1

ಅಂಬೇಡ್ಕರ್ ಕಾಲೋನಿಯಲ್ಲಿ ಕಾಯಕಲ್ಪಕ್ಕೆ ಎದುರು ನೋಡುತ್ತಿರುವ ಜನರು

ಕರುನಾಡ ಬೆಳಗು ಸುದ್ದಿ

* ಲಕ್ಕಿಮರದ ಮಂಜುನಾಥ

ಮರಿಯಮ್ಮನಹಳ್ಳಿ, 8- ಪಟ್ಟಣದ 1,2 ಮತ್ತು 15 ವಾರ್ಡ್ಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯದವರು ೨,೫೦೦ಸಾವಿರ ಜನಸಂಖ್ಯೆ ಇದ್ದು ೧, ೨ ಮತ್ತು ೧೫ ವಾರ್ಡ್ಗಳಲ್ಲಿ ೩೦ ವರ್ಷಗಳ ಹಿಂದೆ ಅಂದು ಜಿಲ್ಲಾ ಪಂಚಾಯತನಿ0ದ ನಿರ್ಮಿಸಿದ್ದ ಚರಂಡಿಗಳೇ ಈಗಲೂ ಇದ್ದು. ಸುಮಾರು ವರ್ಷಗಳಿಂದ ಇವುಗಳು ಹಾಳಾಗಿದ್ದು ಕೆಲವುಕಡೆ ಹುದುಗಿಹೋಗಿ ಗಿಡ-ಗಂಟೆಗಳು ಬೆಳೆದಿವೆ. ಸ್ಥಳೀಯ ಸಂಸ್ಥೆಗಳು ಮತ್ತು ಜನರಿಂದ ಆಯ್ಕೆಯಾದ ಶಾಸಕರು ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ಎಸ್ಸಿಪಿ, ನಾಗರೋತ್ಥಾನ, ೨೪.೧೦, ೭.೨೫ ಮತ್ತು ಇತರೆ ಯೋಜನೆಯ ಅನುದಾನಗಳನ್ನು ಬಳಸಿ ಅಭಿವೃದ್ಧಿ ಪಡಿಸಬೇಕಿದೆ. ಇಂದಿಗೂ ಶಾಸಕರು ಸಮರ್ಪಕವಾಗಿ ನಮ್ಮ ಏರಿಯಾಗಳಲ್ಲಿ ಕೆಲಸಮಾಡುತ್ತಿಲ್ಲವೆಂದು ಅಂಬೇಡ್ಕರ್ ಕಾಲೋನಿಯ ಸ್ಥಳೀಯ ನಿವಾಸಿಗಳುಹಲವು ಅಭಿವೃದ್ಧಿಯ ಕಾಯಕಲ್ಪಕ್ಕೆ ಎದುರು ನೋಡುತ್ತಿದ್ದೇವೆ ಎಂದು ಇಲ್ಲಿನ ಜನರು ಮಾಹಿತಿ ನೀಡಿ ಬೇಸರ ವ್ಯಕ್ತಪಡಿಸಿದರು.

ಕಾಲಕ್ಕೆ ತಕ್ಕಂತೆ ಚರಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ ನೀರಿನ ಹರಿವಿಗೆ ಅನುಕೂಲ ಮಾಡಬೇಕು ಇದುವರೆಗೂ ಆ ಕೆಲಸವಾಗಿಲ್ಲ ಕೇವಲ ರಸ್ತೆಗಳನ್ನು ನಿರ್ಮಿಸಿದರೆ ಸಾಲದು ಚರಂಡಿಗಳನ್ನು ನಿರ್ಮಿಸಿ ನಮ್ಮ ಆರೋಗ್ಯ ಸುಸ್ಥಿತಿಯಲ್ಲಿಟ್ಟುಕೊಳ್ಳಲು ಜನಪ್ರತಿನಿಧಿಗಳು ಅಧಿಕಾರಿಗಳು ಆಧ್ಯತೆಕೊಡಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಅಭಿಮತವಾಗಿದೆ.

ನಿಂತ ಚರಂಡಿಗಳು : ಬಹುತೇಕ ಚರಂಡಿಗಳು ಹೊಸದಾಗಿ ನಿರ್ಮಿಸದೆ ಇರುವುದರಿಂದ ೩೦ವರ್ಷಗಳ ಹಿಂದೆ ನಿರ್ಮಿಸಿದ ಹಳೇ ಚರಂಡಿಗಳು ಮಣ್ಣು ಇತರೆ ತ್ಯಾಜ್ಯ ತುಂಬಿ ನೀರು ಮುಂದಕ್ಕೆ ಹೋಗದೆ ಮನೆಗಳ ಮುಂದೆ ನಿಂತು ಕೊಳಕಾಗಿ ದುರ್ನಾತ ಬೀರುತ್ತಿದೆ. ಇದರಿಂದ ಜನರಲ್ಲಿ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮೂಲದಿಂದ ಆರ್ಥಿಕವಾಗಿ ಹಿಂದುಳಿದು ಕೂಲಿ ಮಾಡಿ ಜೀವಿಸುವ ಜನಾಂಗದವರಾಗಿದ್ದು. ಗಂಭೀರ ಆರೋಗ್ಯ ಸಮಸ್ಯೆ ಕಂಡು ಬಂದಾಗ ಸಾವೇ ಗತಿ ಎಂದು ಕೈಚೆಲ್ಲಿ ಕೂರುವ ಪರಿಸ್ಥಿತಿ ಇಲ್ಲಿನ ಜನಗಳದ್ದಾಗಿದೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ರಸ್ತೆ ಮತ್ತು ಚರಂಡಿಯನ್ನು ವೈಜ್ಞಾನಿಕವಾಗಿ ನಿರ್ಮಿಸುವ ಅಗತ್ಯವಿದೆ ಎನ್ನುವುದು ಇಲ್ಲಿಯ ಜನರ ಆಶಯವಾಗಿದೆ .

