ನಿಶಾ ಎಸ್ .ಏನ್ ಐಎಎಸ್ ತರಬೇತಿಗೆ : ಶುಭ ಕೋರಿದ ರಾಜಣ್ಣ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ ಡಿಸೆಂಬರ್ 2 –  ಆ ವಿಭಜಿತ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಿಶಾ ಎಸ್ಎನ್ ದೇಶದಲ್ಲಿ ಯು.ಪಿ.ಎಸ್‌.ಸಿ ನಡೆಸುವ ಪರೀಕ್ಷೆಯಲ್ಲಿ ಪಾಸಾಗಿ 20 ತಿಂಗಳ ಕಾಲ ತರಬೇತಿಗಾಗಿ ಇಂದ್ರಾ ಗಾಂಧಿ ನ್ಯಾಷನಲ್ ಫಾರೆಸ್ಟ್ ಅಕಾಡೆಮಿ ಮತ್ತು ಉತ್ತರ ಕಾಂಡ ರಾಜ್ಯಕ್ಕೆ ಇದೆ ಡಿಸೆಂಬರ್ 9 ರಿಂದ ಹೋಗುತ್ತಿದ್ದಾರೆ,
ಇವರಿಗೆ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ದ ವತಿಯಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜಿಲ್ಲಾಧ್ಯಕ್ಷರಾದ ರಾಜಶೇಖರ್ (ಕುರಿಹಟ್ಟಿ ರಾಜಣ್ಣ) ಅವರು ಶುಭ ಕೋರಿದರು.

ವೇದಿಕೆಯ ಬಳ್ಳಾರಿಯ ಜಿಲ್ಲಾ ಕಚೇರಿಯಲ್ಲಿ ನಿಶಾ ