
ಸ್ನಾತಕೋತ್ತರ ಪದವಿ ಕೋರ್ಸ್ ಪ್ರವೇಶ ಪರೀಕ್ಷೆ ಅನುಮತಿ ನೀಡದಂತೆ ಒತ್ತಾಯಿಸಿ ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 1- ಸ್ನಾತಕೋತ್ತರ ಪದವಿ ಕೋರ್ಸ್ ಪ್ರವೇಶ ಪರೀಕ್ಷೆಗೆ ವಿಶ್ವವಿದ್ಯಾಲಯವು ಅನುಮತಿ ನೀಡಬಾರದು ಎಂದು ವಿ.ಎಸ್.ಕೆ ವಿವಿ ಕುಲಸಚಿವರು ರುದ್ರೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಎಐಡಿಎಸ್ಓ ಜಿಲ್ಲಾ ಕೆ. ಈರಣ್ಣ ಮಾತನಾಡಿ, ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆ ನಡೆಸುವ ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಕೌನ್ಸಿಲ್ ರಾಜ್ಯ ಸರ್ಕಾರದ ಮುಂದಿಟ್ಟಿದೆ. ಈ ಪ್ರವೇಶ ಪರೀಕ್ಷೆ ಜಾರಿಯಾದಲ್ಲಿ, ಈಗಾಗಲೇ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿರುವ ಉನ್ನತ ಶಿಕ್ಷಣದ ಪ್ರವೇಶಾತಿಯಿಂದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ದೂರ ತಳ್ಳಿ, ಉನ್ನತ ಶಿಕ್ಷಣದ ಕನಸಿನ ಮೇಲೆ ಪ್ರಹಾರವೆಸಗಿದಂತಾಗುತ್ತದೆ! ಇದು ಉನ್ನತ ಶಿಕ್ಷಣದ ಪ್ರವೇಶಕ್ಕೆ ತಡೆಯೊಡ್ಡುತ್ತದೆ ಎಂದರು.
ಎಲ್ಲ ಪ್ರವೇಶ ಪರೀಕ್ಷೆಗಳಲ್ಲಿ ತಾಂಡವವಾಡುತ್ತಿರುವ ಕೋಚಿಂಗ್ ಲಾಬಿಗಳಿಗೆ ಇನ್ನೊಂದು ಮಣೆ ಹಾಕಿದಂತಾಗುತ್ತದೆ. ಉನ್ನತ ಶಿಕ್ಷಣದ ಮೂಲ ಆಶಯವಾಗಿರುವ, ವಿಶ್ವವಿದ್ಯಾಲಯಗಳ ಮೂಲಭೂತ ಹಕ್ಕಾದ ಸ್ವಾಯತ್ತತೆಗೆ ಇದು ಕೊಡಲಿ ಪೆಟ್ಟು ನೀಡುತ್ತದೆ. ವಿಶ್ವವಿದ್ಯಾಲಯದ ಹಕ್ಕುಗಳ ರಕ್ಷಣೆಗಾಗಿ ಎಐಡಿಎಸ್ಓ ಹಾಗೂ ವಿದ್ಯಾರ್ಥಿ ಸಮೂಹವು ತಮ್ಮ ಬೆಂಬಲಕ್ಕಿದೆ. ಆದ್ದರಿಂದ ಘನ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆಗೆ ಅವಕಾಶ ನೀಡದೆ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಬೇಕೆಂದು ತಮ್ಮಲ್ಲಿ ಎಐಡಿಎಸ್ಓ ಮನವಿ ಮಾಡುತ್ತೇದೆ.
ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷರು ಎಂ.ಶಾಂತಿ ಇದ್ದರು.