
ಗ್ಯಾರಂಟಿ ಅನುಷ್ಠಾನಕ್ಕೆ ನಿಗಾವಹಿಸಿ : ಪಿ.ಎಸ್.ಮಂಜುನಾಥ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 1- ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಅರ್ಹ ಫಲಾನುಭವಿಗಳಿಗೆ ಯೋಜನೆ ಜಾರಿಯಾಗಿರುವ ಯೋಜನಾ ವಿವರ ಸೇರಿ ಸಿರುಗುಪ್ಪ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಕಾರ್ಯ ವೈಖರಿಯ ಬಗ್ಗೆ ತಾಲೂಕು ಉಸ್ತವಾರಿ ಕಾರ್ಯದರ್ಶಿ ಹಾಗೂ ಡಿಎಂಎಫ್ ವಿಶೇಷ ಅಧಿಕಾರಿ ಪಿ ಎಸ್ ಮಂಜುನಾಥ ಅವರು ಪರಿಶೀಲನೆ ನಡೆಸಿದರು.
ತಾಲೂಕು ಕೃಷಿ ಪ್ರಧಾನವಾಗಿದ್ದು ಈಗಾಗಲೇ ಕಾಲುವೆ ಹಾಗೂ ತುಂಗಭದ್ರಾ ಜಲಾಶಯದಿಂದ ನೀರು ಹರಿದು ಬರುತ್ತಿದ್ದು ಕೃಷಿ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೆ ರೈತರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಜೊತೆಗೆ ನಾಟಿಗೆ ಇರುವ ಗುರಿ ತಲುಪುವಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಜೊತೆಗೆ ರಸಗೊಬ್ಬರ ಮಾರಾಟಗಾರರು ಕೃಷಿ ಚಟುವಟಿಕೆ ವೇಳೆಯಲ್ಲಿ ರಸಗೊಬ್ಬರ ಕೊರತೆಯ ವಾತಾವರಣ ಸೃಷ್ಟಿಯಾಗದಂತೆ ಅಗತ್ಯ ಇರುವಷ್ಟು ದಾಸ್ತಾನು ಬಗ್ಗೆ ಮಾಹಿತಿ ಪಡೆದರು ಆರೋಗ್ಯ ಇಲಾಖೆಯ ಚಟುವಟಿಕೆಗಳ ಬಗ್ಗೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿ.ಈರಣ್ಣ ಅವರೊಂದಿಗೆ ಮಾಹಿತಿ ಪಡೆದ ಅವರು ಬಳ್ಳಾರಿ ಜಿಲ್ಲೆಯಲ್ಲಿ ಡೆಂಗೆ ಪ್ರಕರಣಗಳು ಹೆಚ್ಚುತ್ತಿದ್ದು ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಡೆಂಗೆ ಸೇರಿ ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಸಿರುಗುಪ್ಪ ತಾಲೂಕಿನಲ್ಲಿ ಕಂಡುಬಂದಿರುವ ಪ್ರಕರಣಗಳ ಗಂಭೀರವಾಗಿ ಪರಿಗಣಿಸಿ ರೋಗ ಹರಡದಂತೆ ನಿಗ ವಹಿಸುವಂತೆ ಸೂಚನೆ ನೀಡಿದರು.
ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳ ಅನುಷ್ಠಾನ ಪ್ರಗತಿ ಕುರಿತಂತೆ ಹಾಗೂ ಸಮಸ್ಯೆ ಕುರಿತಂತೆ ಪೂರ್ವ ಸಿದ್ಧತೆಗಳೊಂದಿಗೆ ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಅಂಗನವಾಡಿ ಕಟ್ಟಡ ನಿವೇಶನ ಸಮಸ್ಯೆ ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಪ್ರದೀಪ್ ಅವರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಹೆಚ್ ವಿಶ್ವನಾಥ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್, ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ, ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಇದ್ದರು.