4

ಮಹಿಳಾ ಸಂಘಗಳ ನಂಬಿಕೆಯ ನಮ್ಮ ಜೀವಾಳ : ಪ್ರಕಾಶರಾವ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 28- ಸಾವಿರಾರು ಕೋಟಿ ರೂಪಾಯಿ ವ್ಯವಾಹಾರ ನಡೆಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಎಲ್ಲವೂ ಪಾರದರ್ಶಕವಾಗಿದೆ ಇಲ್ಲಿಯ ಗುಂಪುಗಳಲ್ಲಿ ಪಾಲ್ಗೊಳ್ಳುವವರೆ ನಮ್ಮ ಜೀವಾಳ ಅವರ ನಂಬಿಕೆಯನ್ನು ಎಂದು ಹಾಳು ಮಾಡಿಕೊಳ್ಳುವುದಿಲ್ಲ ಎಂದು ಎಸ್‌ಕೆಡಿಆರ್‌ಪಿಯ ಜಿಲ್ಲಾ ನಿರ್ದೇಶಕ ಪ್ರಕಾಶ ರಾವ್ ಹೇಳಿದರು.
ಅವರು ಇಂದು ಕೊಪ್ಪಳದ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕಾ ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿ ಗ್ರಾಮೀಣ ಪ್ರದೇಶದ ಮಹಿಳೆಯ ಸ್ವಾವಲಂಬಿಯಾಗಲು ಧರ್ಮಸ್ಥಳದ ಶ್ರೀವೀರೇಂದ್ರ ಹೆಗಡೆಯವರ ಸೇವೆ ಅನನ್ಯ. ಇಲ್ಲಿ ವಾರ್ಷಿಕವಾಗಿ ಸ್ವಸಾಹಾಯ ಗುಂಪುಗಳಲ್ಲಿ ನಡೆಯುವ ಆರ್ಥಿಕ ವ್ಯವಾಹಾರ ಪಾರದರ್ಶಕ ಹಾಗು ಕಾನೂನಾತ್ಮಕವಾಗಿದೆ ಎಂದರು.
ಸಮಾವೇಶವನ್ಜು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ ಉದ್ಘಾಟಿಸಿ ಧರ್ಮಸ್ಥಳದ ಸಂಘದಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಉಳಿತಾಯ ಮಾಡುವ ಶಕ್ತಿ ನೀಡಿದ್ದು ಮಹಿಳೆಯರು ಕುಟುಂಬ ನಿರ್ವಹಣೆಯ ತಮ್ಮ ಪಾಲನ್ನು ಹೊಂದಿದ್ದಾರೆ ಎಂದರು.
ಹಿರಿಯ ನ್ಯಾಯವಾದಿ ರಾಘವೇಂದ್ರ ಪಾಬಗಂಟಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟಿನ ಸದಸ್ಯ ಯಮನೂರಪ್ಪ ಹಾದಿಮನಿ, ಡಾ.ರಾಧ ಕುಲಕರ್ಣಿ, ಶ್ರೀಮತಿ ತ್ರೀಶಾಲ ಪಾಟೀಲ ಇದ್ದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಹಣ ತೊಡಗಿಸುವವರಿಗೆ ಯೋಜನೆಯಲ್ಲಿ ಆರ್ಥಿಕ ವ್ಯವಾಹಾರ ಕುರಿತು ಮಾಹಿತಿಯನ್ನು ಗಂಗಾವತಿ ಆರ್‌ಎಸಿಸಿ ಬ್ಯಾಂಕಿನ ಮುಖ್ಯವ್ಯವಸ್ಥಾಪಕ ವಿರುಪಾಕ್ಷಪ್ಪ ಅಳವಂಡಿ, ಎಸ್ಬಿಐ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಪಂಗ ಶ್ರೀರಾಮುಲು, ಎಫ್‌ಓಸಿ ಸತ್ಯಪ್ಪ ಗದಗಿನ ನೀಡಿದರು.
ಯೋಜನಾಧಿಕಾರಿ ಜಗದೀಶ ಸ್ವಾಗತಿಸಿದರು. ಅಶೋಕ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!