ಮುನಿರಾಬಾದ್ ವಿಧ್ಯಾರ್ಥಿಗಳಿಗೆ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೫- ಮುನಿರಾಬಾದ್ ಹೋಬಳಿಯ ವಿಧ್ಯಾರ್ಥಿಗಳಿಗೆ ಬಸ್ ಸೌಲಭ್ಯ ನೀಡುವಂತೆ ಆಗ್ರಹಿಸಿ ಎಐಡಿಎಸ್ಓ ಸಂಘಟನೆ ನೇತೃತ್ವದಲ್ಲಿ ವಿಧ್ಯರ್ಥಿಗಳು ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಸಂಚಾಲ ಗಂಗರಾಜ ಅಳ್ಳಳ್ಳಿ ಹುಲಿಗಿ, ಹೊಸ ಲಿಂಗಾಪುರ ಮತ್ತು ಮುನಿರಾಬಾದ್ ಮಧ್ಯದ ನಡುವಿನ ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳಿಗೆ ಫ್ಲೈ ಓವರ್ ನಿರ್ಮಿಸುತ್ತಿದ್ದು, ಇದರಿಂದಾಗಿ ಹುಲಿಗಿ, ಹೊಸ ಲಿಂಗಾಪುರ ಹೊಸಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಿಂದ ಮುನ್ರಾಬಾದ್ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಮುನಿರಾಬಾದ್ ಒಳಗೆ ಹಲವಾರು ಬಸ್ಸುಗಳು ಬರದೇ ಇರುವುದರಿಂದ, ಹಾಗೆಯೇ ಈ ಪ್ರಮುಖ ಹಳ್ಳಿಗಳಲ್ಲಿ ಯಾವುದೇ ಬಸ್ಸುಗಳು ನಿಲ್ಲಿಸದೆ ಮತ್ತು ಮುನಿರಾಬಾದ್ ಒಳಗಡೆ ಹೋಗದೆ ಹಾಗೆಯೇ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹೊಸಪೇಟೆಗೆ ಹೋಗುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳನ್ನು ಮುನಿರಾಬಾದ್ಗೆ ೩ ಕಿ.ಮೀ ಮುಂಚೆಯೇ ಬಸ್ ಗಳನ್ನು ನಿಲ್ಲಿಸುತ್ತಿರುವುದರಿಂದ ಹಲವು ಬಾರಿ ವಿದ್ಯಾರ್ಥಿಗಳು ನಡೆದುಕೊಂಡೇ ಬರುತ್ತಿದ್ದಾರೆ, ಒನ್ ವೇ ಅಲ್ಲೇ ಬರುತ್ತಿರುವುದರಿಂದ, ಅನೇಕ ಬಾರಿ ವಾಹನ ಅಪಘಾತಗಳು ಸಂಭವಿಸಿವೆ.
ಪಾಲಕರಿಗೂ ಕೂಡ ಶಾಲಾ ಮತ್ತು ಪಿಯು ವಿದ್ಯಾರ್ಥಿಗಳನ್ನು ಕಳಿಸಲು ಭಯಪಡುತ್ತಿದ್ದಾರೆ. ವಿದ್ಯಾರ್ಥಿಗಳು ಹಲವು ಬಾರಿ ನಡೆದುಕೊಂಡೆ ಹೋಗುವುದರಿಂದ ಶಾಲಾ-ಕಾಲೇಜುಗಳಲ್ಲಿ ತರಗತಿಗಳನ್ನು ಸರಿಯಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ಕೆಲವು ಬಸ್ಸುಗಳು ಹೊಸ ಲಿಂಗಾಪುರ, ಹುಲಿಗಿ, ಹೊಸಳ್ಳಿ ಮತ್ತು ಗಿಣಿಗೇರ ಮುಂತಾದ ಹಳ್ಳಿಗಳನ್ನು ವಿದ್ಯಾರ್ಥಿಗಳು ಬಸ್ ನಿಲ್ಲಿಸಿ ಎಂದರು ಸ್ಪಂದಿಸದೆ ಹಾಗೆ ಚಲಿಸಿಕೊಂಡು ಹೋಗುತ್ತಾರೆ,ಹಾಗೇ ಸಮರ್ಪಕವಾಗಿ ಬಸ್ಸುಗಳ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ವಿದ್ಯಾರ್ಥಿಗಳು ಬಸ್ ಅನ್ನು ಹತ್ತುವುದನ್ನು ನೋಡಿ ಹಲವು ಬಾರಿ ಬಸ್ ನಿಲ್ಲಿಸದೆಯೇ ಬಸ್ ಚಾಲಕರು ಹಾಗೆ ಹೋಗುತ್ತಾರೆ. ಕೆಲವು ಬಾರಿ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದಾಗಲೂ ಕೆಲವರು ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ಬಯುತ್ತಿದ್ದಾರೆ. ಈ ರೀತಿಯ ಅನೇಕ ಸಮಸ್ಯೆಗಳನ್ನ ಈ ಭಾಗದ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ ತಕ್ಷಣ ಕ್ರಮ ಕೈಗೋಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಕಾರ್ಯಕರ್ತರಾದ ಸದಾಶಿವ, ವೆಂಕಟೇಶ, ವಿಜಯಾನಂದ, ದೇವ, ವಿದ್ಯಾರ್ಥಿಗಳಾದ, ಸಾಹಿಲ್,ಸಂಜನಾ, ರೇಣುಕಾ, ಪ್ರೀತಮ್, ಸಾಧನ, ಲಿಂಗರಾಜ್ , ಸದಾಶಿವ ಮುನಿರಾಬಾದ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.