6

ಕೆಆರ್ ಟ್ರಾವೆಲ್ಸ್ ನಿಂದ ರಾಂಪುರ ಮಾರ್ಗವಾಗಿ ಸಂಡೂರಿಗೆ ಖಾಸಗಿ ಬಸ್ ಆರಂಭ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 22-ನಗರದ ಕೆಆರ್ ಟ್ರಾವೆಲ್ಸ್ ವತಿಯಿಂದ ಬಳ್ಳಾರಿಯಿಂದ ಸಂಡೂರಿಗೆ ಹೊಸ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಕೆಆರ್ ಟ್ರಾವೆಲ್ಸ್ನ ಮಾಲೀಕ ದೇವರಾಜ್ ತಿಳಿಸಿದ್ದಾರೆ.

ಈ ಹೊಸ ಬಸ್ಸಿಗೆ ನಗರದ ಜೋಳದ ರಾಶಿ ರಂಗಮAದಿರದ ಸಮೀಪ ಚಾಲನೆ ನೀಡಿ ಮಾತನಾಡಿದ ಅವರು, ಈ ಬಸ್ಸು ಡಿ.ಹಿರೇಹಾಳ್, ರಾಂಪುರ, ಕೆಳಗಳ ಕಣಿವೆ, ಸಂತೆಗುಡ್ಡ, ತೋಣಿಸಿ ಗುಡ್ಡ, ಗೊಲ್ಲ ಲಿಂಗಮ್ಮನಹಳ್ಳಿ, ಚೋರನೂರು, ಬಂಡ್ರಿ ಮಾರ್ಗದಿಂದ ಸಂಡೂರಿಗೆ ತಲುಪಲಿದೆ ಮೇಲ್ಕಂಡ ಗ್ರಾಮಗಳ ಸಾರ್ವಜನಿಕರು ಈ ಬಸ್ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಪ್ರಕಟಣೆಯ ಮೂಲಕ ಕೋರಿದ್ದಾರೆ.

ಈ ಸಂದರ್ಭದಲ್ಲಿ ಕೆಆರ್ ಟ್ರಾವೆಲ್ಸ್ ಮಾಲೀಕ ಎಸ್.ಕೆ.ಬಿ ಟ್ರಾವೆಲ್‌ನ ಹೆಚ್.ಆರ್.ಉಮೇಶ್‌ಗೌಡ, ರಾಳ್ಳ ತಿಮ್ಮಾರೆಡ್ಡಿ, ಓಬಳಾಪುರ ಸೋಮನ ಗೌಡ, ಕಲೀಂ, ನಾಸೀರ್, ಜಗದೀಶ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!