
ಪೆಟ್ರೋಲಿಯಂ ರಿಟೈಲ್ ಔಟ್‌ಲೇಟ್ ಸ್ಥಾಪನೆ : ಆಕ್ಷೇಪಣೆ ಸಲ್ಲಿಸಲು ಅವಕಾಶ
ಕರುನಾಡ ಬೆಳಗು ಸುದ್ದಿ
ವಿಜಯನಗರ, 28- ಬಳ್ಳಾರಿಯ ಡಿವಿಜನಲ್ ರಿಟೇಲ್ ಸೇಲ್ಸ್ ಹೆಡ್ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಇವರು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ಕಸಬಾ ಹೋಬಳಿಯ ಹೊಸಕೇರಿ ಗ್ರಾಮದ ಸರ್ವೆ ನಂ.೧೭೮/*/೩ ರಲ್ಲಿ ಪೆಟ್ರೋಲಿಯಂ ರಿಟೈಲ್ ಜೌಟಲೇಟ್ ಸ್ಥಾಪನೆ ಮಾಡಲು ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.
ಕಾಳಾಪುರದ ಚಿರಂಜೀವಿ ತಂದೆ ಕೆ.ಮಾರೆಪ್ಪ ವಾಸ: ೧೧ನೇ ವಾರ್ಡ್, ತಾಲೂಕು ಪಂಚಾಯತಿ ಕಚೇರಿ ಹತ್ತಿರ, ಹಗರಿಬೊಮ್ಮನಹಳ್ಳಿ ಪಟ್ಟಣ ಮತ್ತು ತಾಲೂಕು ಇವರನ್ನು ಫ್ರಾಂಚೈಸ್ಸಿಯನ್ನಾಗಿ ಕಂಪನಿ ನೇಮಕ ಮಾಡಿದೆ.
ಹೊಸಕೇರಿ ಗ್ರಾಮದ ಸರ್ವೆ ನಂ. ೧೭೮/*/೩ ರಲ್ಲಿ ಪೆಟ್ರೋಲಿಯಂ ರಿಟೈಲ್ ಜೌಟಲೇಟ್ ಸ್ಥಾಪನೆ ಮಾಡಲು ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಲು ಸಾರ್ವಜನಿಕರಿಂದ ಆಕ್ಷೇಪಣೆಗಳು ಇದ್ದಲ್ಲಿ ಹತ್ತು ದಿನದೊಳಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಇಮೇಲ್ ಐಡಿ viರಿಚಿಥಿಚಿಟಿಚಿgಚಿಡಿಚಿಜಛಿ@gmಚಿiಟ.ಛಿom ಅಥವಾ ಹೊಸಪೇಟೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎಂಎಜಿ-೨ ಶಾಖೆಗೆ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.