2c136fae-be38-4577-97e1-318669006cc9

27ರಂದು ಕುಷ್ಟಗಿ ಹಾಗೂ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

ಕರುನಾಡ ಬೆಳಗು ಸುದ್ದಿ
ಕುಷ್ಟಗಿ, 25- ಪಟ್ಟಣದ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯ ನಿರ್ವಹಣೆ ನಿಮಿತ್ಯ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಪ್ರದೇಶದಲ್ಲಿ ಜು 27, ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಕುಷ್ಟಗಿ ಪಟ್ಟಣದ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಗೊಳ್ಳುವ ಪ್ರದೇಶಗಳಾದ ಕುಷ್ಟಗಿ ಪಟ್ಟಣ, ನಿಡಶೇಶಿ, ಮದಲಗಟ್ಟಿ, ಬ್ಯಾಲಿಹಾಳ, ಬೆಂಚಮಟ್ಟಿ, ಕೊರಡಕೇರಾ, ಹಿರೇನಂದಿಹಾಳ, ಹಿರೇಬನ್ನಿಗೋಳ, ಕನಕೊಪ್ಪ, ಬಿಸನಾಳ, ದೊಣ್ಣೆಗುಡ್ಡ, ಚಿಕ್ಕನಂದಿಹಾಳ, ಯಲಬುರ್ತಿ, ಶಾಖಾಪುರ, ನೆರೆಬೆಂಚಿ, ಕುರುಬನಾಳ, ಹಿರೇಮನ್ನಾಪುರ, ಕಂದಕೂರು, ಗುಮಗೆರಾ, ನಾಗರಾಳ, ಗಂಗನಾಳ, ಹಂಚಿನಾಳ ಇತರ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಕೃಷಿ ಪಂಪ್ ಸೆಟ್ ಗಳು ಹೊಂದಿರುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೂಚನೆ : ತ್ರೈಮಾಸಿಕ ಕಾರ್ಯನಿರ್ವಹಣೆ ನಿಮಿತ್ತ ಕೈಗೊಂಡಿರುವ ಕೆಲಸವೂ ಬೇಗನೆ ಮುಕ್ತಾಯಗೊಂಡರೆ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ತಿ ಕಾರ್ಯ ಮಾಡಬಾರದು ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಕಂಪನಿ ಜವಾಬ್ದಾರಿ ಆಗಿರುವುದಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!