
ಸಿರುಗುಪ್ಪ : ದೊಡ್ಡ ಹಳ್ಳದ ನೀರಿನಲ್ಲಿ ಮುಳುಗಿದ ಭತ್ತದ ಗದ್ದೆಗಳು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 21- ತಾಲೂಕಿನಲ್ಲಿ ಹರಿಯುವ ದೊಡ್ಡಹಳ್ಳದ ನೀರು ನೂರಾರು ಎಕರೆ ಬತ್ತದ ಗದ್ದೆಗಳಿಗೆ ನುಗ್ಗಿದೆ ಗದ್ದೆಗಳಲ್ಲಿ ಎಲ್ಲೆಲ್ಲಿಯೂ ನೀರು ಕಂಡು ಬರುತ್ತದೆ.
ಸಿರುಗುಪ್ಪ ತಾಲೂಕಿನ ಕರೂರು, ದರೂರು, ಹಾಗಲೂರು, ಹೊಸಳ್ಳಿ, ಗೋಸಬಾಳ, ಬೂದುಗುಪ್ಪ ಗ್ರಾಮಗಳ ರೈತರು ನಾಟಿ ಮಾಡಿದ ನೂರಾರು ಎಕರೆ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ ಭತ್ತದ ಗದ್ದೆಗಳು ನೀರಿನ ಕೆರೆಗಳಂತೆ ಕಂಡು ಬರುತ್ತವೆ.
ಸಿರುಗುಪ್ಪ ತಾಲೂಕಿನಲ್ಲಿ ಮಳೆಗಾಲ ಆರಂಭವಾಗಿ ಮೂರು ತಿಂಗಳಾದರೂ ದೊಡ್ಡ ಹಳ್ಳದ ನದಿ ಪಾತ್ರದಲ್ಲಿ ದೊಡ್ಡ ಮಳೆಯಾಗಿರಲಿಲ್ಲ ಆದರೆ ಕಳೆದ ತಿಂಗಳು ಸುರಿದ ಸಾಮಾನ್ಯ ಮಳೆಯಿಂದ ಹರಿದು ಬಂದ ನೀರನ್ನು ರೈತರು ಬಳಸಿಕೊಂಡು ಇತ್ತೀಚೆಗಷ್ಟೇ ಭತ್ತ ನಾಟಿ ಕಾರ್ಯವನ್ನು ಮಾಡಿದ್ದರು.
ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರಿಗೆ ಸುರಿದ ಭಾರಿ ಮಳೆಯಿಂದಾಗಿ ಹಳ್ಳ ಭರ್ತಿಯಾಗಿ ಹರಿಯುತ್ತಿದೆ, ಭತ್ತದ ಗದ್ದೆಗಳಿಗೆ ಹಳ್ಳದ ನೀರು ನುಗ್ಗಿದೆ ಇದರಿಂದಾಗಿ ಗದ್ದೆಗಳ ಒಡ್ಡುಗಳು ಎಲ್ಲೆಂದಿರಲ್ಲೇ ಹೊಡೆದು ಹೋಗಿದೆ ಇತ್ತೀಚಿಗೆ ಭತ್ತವನ್ನು ನಾಟಿ ಮಾಡಿದ್ದೇವೆ ಹಳ್ಳದ ಪಾತ್ರದಲ್ಲಿ ದೊಡ್ಡ ಮಳೆಯಾಗಿದ್ದು ನಾಟಿ ಮಾಡಿದ ನಮ್ಮ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ ಎಂದು ಕರೂರು ಗ್ರಾಮದ ರೈತರು ಹೇಳಿದರು.