ಕೊಳಚೆ ಪ್ರದೇಶಕ್ಕೆ ಯ್ಯೋಗ್ಯತೆ : ಕೊಳಚೆ ಪ್ರದೇಶವಾಗಿರುವ ಈ ಪರಿಶಿಷ್ಟರ ಕಾಲೋನಿ ಅಧಿಕೃತವಾಗಿ ಕೊಳಚೆ ಪ್ರದೇಶಕ್ಕೆ ಸೇರುವ ಎಲ್ಲಾ ಯ್ಯೋಗ್ಯತೆ ಗಳಿದ್ದರೂ ಇಲ್ಲಿಯವರೆಗೆ ಸೇರಿಸದಿರುವುದು ವಿಪರ್ಯಾಸ.

ಇಲ್ಲಿನ ಜನರು ವಾಸಿಸುವುದಕ್ಕೆ ಬೇರೆ ಸ್ಥಳಾವಕಾಶವಿಲ್ಲದೆ ೧೦ರಿಂದ ೧೫ಜನ ಮೂರು ನಾಲ್ಕು ಕುಟುಂಬಗಳು ಒಂದೇ ಮನೆಯಲ್ಲಿ ಸ್ಥಾಳಾವಕಾಶವಿಲ್ಲದೆ ಇಕ್ಕಟ್ಟಿನಲ್ಲಿ ವಾಸಿಸುತ್ತಿವುದು ಶೋಚನಿಯ ಸಂಗತಿ. ಅಧಿಕಾರಿಗಳು ಈ ಏರಿಯಾಗಳನ್ನು ಅಧಿಕೃತವಾಗಿ ಸರ್ಕಾರದ ಕೊಳಚೆ ಪ್ರದೇಶಾಭಿವೃದ್ಧಿ ವ್ಯಾಪ್ತಿಗೆ ಸೇರಿಸಿ ನಿವೇಶನ ಮತ್ತು ಮನೆಗಳನ್ನು ಕೊಟ್ಟು, ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರ ಅಭಿವೃದ್ಧಿಗಾಗಿ ಗಮನ ಕೊಡಬೇಕೆಂದು ಇಲ್ಲಿನ ಜನಗಳು ಅಗ್ರಹಿಸಿದ್ದಾರೆ.

ನಮ್ಮ ಕ್ಷೇತ್ರದ ಶಾಸಕರು ಗೆದ್ದ ನಂತರ ಒಮ್ಮೆಯೂ ನಮ್ಮ ವಾರ್ಡ್ ಗಳಿಗೆ ಭೇಟಿನೀಡಿಲ್ಲ. ಇಲ್ಲಿನ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ ಯಾರೇ ಶಾಸಕರಾಗಲಿ ನಮಗೂ ಶಾಸಕರೇ. ಪರಿಶಿಷ್ಟರಿಗೆಂದೇ ಮೀಸಲಿರುವ ಅನುದಾನವನ್ನಾದರೂ ನಮ್ಮ ಏರಿಯಾಗಳಲ್ಲಿ ಬಳಸಿ ಅಭಿವೃದ್ಧಿಪಡಿಸಲಿ. ಒಮ್ಮೆ ನಮ್ಮ ಏರಿಯಾಕ್ಕೆ ಭೇಟಿನಿಡಿ ಪರಿಸ್ಥಿತಿ ಕಣ್ಣಾರೆ ಕಾಣಲಿ. ಚರಂಡಿಗಳ ಅವಶ್ಯಕತೆ ಇದೆ. ಇಲ್ಲಿನ ಗರಡಿ ಮನೆ, ಸಮುದಾಯ ಭವನ, ಮತ್ತು ದೇವಸ್ಥಾನಗಳಿದ್ದು ಅವುಗಳ ಸುತ್ತಲೂ ಇದ್ದ ಕಂಪೌ0ಡ್ ಕಳಪೆಯಾಗಿ ಬಿದ್ದು ಹೋಗಿದೆ ಅದನ್ನು ಹೊಸದಾಗಿ ನಿರ್ಮಿಸಬೇಕಿದೆ.

– ಎಲ್.ನಾಗರಾಜ,

ವಾರ್ಡಿನ ಮುಖಂಡರು.

Leave a Reply

Your email address will not be published. Required fields are marked *

error: Content is protected !!