
ರೇಬೀಸ್ ಮಾರಣಾಂತಿಕ ಕಾಯಿಲೆ ನಿರ್ಲಕ್ಷ್ಯ ಮಾಡದೆ ಲಸಿಕೆ ಹಾಕಿಸಿ : ಡಾ.ಈರಣ್ಣ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 01- ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಜಿಲ್ಲಾ ಸರ್ವೇಕ್ಷಣ ಘಟಕ ಬಳ್ಳಾರಿ ಮತ್ತು ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಸಿರುಗುಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೇಬಿಸ್ ದಿನ ಆಚರಣೆ ಮತ್ತು ವಿಶ್ವ ಹಿರಿಯ ನಾಗರಿಕ ದಿನಾಚರಣೆ ಕಾರ್ಯಕ್ರಮಗಳನ್ನು ತಾಲೂಕು ಆರೋಗ್ಯ ಅಧಿಕಾರಿಗಳ ಅಧ್ಯಕ್ಷತೆ ಮತ್ತು ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಹಿರಿಯ ನಾಗರಿಕರ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಯಿತು.
ಟಿಹೆಚ್‌ಓ ಡಾ.ಬಿ.ಈರಣ್ಣ ಮಾತನಾಡಿ, ನಾಯಿಗಳಿಂದ ಮಕ್ಕಳನ್ನು ದೂರವಿಡಿ ನಾಯಿ ಕಡಿತಕ್ಕೆ ಒಳಗಾದ ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಬನ್ನಿ ರೋಗ ನಿರೋಧಕ ರೇಬಿಸ್ ಚುಚ್ಚುಮದ್ದು ವೈದ್ಯರ ಸಲಹೆಂತೆ ಹಾಕಿಸಿ ಈ ವರ್ಷದ ಘೋಷ ವಾಕ್ಯ ರೇಬಿಸ್ ಗಡಿಗಳನ್ನು ಮೀರಿ ಮುಂದುವರಿಯೋಣ ರೇಬೀಸ್ ಮಾರಣಾಂತಿಕ ಕಾಯಿಲೆ ನಿರ್ಲಕ್ಷ್ಯ ಮಾಡದೆ ಲಸಿಕೆ ಹಾಕಿಸಿ ಪ್ರಾಣ ಉಳಿಸಿ ಎಂದು ಕೋರಿದರು.
ಹಿರಿಯ ನಾಗರಿಕರು ಕಾಲ ಕಾಲಕ್ಕೆ ಮಧುಮೇಹ ಅಧಿಕ ರಕ್ತದೊತ್ತಡ ಕೆಮ್ಮು ಮೂತ್ರ ಪರೀಕ್ಷೆ ರಕ್ತದಲ್ಲಿನ ಹೀಮೋಗ್ಲೋಬಿನ್ ಪರೀಕ್ಷೆ ಹಾಗೂ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುತ್ತ ಆರೋಗ್ಯಕರ ಜೀವನ ನಡೆಸುವಂತೆ ಸಲಹೆ ನೀಡಿದರು.
ನಂತರದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಖಾಸಿಂ ಮಾತನಾಡಿ ರೇಬಿಸ್ ಕಾಯಿಲೆ ನಾಯಿ ಕಡಿತದಿಂದ ಶೇಕಡ ೯೭ ರಷ್ಟು ಹರಡುವ ಸಾಧ್ಯತೆ ಇದೆ. ನಾಯಿ ಕಡಿತಕ್ಕೆ ಒಳಗಾದ ಕೂಡಲೇ ಸ್ವಚ್ಛವಾದ ನೀರಿನಿಂದ ಇಲ್ಲವೇ ಉಗುರು ಬೆಚ್ಚಗಿನ ನೀರಿನಿಂದ ಸಾಬೂನು ಬಳಸಿ ಗಾಯವನ್ನು ತೊಳೆದುಕೊಂಡು ಆಸ್ಪತ್ರೆಯಲ್ಲಿ ಉಚಿತ ಲಭ್ಯವಿರುವ ರೇಬಿಸ್ ರೋಗ ನಿರೋಧಕ ಲಸಿಕೆ ಪಡೆದುಕೊಳ್ಳಬೇಕು.
ಯಾವುದೇ ಮೂಡನಂಬಿಕೆಗೆ ಒಳಗಾಗದೆ ಅರಿಶಿನ ಪುಡಿ, ಎಲೆ ತಪ್ಪಲಗಳು ಕಟ್ಟುವುದು ಗಾಯದ ಜಾಗವನ್ನು ಸುಡುವುದು ಮಂತ್ರ ತಂತ್ರ ತಾಯತಗಳಿಗೆ ಒಳಗಾಗದೆ ಜಾಗೃತರಾಗಿ ಆಸ್ಪತ್ರೆಗೆ ಬರುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಏಆರ್‌ಎಸ್ ಸಮಿತಿಯ ಸದಸ್ಯರಾದ ವಡ್ಡಪ್ಪ, ಶ್ರೀಕಾಂತ್, ಮಲ್ಲಿಕಾರ್ಜುನ ಹಾಗೂ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭೀಮರೆಡ್ಡಿ ಮತ್ತು ಹಿರಿಯ ನಾಗರಿಕರು ಉಪಸ್ಥಿತರಿದ್ದರು.