
ವಸೂಲಾತಿಯಲ್ಲಿ ಸಹಕಾರ ಸಂಘವು ಶೇ.97% ಪ್ರಗತಿ ಸಾಧಿಸಿದೆ : ಆರ್.ಚಿದಾನಂದ
ಕರುನಾಡ ಬೆಳಗು ಸುದ್ದಿ
ವಿಜಯನಗರ, 23- 2023-24ನೇ ಸಾಲಿನಲ್ಲಿ ತಾಲೂಕಿನ ಬೈಲುವದ್ದಿಗೇರಿ ಕೃಷಿ ಪತ್ತಿನ ಸಹಕಾರ ಸಂಘವು ರೂ.83,33,94,997 ಕೋಟಿ ವಹಿವಾಟು ನಡೆಸಿ, ಸಂಘಕ್ಕೆ 7,37,612 ಲಕ್ಷ ನಿವ್ವಳ ಲಾಭ ಬಂದಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಂ.ರೇವಯ್ಯಸ್ವಾಮಿ ಹೇಳಿದರು.
ಸಂಘದ ನೂತನ ಕಟ್ಟಡದಲ್ಲಿ ಅಧ್ಯಕ್ಷ ಆರ್.ಚಿದಾನಂದ ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಜನ ಸಭೆಯಲ್ಲಿ ಮಾತನಾಡಿ, ಸಂಘವು ೨೫೭೯ ಸದಸ್ಯರನ್ನು ಹೊಂದಿದ್ದು, ಷೇರು ಬಂಡವಾಳ ರೂ.೧,೫೮,೦೧೬೬೫ ಕೋಟಿ, ಹಾಗು ನಿಧಿಗಳಿಂದ ೯೬,೩೦,೩೦೬ ಲಕ್ಷ ಸೇರಿ ಒಟ್ಟು ೨,೫೪,೩೧,೯೭೧ ಕೋಟಿ ಹೊಂದಿದೆ.
ಒಟ್ಟು ಠೇವಣಿ ರೂ.೧೮,೧೯,೬೯,೮೬೭ ಕೋಟಿ ಹೊಂದಿದ್ದು, ಬಿಡಿಸಿಸಿ ಬ್ಯಾಂಕಿನಿAದ ರೂ.೧೧,೯೪,೮೪,೮೯೪ ಕೋಟಿ ರೂಪಾಯಿಗಳನ್ನು ಪಡೆಯಲಾಗಿದೆ. ರೈತರಿಗೆ ರೂ.೧೦,೯೭,೬೭,೭೭೭ ಕೋಟಿ ಕೆಸಿಸಿ ಸಾಲ ನೀಡಲಾಗಿದೆ.ಬಿಡಿಪಿ ಸಾಲ ರೂ.೧೨,೪೬,೭೭,೭೦೩ ಕೋಟಿ ನೀಡಲಾಗಿದೆ. ಸ್ವಸಹಾಯ ಸಂಘಗಳಿಗೆ ರೂ.೬೦,೧೦,೮೧೦ ಲಕ್ಷ ನೀಡಲಾಗಿದೆ. ವಸೂಲಾತಿಯಲ್ಲಿ ಸಂಘವು ಶೇ.೯೭% ಪ್ರಗತಿ ಸಾಧಿಸಿದೆ ಎಂದರು.
೨೦೨೪_೨೫ ಸಾಲಿನಲ್ಲಿ ಷೇರು ಬಂಡವಾಳ ೧.೬೦ ಕೋಟಿ, ಠೇವಣಿ ಸಂಗ್ರಹ ೧೮ ಕೋಟಿ, ಸಾಲ ವಿತರಣೆ ೨೨ ಕೋಟಿ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮುಖಂಡರಾದ ಕೋರಿ ಪಕ್ಕೀರಪ್ಪ, ಅನ್ನದಾನರೆಡ್ಡಿ, ಗುಜ್ಜಲ ಶ್ರೀನಿವಾಸ, ಉಳ್ಳಿ ಕೃಷ್ಣಪ್ಪ, ರೇವಣ್ಣನವರ ನಾಗರಾಜ, ಹೊನ್ನೂರಪ್ಪ, ಮೆಟ್ರಿ ಜಡೆಪ್ಪ, ವೈ.ಕೊಮಾರೆಪ್ಪ, ಮಲ್ಲಿಕಾರ್ಜುನ, ಸಂಗಪ್ಪ, ಸಿದ್ದಯ್ಯಸ್ವಾಮಿ, ಓ.ನಾಗರಾಜ, ಎರಿಸ್ವಾಮಿ, ಪರಶುರಾಮ, ರಾಜೇಶ್ವರಿ, ಗಿರೀಶ, ಅನಿಲ, ಲಕ್ಷ್ಮಿರೆಡ್ಡಿ ಸೇರಿದಂತೆ ಇತರರು ಇದ್ದರು.