8

23 ರಂದು ಚನ್ನಮ್ಮ ಜಯಂತಿ ಯಶಸ್ವಿಗೆ ಪ್ರತಿಮಾ ಪಟ್ಟಣಶೆಟ್ಟಿ ಮನವಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 22- ವೀರರಾಣಿ ಕಿತ್ತೂರು ಚೆನ್ನಮ್ಮನ 200ನೇ ವಿಜಯೋ ತ್ಸವ ಹಾಗೂ 246 ನೇ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಆಡಳಿತ ಹಾಗೂ ಕೊಪ್ಪಳ ಪಂಚಮಸಾಲಿ ಸಮಾಜದ ತಾಲ್ಲೂ ಕ ಸಮಿತಿ ಸಂಯುಕ್ತ ಆಶ್ರಯ ದೊಂದಿಗೆ ನಾಳೆ ಅಕ್ಟೋಬ ರ್ 23ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದು ಕಾರ್ಯಕ್ರಮವನ್ನು ಯಶಸ್ವಿಗೊ ಳಿಸುವಂತೆ ಕೊಪ್ಪಳ ತಾಲ್ಲೂಕು ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ. ಪ್ರತಿಮಾ ಪಟ್ಟಣಶೆಟ್ಟಿ ಮನವಿ ಮಾಡಿದ್ದಾರೆ.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಕಾರ್ಯ ಕ್ರಮ ಉದ್ಘಾಟಿಸುವರು.ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಶಾಸಕ ದೊಡ್ಡನಗೌಡ ಪಾಟೀಲ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಶಾಸಕ ಬಸವರಾಜ ರಾಯರಡ್ಡಿ ಅವರು ಘನ ಉಪಸ್ಥಿತಿ ವಹಿಸುವರು. ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಗಂಗಾವತಿ ಶಾಸಕ ರಾದ ಜಿ.ಜನಾರ್ಧನರೆಡ್ಡಿ. ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಡಾ. ಚಂದ್ರಶೇಖರ ಬಿ.ಪಾಟೀಲ, ಪಾಟೀಲ ಬಯ್ಯಾಪೂರ ಹಾಗೂ ಹೇಮಲತಾ ನಾಯಕ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷರಾದ ಹಸನಸಾಬ ನಭಿಸಾಬ ದೋಟಿಹಾಳ ಹಾಗೂ ನಗರಸಭೆ ಅಧ್ಯಕ್ಷರಾದ ಅಮ್ಮ ದ್ ಪಟೇಲ್,ಕೊಪ್ಪಳ ನಗರ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ ಭಾಗವಹಿಸುವರು.

ಕಾರ್ಯಕ್ರಮದ ಅಂಗವಾಗಿ ನಿವೃತ್ತ ಕರ್ನಾಟಕ ಗ್ರಾ ಮೀಣ ಬ್ಯಾಂಕ್ ಅಧಿಕಾರಿಗಳು ಹಾಗೂ ಕೊಪ್ಪಳ ಪಂಚಮ ಸಾಲಿ ಜಿಲ್ಲಾ ಮಹಿಳಾ ಘಟಕ ದ ಅಧ್ಯಕ್ಷೆ ಸುಮಂಗಲಾ ಎಸ್ ಹಂಚಿನಾಳ ಅವರು ಕಿತ್ತೂರು ರಾಣಿ ಚೆನ್ನಮ್ಮರ ಕುರಿತು ವಿಶೇಷ ಉಪನ್ಯಾಸ ನೀಡುವರು.

ಬೆಳಿಗ್ಗೆ 9:00 ಗಂಟೆಗೆ ಕೊಪ್ಪಳನಗರದ ಕಿತ್ತೂರು ಚೆನ್ನಮೃ ಸರ್ಕಲ್ ನಲ್ಲಿ ಕಿತ್ತೂರು ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಸಹ ನಡೆಯುವುದು.

ಸುಮಾರು 1000 ಕುಂಬದೊಂದಿಗೆ ನಾಲ್ಕು ಕಲಾ ತಂಡದೊಂದಿಗೆ ಗಡಿಯಾರ ಕಂಬ. ಜವಾಹರ್ ರಸ್ತೆ ಮೂಲಕ ಅಶೋಕ್ ಸರ್ಕಲ್ ಸಾಹಿತ್ಯ ಭವನಕ್ಕೆ ಮೆರವಣಿಗೆ 12:30 ಕೈ. ಬಂದುತಲುಪುತ್ತದೆ. ಸಾಹಿತ್ಯ ಭವನ ತಲುಪಲಿದೆ.

ಸರಕಾರಿ ಕಾರ್ಯಕ್ರಮ ಹಾಗೂ ಸಮಾಜದ ಮಕ್ಕಳಿಗೆ ಪ್ರತಿಭಾಪುರಸ್ಕಾರ ಮುಖಂಡರಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತದೆ ಆದಕಾರಣ ಸಮಾಜದ ಪದಾಧಿಕಾರಿಗಳು ಮಹಿಳಾ ಘಟಕದವರು. ಯುವ ಘಟಕದವರು ರೈತರು. ಹಾಗೂ ನೌಕರ ಘಟಕ, ವಕೀಲರ ಘಟಕ, ವೈದ್ಯರ ಘಟಕ.ಅರ ಸೈನ್ಯ ಘಟಕ, ಸಮಾಜದ ಎಲ್ಲಾ ಹಿರಿಯ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾ ರ್ಯಕ್ರಮವನ್ನು ಯಶಸ್ವಿಗೊಳಿ ಸುವಂತೆ ಪಂಚಮಸಾಲಿ ಸಮಾಜದ ಕೊಪ್ಪಳ ತಾಲ್ಲೂಕು ಮಹಿಳಾ ಅಧ್ಯಕ್ಷೆ ಶ್ರೀಮತಿ. ಪ್ರತಿಮಾ ಪಟ್ಟಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!