
ವೈದ್ಯರ ನಿರ್ಲಕ್ಷ ಐದು ವರ್ಷದ ಮಗು ಸಾವು :ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಕರುನಾಡ ಬೆಳಗು ಸುದ್ದಿ
ವಿಜಯನಗರ, 28- ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ೫ ವರ್ಷದ ಕುಶಲ ಎನ್ನುವ ಮಗು ವೈದ್ಯರ ನಿರ್ಲಕ್ಷದಿಂದ ಮೃತಪತ್ತಿದ್ದಾನೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಹೊಸಪೇಟೆಯ ಕಮಲಾಪುರ ಪಟ್ಟಣದ ಅಂಬೇಡ್ಕರ್ ನಗರದ ಶಂಕ್ರಮ್ಮ ಗಂಡ ಶಾಂತಕುಮಾರ ಇವರ ಮಗು ಕುಶಲಾ ತೀರ್ವ ಜ್ವರದಿಂದ ಬಳಲುತ್ತಿದ್ದು ತಕ್ಷಣವೇ ಹೊಸಪೇಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಾದ 100 ಹಾಸಿಗೆ ಆಸ್ಪತ್ರೆಗೆ ಬೆಳಗ್ಗೆ 7 ಘಂಟೆ ಸಮಯಕ್ಕೆ ಕರೆ ತಂದಾಗ ಮಗುವನ್ನು ಪರೀಕ್ಷಿಸಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಹಾಗಾಗಿ ಇಲ್ಲಿನ ಖಾಸಗಿ ಅಥವಾ ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ನಂತರ ಪೋಷಕರು ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆ ತಂದಿದ್ದಾರೆ ಖಾಸಗಿ ಆಸ್ಪತ್ರೆಯಲ್ಲಿ ವೈಧ್ಯರಿಲ್ಲದೆ ಮರಳಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಆಸ್ಪತ್ರೆಗೆ ಬರುವ ಮಧ್ಯದಲ್ಲಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿ ಮಗು ಮೃತಪಟ್ಟಿದೆ ಈ ಸಾವಿಗೆ ೧೦೦ ಹಾಸಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ ಮುಖ್ಯ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಆಸ್ಪತ್ರೆಗೆ ಧಾವಿಸಿದ ಜಿಲ್ಲಾ ವೈದ್ಯಾಧಿಕಾರಿ (DHO) ಶಂಕರ್ ನಾಯ್ಕ್ ಘಟನೆ ಕುರಿತು ಮಾಹಿತಿ ಪಡೆದು ಮಾಧ್ಯಮದೊಂದಿಗೆ ಮಾತನಾಡಿ ಥಲಸ್ಸೆಮಿಯಾ ರೋಗವು ಹಿಮೋಗ್ಲೋಬಿನ್ ಉತ್ಪಾದನೆಯಲ್ಲಿ ರಕ್ತಹೀನತೆ ಕಡಿಮೆಯಾದ ಸಾಮಾನ್ಯ ಆನುವಂಶಿಕ ರಕ್ತದ ಕಾಯಿಲೆಯಾಗಿದೆ. ಇದು ರಕ್ತ ಹೀನತೆಯಿಂದ ಹಳದಿ ಜಾಂಡೀಸ್ ಬರುವ ಕಾಯಿಲೆಯಾಗಿದ್ದು ಇದರಿಂದ ಪ್ರತಿ ಗಂಟೆಗೂ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.ಇದರಿಂದ ಕೆಂಪು ರಕ್ತ ಕಣಗಳು ಕಡಿಮೆಯಾಗಿ ಸಾವು ಬರುವ ಸಂಭವವಿರುತ್ತದೆ. ನಿಗದಿತ ಸಮಯಕ್ಕೆ ಕಾಯಿಲೆಗೆ ತಕ್ಕಂತೆ ರಕ್ತ ನೀಡಬೇಕಾಗುತ್ತದೆ.
