
ಮಕ್ಕಳ ದಿನಚರಣೆ ಪ್ರಯುಕ್ತ ಶಹಪುರದಲ್ಲಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 15- ತಾಲೂಕಿನ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಅವರಲ್ಲಿನ ಜ್ಞಾನ ಕೌಶಲ್ಯ ಹಾಗೂ ಪ್ರತಿಭಾ ಸಂಪನ್ನತೆಗೆ ಸಾಣೆ ಹಿಡಿಯಲಾಯಿತು.
ಮಕ್ಕಳ ದಿನಾಚರಣೆ ಆಚರಿಸುವ ಈ ಸಂದರ್ಭದಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಡಿ ಚಂದ್ರಶೇಖರ್ ಕಂಬಾರ ತಂಡವು ಪ್ರಥಮ, ಕುವೆಂಪು ತಂಡ ದ್ವಿತೀಯ, ಮಾಸ್ತಿ ತಂಡವು ತೃತೀಯ ಬಹುಮಾನ ಪಡೆಯಿತು. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಬಹುಮಾನ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಶೃತಿ ಸುದ್ದಿ ಪ್ರಥಮ, ದ್ವಿತೀಯ ಸ್ಥಾನ ಅಂಜಲಿ, ಚಿತ್ರಕಲೆ ಸ್ಪರ್ಧೆಯಲ್ಲಿ ಚೈತ್ರಾ ಪ್ರಥಮ, ಅಭಿನಯ ಗೀತೆಯಲ್ಲಿ ರೇವತಿ ಪ್ರಥಮ, ಕಥೆ ಹೇಳುವ ಸ್ಪರ್ಧೆಯಲ್ಲಿ ನಯನ ಪ್ರಥಮ, ಕನ್ನಡ ಕಂಠ ಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಅಕ್ಷತಾ, ಮತ್ತು ತೃತೀಯ ಸ್ಥಾನ ಎಲ್ಲಮ್ಮ, ಸಂಸ್ಕೃತ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ವಂದನಾ ದ್ವಿತೀಯ, ಆಶುಭಾಷಣ ಸ್ಪರ್ಧೆಯಲ್ಲಿ ಚನ್ನಬಸವ ತೃತೀಯ, ಛಧ್ಮವೇಷ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ವಿಭಾಶ್ರೇಯ ಬಹುಮಾನ ಪಡೆದರು.
ಈ ಸಂದರ್ಭದಲ್ಲಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಹುಲ್ಲೇಶ್ ಸಿಂಧೋಗಿ, ಉಪಾಧ್ಯಕ್ಷರು ಮತ್ತು ರಸಪ್ರಶ್ನೆ ಕಾರ್ಯಕ್ರಮದ ದ್ವಿತೀಯ ಬಹುಮಾನ ವಿತರಣೆಯ ದಾನಿಗಳಾದ ರೇವತಿ ಗೋನಾಳ, ಸದಸ್ಯರಾದ ಮಂಜುನಾಥ್ ಸಿಂದೋಗಿ, ಲಕ್ಷ್ಮೀದೇವಿ ಗೊಲ್ಲರ್, ಲಕ್ಷ್ಮಣ ಸಿಂದೋಗಿ, ವೀರೇಶ್ ತೋಟದ್, ಪ್ರಥಮ ಮತ್ತು ತೃತೀಯ ಬಹುಮಾನ ವಿತರಣೆಯ ಧಾನಿಗಳಾದ ಗ್ರಾಪಂ ಸದಸ್ಯ ಹಾಲಪ್ಪ ತೋಟದ್ ಮತ್ತು ಕುಟುಂಬ, ಗೌರವಾನ್ವಿತ ಮುಖ್ಯೋಪಾಧ್ಯಾಯರಾದ ದೇವರಾಜ್, ರಸಪ್ರಶ್ನೆ ಕಾರ್ಯಕ್ರಮದ ಅಯೋಜಕರು ಸಹಶಿಕ್ಷಕರ ಎ.ಸಿ.ರಘು, ಕೃಷ್ಣ, ಶರಣಪ್ಪ, ಆಂಜನೇಯ, ಶಿಕ್ಷಕಿಯಾದ ಸಯ್ಯದ್ ಜೇಭಾ, ಜ್ಯೋತಿ ಇದ್ದರು.