ ಮೀ ಓಟ, ಗುಂಡು ಎಸೆತ, ರಿಂಗ್ ಎಸೆತ. ಬುದ್ಧಿಮಾಂದ್ಯರಿಗೆ – ಮ್ಯೂಜಿಕಲ್ ಚೇರ್, ಚೆಂಡು ಎಸೆತ. ವಿಕಲಚೇತನರ ಗುಂಪು ಕ್ರೀಡೆಗಳು : ಕ್ರಿಕೇಟ್ (ಸಿಟ್ಟಿಂಗ್), ಕ್ರಿಕೇಟ್ (ಸ್ಟಾಂಡಿAಗ್), ಕಬ್ಬಡ್ಡಿ. ವಿಕಲಚೇತನರ ಸಾಂಸ್ಕೃತಿಕ ಸ್ಪರ್ಧೆಗಳು ದೈಹಿಕ ಅಂಗವಿಕಲರಿಗೆ – ಜಾನಪದ ಗೀತೆ, ಭಾವಗೀತೆ. ದೃಷ್ಟಿ ದೋಷವುಳ್ಳವರಿಗೆ – ಜಾನಪದಗೀತೆ, ಭಾವಗೀತೆ. ಶ್ರವಣದೋಷವುಳ್ಳವರಿಗೆ – ಚಿತ್ರಕಲಾ ಸ್ಪರ್ಧೆ. ಬುದ್ಧಿ ಮಾಂದ್ಯರಿಗೆ – ಫ್ಯಾನ್ಸಿ ಡ್ರೆಸ್ (ವೇಷಭೂಷಣ) ಹಮ್ಮಿಕೊಳ್ಳಲಾಗಿದೆ.
ಈ ಎಲ್ಲಾ ಕ್ರೀಡೆಗಳಲ್ಲಿ ಒಬ್ಬ ವ್ಯಕ್ತಿ ಒಂದರಲ್ಲಿ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.
ನ.೨೩ ರಿಂದ ೨೬ರವರೆಗೆ ಹೆಸರನ್ನು ನೊಂದಾಯಿಸಲು ತಾಲೂಕಿನ ವಿವಿದೋದ್ದೇಶ ಪುರ್ನವಸತಿ ಕಾರ್ಯಕರ್ತರ ಹತ್ತಿರ ನೊಂದಾಯಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ತಿಳಿಸಲಾಗಿದೆ.