ನಗರಸಭೆ ಉಪ ಚುನಾವಣೆ ; ಬಿಜೆಪಿ / ಕಾಂಗ್ರೆಸ್ ತಲಾ ಒಂದು ಸ್ಥಾನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 26- ನಗರಸಭೆಯ ಎರಡು ವಾರ್ಡ್‌ಗಳ ಉಪಚುನಾವಣೆಯ ನಿರಿಕ್ಷೇಯಂತೆ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಒಂದು ಸ್ಥಾನದಲ್ಲಿ ಜಯದ ನಗೆ ಬಿರಿವೆ.
ಮಂಗಳವಾರ ಬೆಳಿಗ್ಗೆ ಕೊಪ್ಪಳದಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು ಬಿಜೆಪಿ 8ನೇ ವಾರ್ಡಿನಲ್ಲಿ ಹಾಗೂ ಕಾಂಗ್ರೆಸ್‌ 11 ನೇ ವಾರ್ಡಿನಲ್ಲಿ ಜಯಗಳಿಸಿದ್ದಾರೆ.
ವಾರ್ಡ 11; ತೀವ್ರ ಕುತುಹಲ ಕೇರಳಿಸಿದ್ದ ಉಪ ಚುನಾವಣೆಯಲ್ಲಿ ಲೋಕಸಭಾ ಚುನಾವಣಾ ಪೂರ್ವದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ರಾಜಶೇಖರ ಆಡೂರ ಉಪಚುನಾವಣೆಯಲ್ಲಿ ಗೆದ್ದು ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.
8 ವಾರ್ಡ ಬಿಜೆಪಿ ಗೆಲವು ; ಮಹಿಳೆಗೆ ಮೀಸಲಾಗಿದ್ದ 8ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಕವಿತಾ ಬಸವರಾಜ ಗಾಳಿ ಚಲಾವಣೆಯಾಗಿದ್ದ ಒಟ್ಟು 928 ಮತಗಳಲ್ಲಿ 486 ಮತಗಳನ್ನು ಪಡೆದರೆ,ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರೇಣುಕಾ ಕಲ್ಲಾಕ್ಷಪ್ಪ ಪೂಜಾರ 436 ಮತಗಳನ್ನು ಪಡೆದುಕೊಂಡರು. ಆರು ಮತಗಳು ನೋಟಾಕ್ಕೆ ಬಂದಿವೆ.

ಎಂಟನೇ ವಾರ್ಡ್‌ಗೆ ಹಿಂದೆ ಸದಸ್ಯೆಯಾಗಿದ್ದ ಸುನಿತಾ ಗಾಳಿ ಸರ್ಕಾರಿ ನೌಕರಿಗೆ ನೇಮಕವಾಗಿದ್ದರಿಂದಈ ಸ್ಥಾನ ತೆರವಾಗಿತ್ತು ಹಿಂದೆ ಕಾಂಗ್ರೆಸ್ ಇಲ್ಲಿ ಗೆಲವು ಸಾದಿಸಿತ್ತು ಉಪಚುನಾವಣೆಯಲ್ಲಿ ಬಿಜೆಪಿ ವಿಜಯದ ಬಾವುಟ ಹಾರಿಸಿದೆ.

 

Leave a Reply

Your email address will not be published. Required fields are marked *

error: Content is protected !!