9

ವಖ್ಫ್ ಹೆಸರಿನಲ್ಲಿ ರೈತರ ಜಮೀನು ಸೂಕ್ತ ಕಾನೂನಿಗಾಗಿ, ಜಿಲ್ಲಾ ಧರ್ಮ ಪರಿಷತ್ ಶ್ರೀಗಳ ಮನವಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 16- ವಿವಿಧ ಕಾರಣಗಳಿಂದ ಕಷ್ಟಪಟ್ಟು ಉಳಿಮೆ ಮಾಡುವ ರೈತರ ಜಮೀನನ್ನು, ವಖ್ಫ್ ಹೆಸರಿನಲ್ಲಿ ಪಹಣಿ ಬದಲಾಗಿರುವುದು, ವಿಚಾರ ಕರವೆಂದು, ರಾಜ್ಯದ್ಯಂತ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಸರ್ಕಾರ ಕೂಡಲೇ ಸೂಕ್ತ ಕಾನೂನನ್ನು ತರಬೇಕೆಂದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಧರ್ಮ ಪರಿಷತ್ತಿನ ಶ್ರೀಗಳವರಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಶನಿವಾರ ನಗರದ ಕೊಟ್ಟೂರು ಸ್ವಾಮಿ ಮಠದ ಸಭಾಂಗಣದಲ್ಲಿ ನಡೆದ ಧರ್ಮ ಪರಿಷತ್ ನೇತೃತ್ವದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಸ್ವಾಮಿಗಳು, ಹಾಗೂ ಕಮ್ಮರಚೇಡು ಕಲ್ಯಾಣ ಮಠದ ಪೀಠಾಧಿಪತಿಗಳು ಕಲ್ಯಾಣ ಸ್ವಾಮಿಗಳು ಮಾತನಾಡುತ್ತಾ, ಸಂವಿಧಾನಕ್ಕೆ ಅಪಚಾರ ಮಾಡುವಂತಹ ನಿರ್ಣಯಗಳನ್ನು ಸರ್ಕಾರಗಳು ಮಾಡುವುದು ಸರಿಯಲ್ಲ, ಇದರಿಂದ ವಂಶ ಪಾರಂಪರ್ಯವಾಗಿ ತಮಗೆ ಇರುವ ಸ್ವಲ್ಪ ಭೂಮಿಯಲ್ಲಿ ಉಳಿಮೆ ಮಾಡುತ್ತಾ ಜೀವನವನ್ನು ಸಾಗಿಸುತ್ತಾ ರೈತರ ಜಮೀನುಗಳನ್ನು ಹಾಗೂ ಸಮಾಜಕ್ಕೆ ವಿವಿಧ ಸೇವೆಗಳನ್ನು ಕೊಡುತ್ತಾ ನಡೆಸಿಕೊಂಡು ಬರುತ್ತಿರುವ ಮಠಗಳ ಜಮೀನುಗಳನ್ನು ಅವರಿಗೆ ತಿಳಿಯದೆ ಅವರ ಭೂಮಿಯ ಪಹಣಿಗಳಲ್ಲಿ ವಖ್ಫ್ ಹೆಸರಿಗೆ ಬದಲಾವಣೆ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸರ್ಕಾರಗಳು ಕೈಕಟ್ಟಿ ಕುಳಿತುಕೊಂಡರೆ ಅನ್ಯಾಯವಾಗುವುದು ಯಾರಿಗೆ? ಎಂಬ ಪ್ರಶ್ನೆಗಳನ್ನು ರಾಜ್ಯ ಸರ್ಕಾರಕ್ಕೆ ನೇರವಾಗಿ ಪಠಾಧಿಪತಿಗಳು ಪ್ರಶ್ನಿಸಿದ್ದರು. ಇಂತಹ ಗಂಭೀರವಾದ ವಿಷಯವನ್ನು ಸರ್ಕಾರ ಕೂಡಲೇ ತಿರುಗಿ ಆಯಾ ರೈತರು ಮತ್ತು ಮಠಗಳ ಹೆಸರಿಗೆ ಬದಲಾವಣೆ ಮಾಡಬೇಕೆಂದು ಒತ್ತಾಯಿಸಿದರು.

ಸರ್ಕಾರಕ್ಕೆ ವಖ್ಫ್ ಮೇಲೆ ಮಮಕಾರ ಇದ್ದರೆ ರೈತರ ಇಷ್ಟದ ಮೇರೆಗೆ ಅವರ ಜಮೀನನ್ನು ಖರೀದಿಸಿ ಕೊಡಿ ಎಂದು ಆಗ್ರಹ ವ್ಯರ್ಥ ಪಡಿಸಿದರು.

ರಾಜ್ಯದ್ಯಂತ ಈ ಸಮಸ್ಯೆ ಹೊತ್ತು ಉರಿಯುತ್ತಿದ್ದರೆ, ರಾಜ್ಯ ಸರ್ಕಾರ ಎಲ್ಲ ಸಾಲದ ಕಾರಣಗಳನ್ನು ಹೇಳುತ್ತಾ ಕಲಹರಣ ಮಾಡುವುದು ಸರಿಯಲ್ಲ ಎಂದರು.

ಭಗವAತನು ನುಡಿದಂತೆ ಧರ್ಮ ಸಂಸ್ಥಾಪನೆಗಾಗಿ ಮಠಾಧಿಪತಿಗಳು ಕೈಜೋಡಿಸಿ ಹೋರಾಟ ಮಾಡಲು ಸಿದ್ದರಾಗಿರುತ್ತಾರೆ, ರೈತ ಸಂಘದ ಪದಾಧಿಕಾರಿಗಳು, ಸಂಘ ಸಂಸ್ಥೆಗಳು, ಸೇವಾ ಸಂಸ್ಥೆಗಳು, ಈ ಸಮಸ್ಯೆ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವಿಷಯದಲ್ಲಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಯಾರೇ ತಪ್ಪು ಮಾಡಿರಲಿ ಅವರಿಗೆ ಸರ್ಕಾರ ಶಿಕ್ಷೆ ನೀಡುವುದರ ಜೊತೆಗೆ ಸಮಸ್ಯೆ ಬಗೆಹರಿಸಲು ಮುಂದಾಗಬೇಕೆAದು ಮನವಿ ಮಾಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವಿವಿಧ ಮಠಾಧೀಶರು, ತುಂಗಭದ್ರಾ ರೈತರ ಸಂಘದ ಜಿಲ್ಲಾಧ್ಯಕ್ಷ, ದರೂರು ಪುರುಷೋತ್ತಮ್ ಗೌಡ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಪಂಚಾಕ್ಷರಪ್ಪ, ಕಾರ್ಯದರ್ಶಿ ಗಂಗಾವತಿ ವೀರೇಶ್, ಮಸೀದಿಪುರ ಸಿದ್ದರಾಮ ಗೌಡ ಜೊತೆಗೆ ಹಲವಾರು ಬಂದಿ ಮುಖಂಡರು ರೈತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!