
ಕುಷ್ಟಗಿ: ವಿವಿಧ ಕಾಮಗಾರಿ ವೀಕ್ಷಣೆ ಮಾಡಿದ ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ರತ್ನಂ ಪಾಂಡೆ
ತಾಲೂಕಿನ ಹನುಮಸಾಗರ ಹಾಗೂ ತಳವಗೇರಾ ಗ್ರಾಮ ಪಂಚಾಯತಿಗೆ ವ್ಯಾಪ್ತಿಯ ವಿವಿಧ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ ರವರು ಶುಕ್ರವಾರದಂದು ಭೇಟಿ ನೀಡಿದರು.
ಈ ವೇಳೆ ಅವರು ಹನುಮಸಾಗರ ಗ್ರಾಮದ ಡಬ್ಲ್ಯೂಟಿಪಿ ಘಟಕಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಕುರಿತು ಚರ್ಚಿಸಿದರು. ನಂತರ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಆಗಾಗ ತೊಂದರೆ ಕಂಡು ಬರುತ್ತಿದ್ದೆ ಇದನ್ನು ಸರ್ಕಾರದ ಹಂತದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು ನಂತರ ಹನುಮಸಾಗರ ಗ್ರಾಮದ ಕಸ್ತೂರಿ ಬಾ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳೊಂದಿಗೆ ತಾಯಿ ಹೆಸರಲ್ಲಿ ಒಂದು ವೃಕ್ಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಪರಿಸರ ಸಂರಕ್ಷಣೆಗಾಗಿ ತಾಯಿ ಹೆಸರಲ್ಲಿ ಒಂದು ವೃಕ್ಷ ಎಂಬ ಕಾರ್ಯಕ್ರಮ ಮಾಡಲಾಗುತ್ತಿದ್ದು ಸಾಮಾಜಿಕ ಅರಣ್ಯ ಇಲಾಖೆಯಿಂದ ಈಗಾಗಲೇ ೩, ೨೭, ೦೦೦ ಸಸಿ ನೆಡಲು ಗುರಿ ಇಟ್ಟುಕೊಂಡಿದ್ದು ಈಗಾಗಲೇ ೧, ೫೦, ೦೦೦ ಸಸಿಗಳನ್ನು ನೆಡಲಾಗಿದ್ದು ಇನ್ನು ಒಂದು ತಿಂಗಳಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಸಸಿ ನೆಡುವ ಕುರಿತು ಪ್ರಗತಿ ಸಾಧಿಸಲಾಗುವುದು ಎಂದು ತಿಳಿಸಿದರು. ನಂತರ ಈ ಕಾರ್ಯಕ್ರಮದ ಉದ್ದೇಶ ತಾಯಿ ಹೆಸರಲ್ಲಿ ಸಸಿ ನೆಡುವದರಿಂದ ಹೆಚ್ಚು ಹೆಚ್ಚು ಸಸಿ ಗಳನ್ನು ನೆಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಹಾಗೂ ಕಸ್ತೂರಿ ಬಾ ಶಾಲೆಯ ಮಕ್ಕಳ ಕೊಠಡಿಗೆ ಭೇಟಿ ನೀಡಿ ಶಾಲೆಯ ಮೂಲಭೂತ ಸೌಕರ್ಯಗಳ ಕುರಿತು ಮಕ್ಕಳೊಂದಿಗೆ ಚರ್ಚಿಸಿದರು.
ನಂತರ ತಳುವಗೇರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿಡಶೇಷಿ ಗ್ರಾಮದ ಇಸ್ರೇಲ್ ಮಾದರಿಯ ಸಸ್ಯ ಕ್ಷೇತ್ರ ಕ್ಕೆ ಭೇಟಿ ನೀಡಿ ಸಸ್ಯ ಕ್ಷೇತ್ರದ ಎಲೆ , ಪೆರಲ , ದಾಳಿಂಬೆ, ಡ್ರ್ಯಾಗನ್ , ಹಾಗೂ ಇನ್ನಿತರ ಸಸ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಮಾನ್ಯ ತೋಟಗಾರಿಕೆ ಇಲಾಖೆ ಡಿಡಿ ಕೃಷ್ಣ ಉಕ್ಕುಂದ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಂಪಾಪತಿ ಹಿರೇಮಠ್, ಸಹಾಯಕ ನಿರ್ದೇಶಕರಾದ ನಿಂಗನಗೌಡ ವಿ ಹೆಚ್, ಆರ್ ಡಬ್ಲ್ಯೂ ಎಸ್ ಇಲಾಖೆ ಎ ಇ ಇ ವಿಜಯಕುಮಾರ್, ಹಾಗೂ ಸಿಬ್ಬಂದಿ ವರ್ಗ , ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ಪಿ ಡಿ ಒ ದೇವೇಂದ್ರಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ,ತಾಲೂಕ ಪಂಚಾಯತ್ ನರೇಗಾ ಸಿಬ್ಬಂದಿಗಳಾದ ಬಸವರಾಜ್ ಕೆ, ಚಂದ್ರಶೇಖರ್ ಜಿ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಹಾಜರಿದ್ದರು.