
ಕೊಟ್ಟ ಮಾತಿನಂತೆ ನಮ್ಮ ಸರಕಾರ ನಡೆದುಕೊಂಡಿದೆ : ಶಾಸಕ ರಾಯರೆಡ್ಡಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 27- ರಾಜ್ಯ ಸರಕಾರವು ರೈತರಿಗೆ ಹಲವಾರು ಯೋಜನೆಯನ್ನು ಜಾರಿಗೊಳಿಸುವ ಮೂಲಕ ರೈತರ ಹಿತಕಾಪಾಡಿದೆ ಯಾವ ರಾಜ್ಯದಲ್ಲಿ ಮಾಡದ ೫ ಗ್ಯಾರಂಟಿ ಯೋಜನೆಗಳನ್ನುನಮ್ಮ ರಾಜ್ಯದಲ್ಲಿ ಜಾರಿಗೊಳಿಸಿ ಅಂತ್ಯತ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿದರು.
ಪಟ್ಟಣದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಬಿತ್ತನೆಯ ಬೀಜಗಳನ್ನು ರೈತರಿಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೈತರಿಗೆ ಬೀತನೆ ಬೀಜ ಗೊಬ್ಬರ ಕೊರತೆಯಾಗದಂತೆ ರೈತ ಸಂಪರ್ಕ ಕೇಂದ್ರಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ದಾಸ್ತಾನು ಮಾಡಬೇಕು. ಅಧಿಕಾರಿಗಳು ರೈತರಿಗೆ ಗುಣಮಟ್ಟದ ಬೀತನೆ ಬೀಜ ರಸಗೊಬ್ಬರವನ್ನು ಪ್ರಾಮಾಣಿಕವಾಗಿ ಮುಟ್ಟಿಸುವಂತ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನುಡದಂತೆ ನಡೆದುಕೊಂಡ ನಮ್ಮ ಕಾಂಗ್ರೆಸ್ ಸರಕಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ರಾಜ್ಯ ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪಾಸ್, ಮನೆಗಳಿಗೆ ವಿದ್ಯುತ್ ಉಚಿತ, ಅಕ್ಕಿಭಾಗ್ಯ, ಗ್ರಹಲಷ್ಮಿ ಎಲ್ಲಾ ಯೋಚನೆಗಳನ್ನು ಜಾರಿಗೊಳಿಸುವ ಮೂಲಕ ಭಾಗ್ಯದಾತ ಮುಖ್ಯಮಂತ್ರಿ ಎಂದರು.
ನಾನು ೧೯೮೫ ರಿಂದ ಈ ಕ್ಷೇತ್ರದ ಶಾಸಕನಾಗಿ, ಸಂಸದರಾಗಿ, ಸಚಿವನಾಗಿ ಸಾಕಷ್ಟು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ ಅದರಲ್ಲಿ ರಾಜ್ಯದ ಜನತೆ ಮಚ್ಚಿದ ಉತ್ತಮ ಮುಖ್ಯಮಂತ್ರಿ ಎಂದರು.
ಈ ಹಿಂದೆ ಕ್ಷೇತ್ರದಲ್ಲಿ ಇಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆ ಕಳಪೆ ಕಾಮಗಾರಿಯಾಗಿದೆ ಈಗಾಗಲೇ ಅಳವಡಿಸಲಾದ ಪೈಪ್ ಲೈನುಗಳು ಒಡದುಹೋಗಿವೆ ಗುಣಮಟ್ಟವಿಲ್ಲದೆ ಟಿಸಿ ಟಾನ್ಸಪಾರಂಗಳು ಸುಟ್ಟು ಹೋಗಿವೆ ಆದ್ದರಿಂದ ಕೆರೆಗಳಿಗೆ ನೀರು ತುಂಬಿಸಲು ವಿಳಂಬವಾಗಿದೆ ಅವುಗಳನ್ನು ಗುಣಮಟ್ಟದಿಂದ ದುರಸ್ತಿಗೊಳಿಸಿ ಮುಂಬರುವ ಏಪ್ರಿಲ್-ಮೇ ತಿಂಗಳಲ್ಲಿ ಕೆರೆಗಳಿಗೆ ನೀರು ತುಂಬಿಸಲಾಗುವುದು ಇನ್ನೂ ದೊಡ್ಡ ಕೆರೆ ನಿರ್ಮಾಣಕ್ಕೆ ಜನರ ಭೂಮಿ ನೀಡುತ್ತಿಲ್ಲ ಕೆಲವು ಗ್ರಾಮಗಳಲ್ಲಿ ಮುಂದಿನ ವರ್ಷದಲ್ಲಿ ಹೊಸ ಕೆರೆ ನಿರ್ಮಾಣ ಮಾಡಲಾಗುವುದು ರಾಜ್ಯ ಸರ್ಕಾರ ರೈತರಿಗೆ ರಿಯಾಯಿತಿ ದರದಲ್ಲಿ ಬೀಜಗಳನ್ನು ನೀಡುತ್ತಿದ ಇದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರದಾನವಾಗಿದೆ ಎಂದು ಶಾಸಕ ರಾಯರಡ್ಡಿಯವರು ಹೇಳಿದರು.
ಕೃಷಿ ಇಲಾಖೆಯ ತಾಲೂಕು ಅಧಿಕಾರಿ ಪ್ರಮೋದ್ ತುಂಬಳ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂಗಾರು ಬಿತ್ತನೆಗೆ ಬೇಕಾದ ಕಡಲೆ ಬೀಜಗಳು ಸಂಗ್ರಹಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ವೀರನಗೌಡ್ರ ಪೋಲಿಸ್ ಪಾಟೀಲ್ ಬಳೂಟಗಿ, ತಿಮ್ಮಣ್ಣ ಚವಡಿ, ಅತ್ತರಸಾಬ ಖಾಜಿ, ವೀರನಗೌಡ ಬನಪ್ಪಗೌಡ್ರ, ಶಿವಪ್ಪ ಕೊಂಡಗುರಿ, ಎಸ್.ಜಿ.ಚಿಂಚಲಿ, ರೇವಣಪ್ಪ ಹಿರೇಕುರಬರ, ಸುಧೀರ ಕೂರ್ಲಹಳ್ಳಿ, ಈರಪ್ಪ ಕುಡಗುಂಟಿ, ಛತ್ರಪ್ಪ ಚಲುವಾದಿ, ಎಂ.ಎ.ಸಮೀರ ಮತ್ತು ಇಲಾಖೆಯ ಸಿಬ್ಬಂದಿಗಳು ಹಾಗು ರೈತರು ಮತ್ತು ಇತರರು ಭಾಗವಹಿಸಿದ್ದರು.