
ಪ್ರತಿಯೊಬ್ಬ ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ : ರವೀಂದ್ರ ಬಾಗಲಕೋಟೆ
ಕರುನಾಡ ಬೆಳಗು ಸುದ್ದಿ
ಕುಕನೂರು, 28- ಪ್ರತಿಯೊಬ್ಬ ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟೆ ಹೇಳಿದರು.
ಪಟ್ಟಣದ ಶ್ರೀ ದುರ್ಗಾದೇವಿ ಕಲ್ಯಾಣ ಮಂಟಪ ಸಂಯುಕ್ತ ಆಶ್ರಯದಲ್ಲಿ ಸೋಮವಾರ ವಿಸ್ತಾರ ಕನಸು ಕಿಶೋರಿ ಸಂಘಟನೆಯಿAದ ಮಾತಾಡ್ರೆ ಕಿಶೋರ್ ತ್ರೈಮಾಸಿಕ ಮಾಸಿಕ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಪ.ಪಂ. ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟೆ ಮಾತನಾಡಿ, ಪ್ರತಿಯೊಬ್ಬ ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಹೆಣ್ಣು ಮಕ್ಕಳಿಗೆ ಆಗುವ ಶೋಷಣೆ ಮತ್ತು ದೌರ್ಜನ್ಯ ಹೆಣ್ಣು ಗಂಡು ಎಂಬ ತಾರತಮ್ಯ ಇಂತಹ ಅನೇಕ ಸಮಸ್ಯೆಗಳನ್ನು ಹೆಣ್ಣು ಮಕ್ಕಳು ಅನುಭವಿಸುತ್ತಿದ್ದಾರೆ ಆದರೆ ಈ ವಿಸ್ತಾರ ಕನಸು ಕಿಶೋರಿ ಸಂಘಟನೆಯಿAದ ಹೆಣ್ಣು ಮಕ್ಕಳು ತಮಗಾಗುವ ಸಮಸ್ಯೆಗಳ ಬಗ್ಗೆ ಹಾಗೂ ಅವರಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಇದು ಒಂದು ಉತ್ತಮವಾದ ಸಂಘಟನೆಯಾಗಿದೆ ಎಂದರು.
ಆಶಾ ವಿಸ್ತಾರ ಕನಸು ಕಿಶೋರಿ ಸಂಘಟನೆಯ ನಿರ್ದೇಶಕರು ಮಾತನಾಡಿ, ನಮ್ಮ ವಿಸ್ತಾರ ಕನಸು ಕಿಶೋರಿ ಸಂಘಟನೆಯಲ್ಲಿ ೧೩ ವರ್ಷದ ಹೆಣ್ಣು ಮಕ್ಕಳಿಂದ ೧೮ ವರ್ಷದ ಹೆಣ್ಣು ಮಕ್ಕಳಿಗೆ ಸಿಗಬೇಕಾದ ಹಕ್ಕುಗಳು ಪ್ರತಿಯೊಬ್ಬ ಕಿಶೋರಿಗೂ ಕೊಡಿಸುತ್ತೇವೆ ಕುಕನೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ನಮ್ಮ ಕಿಶೋರಿಯರ ಸಂಘಗಳು ಇವೆ ಕಿಶೋರಿಯರ ಸಂಘಗಳ ಸಂಖ್ಯೆ ಈಗ ೨೫೦ ಇರುತ್ತವೆ ಹಾಗೂ ಇದರಲ್ಲಿ ಕಿಶೋರಿಯರ ಸಂಖೆ ಕೂಡ ೫,೦೦೦ ಕಿಶೋರಿಯರು ಇದ್ದಾರೆ. ಕಿಶೋರಿಯರ ನೋವು ನಲಿವು ಹಾಗೂ ಅವರ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಮಾತಾಡ್ರೆ ಕಿಶೋರಿ ತ್ರೈಮಾಸಿಕ ಪತ್ರಿಕೆ ಉತ್ತಮವಾದ ಬೆಳವಣಿಗೆಯನ್ನು ನೀಡುವ ಕಾರ್ಯ ಮಾಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಸ್ತಾರ ಕನಸು ಕಿಶೋರಿ ಸಂಸ್ಥೆಯ ಸಹನಿರ್ದೇಶಕ ನಾಜಿರ, ಗಂಗಮ್ಮ ಹುಡೇದ ಕಿಶೋರಿ ಸಂಘ, ಪಪಂ ಸದಸ್ಯ ಗಗನ್ ನೋಟಗಾರ, ನೂರ ಹಮ್ಮದ್ ಗುಡಿಹಿಂದಲ, ಮಸಬಹಂಚಿನಾಳ ಗ್ರಾ.ಪಂ. ಅಧ್ಯಕ್ಷ ಹನುಮಂತ್ ಬನ್ನಿಕೊಪ್ಪ, ಹಿರಿಯ ಪತ್ರಕರ್ತ ರುದ್ರಪ್ಪ ಭಂಡಾರಿ,ಪ್ರಕಾಶ್ ಹೆಲ್ತ್ ಆಫೀಸರ್, ವಿಜಯಲಕ್ಷ್ಮಿ ಅಂಗನವಾಡಿ ಕಾರ್ಯಕರ್ತೆ, ಹಾಗೂ ವಿಸ್ತಾರ ಕನಸು ಕಿಶೋರೆ ಸಂಘಟನೆಯ ಸರ್ವರು ಇದ್ದರು.