
ನವರಾತ್ರಿ ಸಂಭ್ರಮದ ಜೊತೆಗೆ ಜನ ಜಾಗೃತಿ ಮಾದರಿ : ಪ್ರಮೋದ ಕುಲಕರ್ಣಿ
ಕರುನಾಡ ಬೆಳಗು ಸುದ್ದಿ
ಕೊಪಳ, 13- ನವರಾತ್ರಿ ಸಂಭ್ರಮದ ಜೋತೆಗೆ ಜನ ಜಾಗೃತಿ ಮಾಡುತ್ತಿರುವ ಪಲ್ಲೇದ ಓಣಿಯ ನವರಾತ್ರಿ ಉತ್ಸವ ಸಮಿತಿಯ ಸೇವಾ ಕಾರ್ಯ ಶ್ಲಾಘನೀಯ ಎಂದು ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಪ್ರಮೋದ ಕುಲಕರ್ಣಿ ಹೇಳಿದರು.
ಕೊಪ್ಪಳದ ಪಲ್ಲೇದ ಓಣಿಯಲ್ಲಿ ಜರುಗಿದ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ ವಿಜೆತರಿಗೆ ಭಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವ ಕಲಾವಿದರಿಗೆ ಉತ್ತಮ ವೇದಿಕೆ ನೀಡಿ, ಭಾವೈಕ್ಯತೆ ಸಾರುವ ನಾಟಕ ಸೇರಿದಂತೆ ಇತರ ಕಾರ್ಯಕ್ರಮ ಹಾಗೂ ದೇವಿ ಆರಾದನೆ ಮೂಲಕ ದುಷ್ಟಶಕ್ತಿಗಳನ್ನು ಮನೆ-ಮನದಿಂದ ದೂರ ಮಾಡುವ ಕೆಲಸ ಮಾಡುತ್ತಿದೆ, ನವರಾತ್ರಿಯಲ್ಲಿ ದೇವಿ ಸೇವೆಯಿಂದ ಸಮಿತಿ ಹಾಗೂ ಕೊಪ್ಪಳದ ಸರ್ವರಿಗೂ ಒಳ್ಳೆಯದಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದ ಯೋಗ ಶಿಕ್ಷಕಿ ಶೋಭಾ ಪಲ್ಲೇದ ಮಾತನಾಡಿ ನಿತ್ಯ ಯೋಗ ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೋಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ವಿಜೆತರಾದ ಲಕ್ಷ್ಮೀ, ಶ್ವೇತಾ, ಮೀನಾಕ್ಷಿ, ಪೂಜಾ ಸೇರಿದಂತೆ ಇತರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸನ್ಮಾನ : ಈ ಸಂದರ್ಭದಲ್ಲಿ ಉತ್ಸವ ಸಮಿತಿ ಗೌರವ ಅಧ್ಯಕ್ಷ ಸಿದ್ಧಪ್ಪ ಹಂಚಿನಾಳ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆ ಮೇಲೆ ನಾಗರಿಕ ಪತ್ರಿಕೆ ಸ್ಥಾನಿಕ ಸಂಪಾದಕ ಸಂತೋಷ ದೇಶಪಾಂಡೆ, ಹಿರಿಯರಾದ ವೈಜನಾತ ದಿವಟರ್, ಮಹಿಳಾ ಮುಖಂಡೆ ಚೆನ್ನಮ್ಮ ಇತರರು ಇದ್ದರು.