
ಗ್ರಾಮ ಆಡಳಿತ ಅಧಿಕಾರಿಗಳಿಂದವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 27- ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ತಾಲೂಕು ಕಛೇರಿ ಎದುರು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ವಿರುಪಾಕ್ಷಪ್ಪ ಮಾತನಾಡಿ ಸರ್ಕಾರವು ನಮಗೆ ಕಾರ್ಯನಿರ್ವಹಿಸಲು ಬೇಕಾದ ಅಗತ್ಯ ಸಲಕರಣೆಗಳನ್ನು ಪೂರೈಕೆ ಮಾಡದೆ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕೆಂದು ಸೂಚನೆ ನೀಡಿದೆ ಆದರೆ ನಮಗೆ ಬೇಕಾದ ಮೂಲಭೂತ ಸೌಲಭ್ಯಗಳಾದ ಸುಸಜ್ಜಿತವಾದ ಕಛೇರಿ ಗುಣಮಟ್ಟದ ಟೇಬಲ್ ಕುರ್ಚಿ ಅಲ್ಮೇರ ಮೊಬೈಲ್ ಫೋನ್ ಸಿಮ್ ಮತ್ತು ಡೇಟಾ ಗೂಗಲ್ ಕ್ರೂಮ್ ಬುಕ್ ಲ್ಯಾಪ್ ಟಾಪ್ ಪ್ರಿಂಟರ್ ಹಾಗೂ ಸ್ಕ್ಯಾನರ್ ಒದಗಿಸಿದರೆ ಸರ್ಕಾರ ತಿಳಿಸಿದ ಎಲ್ಲಾ ಕೆಲಸ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಮುಗಿಸಲು ಸಾಧ್ಯವಾಗುತ್ತದೆ ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೆ ಆಗಿರುವ ಎಲ್ಲಾ ಅಮಾನತ್ತುಗಳನ್ನು ತಕ್ಷಣವೇ ರದ್ದು ಪಡಿಸಿ ಹಿಂಪಡೆಯಬೇಕು ಕೆಸಿಎಸ್ಆರ್ ನಿಯಮಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಿರಲು ಹಾಗೂ ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸೂಕ್ತ ಆದೇಶ ನೀಡಬೇಕು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು ರಾ.ನಿ ಹುದ್ದೆಗಳಿಗೆ ತಕ್ಷಣವೇ ಪದೋನ್ನತಿ ನೀಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲಿಂಗರಾಜ ರೆಡ್ಡಿ, ಶಿರಸ್ತೆ ದಾರರಾದ ರಾಘವೇಂದ್ರ, ಮಹಾರುದ್ರಗೌಡ, ಸಿದ್ದಾರ್ಥ ಕಾರಂಜಿ, ಗ್ರಾಮ ಆಡಳಿತ ಅಧಿಕಾರಿಗಳಾದ ಪರಮೇಶ್ವರ, ರಂಗಸ್ವಾಮಿ, ಸುರೇಂದ್ರ ಕುಮಾರ್, ನವೀನ್ ಕುಮಾರ್, ಕೊಟ್ರೇಶ್, ಸರಸ್ವತಿ, ಲಕ್ಷ್ಮಿ, ಹುಲಿಗೆಮ್ಮ, ವಿಶ್ವನಾಥ, ಮಹಾಂತೇಶ, ಸಿದ್ದಪ್ಪ ಪೂಜಾರ್, ಶಿವಪ್ಪ, ಸಿದ್ದಮ್ಮ, ಶಿವರಾಜ, ಕಂದಾಯ ಇಲಾಖೆ ಸಿಬ್ಬಂದಿ ತುಷರ್ ಗಾಯಕ್ ವಾಡ್, ಎ ಬಿ ಪಾಟೀಲ್, ವಿಜಯಲಕ್ಷ್ಮಿ ಇದ್ದರು.