
20 ರಂದು ವಿವಿಧಡೆ ವಿದ್ಯುತ್ ವ್ಯತ್ಯಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 19- ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110/33/11ಕೆವಿ ಎಂ.ಯು.ಎಸ್.ಎಸ್ ಕೊಪ್ಪಳ ಸ್ಟೇಷನ್‌ಗೆ ಒಳಪಡುವ ಎಫ್ 13 ಕಾಳಿದಾಸ ನಗರದ ಫೀಡರನ್ ತುರ್ತು ನಿರ್ವಹಣೆ ಕೆಲಸ ನಡೆಸುತ್ತಿರುವ ಪ್ರಯುಕ್ತ ಸ್ಟೇಷನಗೆ ಒಳಪಡುವ ಎಲ್ಲ ಮಾರ್ಗಗಳು ನವೆಂಬರ್ 20 ರಂದು ಮಧ್ಯಾಹ್ನ 01 ಗಂಟೆಯಿಂದ ಸಾಯಂಕಾಲ 04 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್ 13 ಕಾಳಿದಾಸ ನಗರದ ಫೀಡರಗೆ ಒಳಪಡುವ ಕಿನ್ನಾಳ ರೋಡ ಮಾರ್ಗದಲ್ಲಿನ ಎಲ್ಲಾ ಮಾರ್ಗಗಳ 11 ಕೆ.ವಿ ಲೈನಗಳು ವಿದ್ಯುತ್ ವ್ಯತ್ಯಯವಾಗಲಿದ್ದು.
ಈ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಕೋರಲಾಗಿದೆ.
ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.