
ರಾಜ್ಯಪಾಲರ ನಡೆ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿ0ದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ. ಸೆ. 25 : ಮೂಡ ಹಗರಣದಲ್ಲಿ ವಿನಾಕರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಿಲುಕಿಸುವ ಏಕೈಕ ದುರುದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯಪಾಲರನ್ನು ಮತ್ತು ರಾಜಭವನವನ್ನು ದುರುಪಯೋಗಪಡಿಸಿಕೊಂಡು ಯಾವುದೇ ಸಂಬಂಧವಿಲ್ಲದಿದ್ದರೂ ಸಿದ್ದರಾಮಯ್ಯನವರ ಮೇಲೆ ತನಿಖೆಗೆ ಅನುಮತಿ ಕೊಡಬೇಕೆಂದು ಒತ್ತಾಯಿಸಿ ಅದರಲ್ಲಿ ಸಫಲರಾಗಿದ್ದಾರೆ. ಇದು ಎರಡು ಪಕ್ಷಗಳ ಷಡ್ಯಂತರವೇ ಹೊರತು ಬೇರೇನು ಅಲ್ಲ, ಇದನ್ನು ಮತ್ತು ರಾಜ್ಯಪಾಲರ ಆ ಸಂವಿಧಾನಿಕ ನಡೆಯನ್ನು ಖಂಡಿಸಿ ಹೋಳಿಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎ ಮಾನಯ್ಯ ತಿಳಿಸಿದರು.
ಅವರಿಂದು ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ಇರುವ ಗಾಂಧಿ ಪ್ರತಿಮೆಯ ಮುಂದೆ ಶೋಷಿತ ಸಮುದಾಯಗಳ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯಪಾಲರು ತರಾತುರಿಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ, ಪ್ರತಿಪಕ್ಷಗಳ ಮತ್ತು ಸಿದ್ದರಾಮಯ್ಯನವರ ವಿರೋಧಿಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ ಇದನ್ನೇ ಅಸ್ತ್ರವನ್ನಾಗಿ ಇಟ್ಟುಕೊಂಡು ರಾಜ್ಯಪಾಲರು prosecution ಗೆ ಅನುಮತಿ ನೀಡಿರುವುದು ಖಂಡನೀಯ ಎಂದರು.
ಲಿಡ್ಕರ್ ಅಧ್ಯಕ್ಷ ಮುಂಡರ್ಗಿ ನಾಗರಾಜ್ ಮಾತನಾಡಿ ನ್ಯಾಯಾಲಯದ ಆದೇಶವನ್ನು ನಾವು ಗೌರವಿಸುತ್ತಿದ್ದೇವೆ. ಆದರೆ ರಾಜ್ಯಪಾಲರು ವಿರೋಧ ಪಕ್ಷದಂತೆ ಮತ್ತು ಕೇಂದ್ರ ಸರ್ಕಾರದ ಪರ ಎಂಬಂತೆ ವರ್ತಿಸುತ್ತಿದ್ದಾರೆ ಇದು ಅವರ ಘನತೆಗೆ ತಕ್ಕದ್ದಲ್ಲ ಇದೇ ರೀತಿ ಹಲವು ರಾಜಕಾರಣಿಗಳ ಮೇಲೆ ಆರೋಪಗಳಿದ್ದರೂ ಎಫ್ಐಆರ್ ದಾಖಲಾಗಿದ್ದರು ಸಹ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ತನಿಖೆಗೆ ಅನುಮತಿ ನೀಡದೆ ಇರುವ ರಾಜ್ಯಪಾಲರು ಕೇಂದ್ರ ಸರ್ಕಾರದ ಕಟು ವಿರೋಧಿ ಸಿದ್ದರಾಮಯ್ಯ ನವರನ್ನು ಮಾತ್ರ ಟಾರ್ಗೆಟ್ ಮಾಡಿರುವುದು ಸಲ್ಲದು , ಇದು ರಾಜ್ಯಪಾಲರ ಹುದ್ದೆಗೆ ಘನತೆ ವಿಷಯವಲ್ಲ ಇದನ್ನು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮತ್ತು ವೈಯಕ್ತಿಕವಾಗಿ ನಾನು ಸಹ ಖಂಡಿಸುತ್ತೇನೆ ಎಂದರು.
ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕರು ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕಿದರು.
ಈ ಸಂದರ್ಭದಲ್ಲಿ ಗಾದಿಲಿಂಗನಗೌಡ, , ಹುಮಾಯೂನ್ ಖಾನ್, ವಿ ಎಸ್. ಶಿವಶಂಕರ್, ಪಿ ಗಾದೆಪ್ಪ, ಬಂಡಿಹಟ್ಟಿ ಮೋಹನ್, ಬಿ ಎಂ ಪಾಟೀಲ್, ಕೆರಗೋಡಪ್ಪ, ವೆಂಕಟೇಶ್ ಹೆಗಡೆ, ಸಂಗನಕಲ್ ವಿಜಯ್ ಕುಮಾರ್, ಕನಕ, ಎ ಕೆ ಗಂಗಾಧರ, ಜಿ ಗೋವರ್ಧನ್, ಬಿ ಏರಿ ಸ್ವಾಮಿ, ಜಾಸ್ವ ಮಹಿಳಾ ಘಟಕದ ಪದಾಧಿಕಾರಿಗಳು ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರಿದ್ದರು.