
ಕಾನೂನು ವಿದ್ಯಾರ್ಥಿಗಳ ಕಾಲೇಜ ಶುಲ್ಕ ಹೆಚ್ಚಳ ಖಂಡಸಿ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 24- ನಗರದ ಅಪ್ಸಾನಿ ಎನ್.ಆರ್.ಕಾನೂನು ಮಹಾವಿದ್ಯಾಲಯದ ಕಾಲೇಜ ಶುಲ್ಕ ಹೆಚ್ಚಳ ಖಂಡಿಸಿ ನಗರದ ಅಂಬೇಡ್ಕರ್ ವೃತ್ತದ ಬಳಿ ಯುವ ಉತ್ತೇಜನ ಸೇನಾ ಪಡೆ ಜಿಲ್ಲಾ ಅಧ್ಯಕ್ಷ ಸರ್ವಜ್ಞಮೂರ್ತಿ ನೇತೃತ್ವದಲ್ಲಿ ಖಂಡಿಸಿ ಪ್ರತಿಭಟಿಸಲಾಯಿತು.
ಸಂಜಿವಮೂರ್ತಿ ಮಾತನಾಡಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕಾಲೇಜ ಶುಲ್ಕ ಹೆಚ್ಚಿಸಿದ್ದು ಸರಿಯಲ್ಲ ಪಾಲಕರಿಗೆ ವಿದ್ಯಾರ್ಥಿಗಳಿಗೆ ತೋಂದರೆಯಾಗಿದೆ. ಆಡಳಿತ ಮಂಡಳಿ ತಕ್ಷಣವೇ ಕಾಲೇಜ ಶುಲ್ಕ ಕಡಿಮೆಗೋಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾನೂನು ವಿದ್ಯಾರ್ಥಿಗಳಾದ ವಿನೋದ, ಕಾರ್ತಿಕ ಕೆಂಚಗಳ್ಳಿ, ಅಜಿತಸಿಂಗ, ನಜಿಮಾ, ಕನಕೇಶ, ಮುಸ್ತಾಕ ಮುಂತಾದವರು ಉಪಸ್ಥಿತರಿದ್ದರು.