2c136fae-be38-4577-97e1-318669006cc9

ಪೆಟ್ರೋಲಿಯಂ ರಿಟೈಲ್ ಔಟ್‌ಲೇಟ್ ಸ್ಥಾಪನೆ : ಆಕ್ಷೇಪಣೆ ಸಲ್ಲಿಸಲು ಅವಕಾಶ

ಕರುನಾಡ ಬೆಳಗು ಸುದ್ದಿ

ವಿಜಯನಗರ, 26- ಬಳ್ಳಾರಿಯ ಡಿವಿಜನಲ್ ರಿಟೇಲ್ ಸೇಲ್ಸ್ ಹೆಡ್ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ Divisional Retail Sales Head, Indian Oil Corporation Limited, Bellary ಇವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ತೆಲಗಿ ಹೋಬಳಿಯ ಕುಂಚೂರು ಗ್ರಾಮದ ಸರ್ವೆ ನಂ.208ರಲ್ಲಿ ಪೆಟ್ರೋಲಿಯಂ ರಿಟೈಲ್ ಜೌಟಲೇಟ್ ಸ್ಥಾಪನೆ ಮಾಡಲು ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.

ಈ ಕಂಪನಿಯವರು, ಅರ್ಜಿದಾರರಾದ ಶ್ರೀ.ಕೆ.ವೆಂಕಾರೆಡ್ಡಿ ತಂದೆ ಕೆ.ಗಿರಿರಾಜ ರೆಡ್ಡಿ, ಅರಸನಾಳು ಗ್ರಾಮ, ಹರಪನಹಳ್ಳಿ ತಾಲ್ಲೂಕು ಇವರನ್ನು ಫ್ರಾಂಚೈಸ್ಸಿಯನ್ನಾಗಿ ನೇಮಕ ಮಾಡಿಕೊಂಡಿರುತ್ತಾರೆ. ಪ್ರಯುಕ್ತ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ತೆಲಗಿ ಹೋಬಳಿ, ಕುಂಚೂರು ಗ್ರಾಮದ ಸರ್ವೆ ನಂ.208ರಲ್ಲಿ ಪೆಟ್ರೋಲಿಯಂ ರಿಟೈಲ್ ಜೌಟಲೇಟ್ ಸ್ಥಾಪನೆ ಮಾಡಲು ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವ ಕುರಿತಂತೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಇದ್ದಲ್ಲಿ ಈ ಪ್ರಕಟಣೆ ಪ್ರಕಟಿಸಿದ ದಿನಾಂಕದಿಂದ ಹತ್ತು ದಿನದೊಳಗಾಗಿ ಆಕ್ಷೇಪಣೆಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಇಮೇಲ್ ಐಡಿ vijayanagaradc@gmail.com ವಿಜಯನಗರ ಜಿಲ್ಲೆ, ಹೊಸಪೇಟೆ ಹಾಗೂ ನೇರವಾಗಿ ಈ ಕಾರ್ಯಾಲಯದ ಎಂಎಜಿ-2 ಶಾಖೆಗೆ ಸಲ್ಲಿಸಲು ಈ ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸಲಾಗಿದೆ ಎಂದು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!