
ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ಶ್ರೀದೇವಿ ಮಹಾತ್ಮೆಯ ಪುರಾಣ ಪ್ರವಚನ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 5- ಶ್ರೀ ಕಾಳಿಕಾ ಕಮಠೇಶ್ವರ ದೇವಸ್ಥಾನ ದೇಶನೂರು ರಸ್ತೆ ಸಿರುಗುಪ್ಪದಲ್ಲಿ ನವರಾತ್ರಿ ಮಹೋತ್ಸವ ಹಾಗೂ ಶ್ರೀದೇವಿ ಮಹಾತ್ಮೆಯ ಪುರಾಣ ಪ್ರವಚನ ಎರ್ಪಡಿಸಲಾಗಿದೆ.
ಡಿ.ಹಿರೇಹಾಳ ಮದಾನೆಗುಂದಿ ಸಂಸ್ಥಾನದ ಸರಸ್ವತಿ ಪೀಠಾಧ್ಯಕ್ಷರಾದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಉಪ್ಪಾರ್ ಹೊಸಳ್ಳಿ ನಾಗಲಿಂಗೇಶ್ವರ ಮಠ ಕರಸ್ಥಳ ಶ್ರೀ ನಾಗಲಿಂಗ ಮಹಾಸ್ವಾಮಿಗಳು ಅವರ ದಿವ್ಯ ಸಾನಿಧ್ಯದಲ್ಲಿ ಗದಗ ಇಲಕಲ್ ಗಾನಯೋಗಿ ಡಾ.ಪಂಡಿತ ಪುಟ್ಟರಾಜ ಕವಿ ಶಿವಯೋಗಿಗಳ ಶಿಷ್ಯ ಆರ್.ಶರಣಬಸವ ಶಾಸ್ತ್ರಿಗಳು ಸಂಗೀತ ಮರಿಸ್ವಾಮಿ ಮಂಗಳೂರು ತಬಲ ವಾದಕ ವೀರೇಶ ಬಿ. ಹಿರೇಮಠ ರಾವಿಹಾಳ್ ಅಕ್ಟೋಬರ್ ೧೨ರಂದು ಶನಿವಾರ ವಿಜಯದಶಮಿ ದಿನದಂದು ಸರ್ವಭಕ್ತರು ಕಾಳಿಕಾದೇವಿಯ ದೇವಾಲಯದಲ್ಲಿ ಬಂಗಾರದAತ ಬನ್ನಿ ಮುಡಿದು ಕಾಳಿಕಾ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದರು.
ಗೌರವಾಧ್ಯಕ್ಷ ಷಣ್ಮುಖ ಆಚಾರಿ, ಅಧ್ಯಕ್ಷ ಈಶ್ವರ ಆಚಾರಿ, ಕಾರ್ಯದರ್ಶಿ ಮಾನವಚಾರಿ, ವಿಶ್ವಕರ್ಮ ಮಹಾ ಸಭಾಧ್ಯಕ್ಷ ಮೌನೇಶ್ ಆಚಾರ್ಯ, ವಿಶ್ವಕರ್ಮ ಸಮಾಜದ ಮುಖಂಡ ಹೆಚ್.ಎಸ್.ನಾಗರಾಜ, ಮಲ್ಲಯ್ಯ, ವಿ.ಮೌನೇಶ ಆಚಾರಿ, ಶಿಲ್ಪಿ ಸುರೇಶ, ರೋಹಿತ್, ಹನುಮೇಶ, ಬಿಡಿಸಿಸಿ ಬ್ಯಾಂಕ್ ಮಂಜುನಾಥ, ವಿಶ್ವಕರ್ಮ ಸಮಾಜದ ಪ್ರಮುಖರು ಹಾಗೂ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷರಾದ ಜಾನಕಿ ತಾರಾನಾಥಾಚಾರಿ, ಸಮಾಜದ ಮಹಿಳೆಯರು, ಶ್ರೀ ಕಾಳಿಕಾ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಸರ್ವರಿಗೂ ಆದರದ ಸ್ವಾಗತವನ್ನು ಹಾಗೂ ನವರಾತ್ರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿಕೊ0ಡಿದ್ದಾರೆ.