
ಕುಕನೂರ ರೈಲ್ವೆ ನಿಲ್ದಾಣಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಹೆಸರಿಡಲು ಮನವಿ
ಕರುನಾಡ ಬೆಳಗು ಸುದ್ದಿ
ಕುಕನೂರು, 23- ಪಟ್ಟಣದ ಹೊಸ ರೈಲ್ವೆ ನಿಲ್ದಾಣಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಹೆಸರಿಡಲು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಕುಕನೂರು ಘಟಕದಿಂದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರದ ಬಸವರಾಜ್ ರಾಯರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ವಾಲ್ಮೀಕಿ ಸಮಾಜದ ರುದ್ರ ಭೂಮಿಗಾಗಿ ಮೀಸಲಾಗಿರಿಸಿದ್ದ ಜಮೀನು ಸರ್ವೇ ನಂಬರ್ ೩೩೭/೩ ರಲ್ಲಿ ಎರಡು ಎಕರೆ ಜಮೀನ ಮತ್ತು ನಮ್ಮದೇ ಸಮಾಜದವರಾದ ಶ್ರೀಮತಿ ಯಲ್ಲವ್ವ ಗಂಡ ಹನುಮಂತಪ್ಪ ಕೊಡಳ್ಳಿ ಇವರು ಜಮೀನಿನ ಸರ್ವೆ ನಂಬರ್ ೩೩೭/೨ ರಲ್ಲಿ ನಾಲ್ಕು ಎಕ್ರೆ ೧೨ ಗುಂಟೆಯಲ್ಲಿ ಎರಡು ಎಕರೆ ೬ ಗುಂಟೆ ನೂತನ ರೈಲ್ವೆ ನಿಲ್ದಾಣಕ್ಕೆ ಪಡೆದಿರುತ್ತಾರೆ. ಆದ್ದರಿಂದ ನಮ್ಮ ಸಮಾಜದ ಅಭಿವೃದ್ಧಿಗಾಗಿ ಮೀಸಲಾಗಿರಸಿದ್ದ ಜಮೀನನ್ನು ನೂತನ ರೈಲ್ವೆ ನಿಲ್ದಾಣಕ್ಕಾಗಿ ಪಡೆದಿರುತ್ತಾರೆ ಆದ್ದರಿಂದ ನಮ್ಮ ಸಮಾಜದ ಎಲ್ಲರ ಒಮ್ಮತದ ನಿರ್ಣಯ ಮಾಡಿ ತಾಲೂಕಿನ ಶಾಸಕರಾದ ಬಸವರಾಜ್ ರಾಯರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ್, ಹಂಚ್ಯಾಳಪ್ಪ ತಳವಾರ, ಸುಭಾಸ್ ಪೂಜಾರ್, ಮುತ್ತು ವಾಲ್ಮೀಕಿ, ಭರಮಪ್ಪ ತಳವಾರ, ಸಂಜೀವಪ್ಪ ಸಂಗಟಿ, ರಾಮಣ್ಣ ಯಡ್ಡೋಣಿ, ಶಿವಪ್ಪ ಸಂದೀಮನಿ, ಸುರೇಶ್ ಮುಂದಲಮನಿ, ಮಂಜುನಾಥ್ ಇತರ ಇದ್ದರು.
ಮಹಾಮಾಯೆ ಹೆಸರಿಟ್ಟರೆ ಸೂಕ್ತವೆನಿಸುವುದು ,
ಈ ತಾಯಿ ಪುರಾತನ ಕಾಲದಲ್ಲಿ ಅತೀ ಪುರಾತನಳು
ಅಥವಾ ಜೇಷ್ಠಾ ದೇವಿ ಅಥವಾ ಜೇಷ್ಠಾ ಮಹಾಮಾಯೆ ರೈಲ್ವೆ ನಿಲ್ದಾಣ ಎಂದು ಹೆಸರಿಬದಲ್ಲವೆ.