ಇಂತಹ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು ವಿಜಯನಗರ ಜಿಲ್ಲೆಯಲ್ಲಿ ೧೨ ಜನ ಇದ್ದಾರೆ ಅವರು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರಾಮಾಗಿದ್ದಾರೆ ಯಾವ ವೈದ್ಯಧಿಕಾರಿಗಳಿಗೆ ಕೂಡ ಮಕ್ಕಳನ್ನು ಕೊಲ್ಲುವ ಮನಸ್ಥಿತಿ ಇರುವುದಿಲ್ಲ ಆದರೂ ಕೂಡ ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಈ ಕುರಿತು ಮೃತ ಮಗುವಿನ ತಾತ ಹನುಮಂತಪ್ಪ ಪತ್ರಿಕೆಯೊಂದಿಗೆ ಮಾತನಾಡಿ ೨೪ ನೇ ತಾರೀಕು ಇದೇ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಿದ್ದೆವು. ಆ ಸಮಯದಲ್ಲಿ ವೈದ್ಯಾಧಿಕಾರಿ ಡಾಕ್ಟರ್ ಶ್ರೀನಿವಾಸ್ ನನ್ನ ಮೊಮ್ಮಗನನ್ನು ಚೆನ್ನಾಗಿ ನೋಡಿ ಕಾಯಿಲೆಗೆ ಚಿಕಿತ್ಸೆ ನೀಡಿ ಮಗು ಆರಾಮಾಗಿದ್ದಾನೆ ಎಂದು ಹೇಳಿ ಕಳಿಸಿದ್ದರು.
ನಾಲ್ಕು ದಿನಗಳ ಕಾಲ ಮಗು ಆಟವಾಡಿಕೊಂಡು ಚೆನ್ನಾಗಿತ್ತು ನಿನ್ನೆ ರಾತ್ರಿ ಮಗುವಿಗೆ ಜ್ವರ ಬಂದು ಬೆಳಗ್ಗೆ ೭:೦೦ಕ್ಕೆ ಆಸ್ಪತ್ರೆಗೆ ಬಂದರೆ ತುರ್ತು ಚಿಕಿತ್ಸೆ ನೀಡಲು ವೈದ್ಯರು ಇರಲಿಲ್ಲ. ನರ್ಸ್ಗಳನ್ನು ಕೇಳಿದರೆ ಡಾಕ್ಟರು ೧೧:೦೦ಗಂಟೆಗೆ ಬರುತ್ತಾರೆ ಎಂದು ಉಡಾಫೆ ಉತ್ತರ ಕೊಟ್ಟಿರುತ್ತಾರೆ. ಇದರಿಂದ ವಿಚಲಿತಗೊಂಡ ನನ್ನ ಮಗ ಶಾಂತಕುಮಾರ್ ಖಾಸಗಿ ಆಸ್ಪತ್ರೆಗೆ ಮಗುವನ್ನು ತೆಗೆದುಕೊಂಡು ಹೋಗಿದ್ದಾನೆ. ಖಾಸಗಿ ಆಸ್ಪತ್ರೆ ವೈದ್ಯಾಧಿಕಾರಿ ಇಲ್ಲದಿದ್ದರೂ ಕೂಡ ಫೋನ್ ಮುಖಾಂತರ ಚಿಕಿತ್ಸೆ ನೀಡಲು ಮುಂದಾದರು. ನಂತರ ಅಲ್ಲಿನ ನರ್ಸ್ ಮತ್ತೆ ಸರ್ಕಾರಿ ಆಸ್ಪತ್ರೆಗೆ ಅರ್ಜೆಂಟಾಗಿ ಹೋಗಲು ತಿಳಿಸಿದರು.
ಈ ರೀತಿ ಸಮಯ ವಿಳಂಬವಾಗಿದ್ದಕ್ಕಾಗಿ ನನ್ನ ಮೊಮ್ಮಗ ಸಾವನ್ನಪ್ಪಿದ್ದಾನೆ ಎಂದು ಗಳಗಳನೆ ಅತ್ತು ನೋವು ತೋಡಿಕೊಂಡರು.
೧೦೦ ಹಾಸಿಗೆ ಆಸ್ಪತ್ರೆ ಆವರಣದಲ್ಲಿ ಮಗು ಸಾವಿನ ಆಕ್ರಂದನ ಮುಗಿಲು ಮುಟ್ಟುವಂತಿತ್ತು.