WhatsApp Image 2024-10-08 at 4.51.29 PM

ಬಳ್ಳಾರಿ ನಗರದ ವಿವಿಧ ಪ್ರದೇಶಗಳ ವೃತ್ತ/ರಸ್ತೆಗಳಿಗೆ ಹೆಸರು ನಾಮಕರಣ, ಪುತ್ಥಳಿ ಸ್ಥಾಪನೆ ಕುರಿತು ಮನವಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 8- ಎಐಡಿಎಸ್ಓ, ಎಐಡಿವೈಓ, ಎಐಎಮ್ಎಸ್ಎಸ್ ಮತ್ತು ಎಐಕೆಕೆಎಎಮ್ಎಸ್ ಸಂಘಟನೆಗಳ ನೇತೃತ್ವದಲ್ಲಿ ಬಳ್ಳಾರಿ ನಗರದ ವಿವಿಧ ಪ್ರದೇಶಗಳ ವೃತ್ತ/ರಸ್ತೆಗಳಿಗೆ ಹೆಸರು ನಾಮಕರಣ, ಪುತ್ಥಳಿ ಸ್ಥಾಪನೆ ಕುರಿತು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರು ಮುಲ್ಲಂಗಿ ನಂದೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿ.ಎನ್.ಹೆಚ್.ಎಸ್ ಸಂಚಾಲಕರು ಸೋಮಶೇಖರ ಗೌಡ ಅವರು ಮಾತನಾಡಿ ನಗರಪಾಲಿಕೆ ಪ್ರಾಧಿಕಾರದಿಂದ ವಿವಿಧ ಪ್ರದೇಶಗಳಲ್ಲಿರುವ ವೃತ್ತ ಮತ್ತು ರಸ್ತೆಗಳಿಗೆ ಹೆಸರು ನಾಮಕರಣ, ಪುತ್ಥಳಿ ಸ್ಥಾಪನೆ ಮಾಡುವ ತೀರ್ಮಾನವನ್ನು ಎಐಡಿಎಸ್‌ಓ, ಎಐಎಂಎಸ್‌ಎಸ್, ಎಐಡಿವೈಓ, ಎಐಕೆಕೆಎಂಎಸ್ ಸಂಘಟನೆಗಳು ಸ್ವಾಗತಿಸುತ್ತವೆ. ಈ ಕೆಳಕಂಡ ಸಲಹೆಗಳನ್ನು/ಪ್ರಸ್ತಾವನೆಯನ್ನು ಮಾಡಬಯಸುತ್ತವೆ.

ಬೆಂಗಳೂರು ರಸ್ತೆಗೆ ಮಹಾನ್ ಸ್ವಾತಂತ್ರ‍್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರಬೋಸ್ ರಸ್ತೆ ಎಂದು ನಾಮಕರಣ ಮಾಡಿ, ನೇತಾಜಿ ಪುತ್ಥಳಿಯನ್ನು ಸ್ಥಾಪಿಸುವುದು. ಹಳೆಯ ತಾಲ್ಲೂಕು ಕಛೇರಿ ವೃತ್ತದ ಬಳಿ ಧೀರ ಹುತಾತ್ಮ, ಕ್ರಾಂತಿಕಾರಿ ಸ್ವಾತಂತ್ರ‍್ಯ ಹೋರಾಟಗಾರ ಭಗತ್‌ಸಿಂಗ್ ಅವರ ಪುತ್ಥಳಿಯನ್ನು ಸ್ಥಾಪಿಸುವುದು. ಸರ್ಕಾರಿ ಬಾಲಕಿಯರ ಕಾಲೇಜು ರಸ್ತೆಗೆ ಸಾವಿತ್ರಿ ಬಾಯಿ ಫುಲೆ ರಸ್ತೆ ಎಂದು ನಾಮಕರಣ ಮಾಡುವುದು.

ಓಪಿಡಿ ಸರ್ಕಲ್‌ನಲ್ಲಿ ಕ್ರಾಂತಿಕಾರಿ ಸ್ವಾತಂತ್ರ‍್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಸರ್ಕಲ್ ಎಂದು ನಾಮಕರಣ ಮಾಡಿ, ಆಜಾದ್ ಅವರ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಹಾಗೂ ತಾವು ನಮ್ಮ ಸಲಹೆಗಳಿಗೆ ಮಾನ್ಯತೆ ನೀಡಿ, ಪುರಸ್ಕರಿಸಬೇಕೆಂದು ಎಐಡಿಎಸ್‌ಓ, ಎಐಎಂಎಸ್‌ಎಸ್, ಎಐಡಿವೈಓ, ಎಐಕೆಕೆಎಂಎಸ್ ಸಂಘಟನೆಗಳು ಮನವಿ ಮಾಡುತ್ತವೆ ಎಂದರು.

ಮನವಿ ಸ್ವೀಕರಿಸಿದ ಮೇಯರ್, ಮುಲ್ಲಂಗಿ ನಂದೀಶ್ ಅವರು ಸಭೆ ಕರೆದು ಚರ್ಚೆ ನಡೆಸಿ ರಸ್ತೆಗಳಿಗೆ ಹೆಸರು ಹಾಗೂ ವೃತ್ತಿಗಳಿಗೆ ಕೂಡ ಮರು ನಾಮಕರಣ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರು ಕೆ.ಈರಣ್ಣ, ಮತ್ತು ಎಂ.ಶಾAತಿ, ಉಮಾ, ಎಐಎಮ್ಎಸ್ಎಸ್ ಜಿಲ್ಲಾ ಅಧ್ಯಕ್ಷರು ಕೆ.ಎಮ್ ಈಶ್ವರಿ, ಹಾಗೂ ಜೆ.ಸೌಮ್ಯ, ವಿದ್ಯಾ, ಎಐಡಿವೈಓ ಜಿಲ್ಲಾ ಅಧ್ಯಕ್ಷರು ಪಂಪಾಪತಿ ಕೋಳೂರು ಹಾಗೂ ಎಐಕೆಕೆಎಮ್ಎಸ್ ಜಿಲ್ಲಾ ಅಧ್ಯಕ್ಷರು ಗೋವಿಂದ್ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!