
ಕಾಮಗಾರಿಗೆ ಶೀಘ್ರ ಅನುದಾನ : ಬಸವರಾಜ ರಾಯರೆಡ್ಡಿ
ಕರುನಾಡ ಬೆಳಗು ಸುದ್ದಿ
ಕುಕನೂರು, 7- ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನ, ಬಾಲ ಭವನ ಮತ್ತು ಶಾದಿ ಮಹಲ್ ಕಾಮಗಾರಿಯನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಬುಧವಾರ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಾಗೂ ಶಾದಿ ಮಹಲ್ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡಲಾಗುವುದು. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸತ್ಯ ನಾರಾಯಣಪ್ಪ ಹರಪನಹಳ್ಳಿ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ, ಪ.ಪಂ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ, ಸ್ಥಾಯಿ ಸಮಿತಿ ಅಧ್ಯಕ್ಷ ನೂರುದ್ದೀನ್ ಗುಡಿಹಿಂದೆ, ಸದಸ್ಯ ರಾಮಣ್ಣ ಬಂಕದಮನಿ, ಸಿರಾಜುದ್ದೀನ್ ಕರಮುಡಿ, ಮಂಜುನಾಥ್ ಕೋಳೂರು, ಪ.ಪಂ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟ, ಸಿಡಿಪಿಓ ಬೆಟ್ಟದಪ್ಪ ಮಳೇಕೊಪ್ಪ, ಜೆಇ ಶಿವಕುಮಾರ, ಯಲ್ಲಪ್ಪ ಕಲ್ಮನಿ, ಪರಶುರಾಮ್ ಸಕ್ರಣವರ, ಮಂಜುನಾಥ್ ಯಡಿಯಾಪುರ, ರಾಘು ಕಾತರಕಿ ಇತರರಿದ್ದರು.