
ನಗರಸಭೆಯಿಂದ ಆಸ್ತಿ, ನೀರಿನ ತೆರಿಗೆ ವಸೂಲಿ ಕಾರ್ಯಾಚರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 22- ನಗರ ಸಭೆ ಆಡಳಿತಾಧಿಕಾರಿಯಾಗಿರುವ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರ ಸೂಚನೆ ಮೇರೆಗೆ ಸಿರುಗುಪ್ಪ ನಗರ ಸಭಾ ಪೌರಾಯುಕ್ತ ಎಚ್ ಎನ್ ಗುರುಪ್ರಸಾದ್ ನೇತೃತ್ವದಲ್ಲಿ ನಗರಸಭಾ ಅಧಿಕಾರಿಗಳು ಸಿಬ್ಬಂದಿ ವರ್ಗಗಳಾದ ವೆಂಕೋಬ ರಾಜಭಕ್ಷಿ ಮೌನೇಶ್ ಶಂಕರಗೌಡ ಇತರೆ ಸಿಬ್ಬಂದಿಗಳು ನಗರದಲ್ಲಿರುವ ನಾಗರಿಕರು ತಮ್ಮ ಆಸ್ತಿ ನೀರಿನ ತೆರಿಗೆ ಇನ್ನಿತರೆ ಕರವನ್ನು ಸಕಾಲದಲ್ಲಿ ಪಾವತಿಸುವಂತೆ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.
ಕರ ಪಾವತಿಸಿ ಸಹಕರಿಸಬೇಕು ನಗರ ಸಭೆಯ ವಿವಿಧ ಭಾಗದ ಸಿಬ್ಬಂದಿಗಳು ವಸೂಲಿ ಕಾರ್ಯಚರಣೆದಲ್ಲಿದ್ದಾರೆ.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಮತ್ತಿತರರು ಇದ್ದರು.