
ಸಿರುಗುಪ್ಪ : ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನ ರಕ್ಷಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 21- ತಾಲೂಕು ಕರೂರು ಗ್ರಾಮದ ಬಳಿ ಹರಿಯುತ್ತಿರುವ ಕುಲ್ಡನಾಲು ಸೇತುವೆಯ ಮೇಲೆ ಮಳೆ ನೀರು ಹರಿಯುತ್ತಿದೆ, ಮಾಟಸೂಗೂರು ಕಡೆಯಿಂದ ಬಳ್ಳಾರಿ ಕಡೆಗೆ ಹೊರಟಿದ್ದ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದ ಮೂಲಕ ರಭಸವಾಗಿ ನೀರು ಹರಿಯುವ ಸೇತುವೆ ಮೇಲೆ ದಾ ಟಲು ಮುಂದಾದಾಗ ನೀರಿನ ಸೆಳೆತಕ್ಕೆ ವಾಹನ ಕೊಚ್ಚಿ ಹೋಗುತ್ತಿದ್ದ ಸ್ಥಳದಲ್ಲಿದ್ದ ಕರೂರು ಗ್ರಾಮಸ್ಥರು ಬೈಕ್ ಸವಾರರನ್ನು ಬೈಕ್ ಸಮೇತ ರಕ್ಷಿಸಿದರು.
ಸೇತುವೆಯ ಮೇಲೆ ನೀರು ರಭಸವಾಗಿ ಹರಿಯುತ್ತಿರುವುದರಿಂದ ಸಾರ್ವಜನಿಕರು ದ್ವಿಚಕ್ರ ವಾಹನ ಸವಾರರು ಸಂಚರಿಸಬಾರದು ಸೇತುವೆ ಮೇಲೆ ನೀರು ಕಡಿಮೆ ಆಗುವವರೆಗೆ ಸಂಚಾರವನ್ನು ನಿರ್ಭಂಧಿಸಲಾಗುವುದು ಎಂದು ತಾಲೂಕ ತಹಶೀಲ್ದಾರ್ ಎಚ್ ವಿಶ್ವನಾಥ ಅವರು ತಿಳಿಸಿದ್ದಾರೆ.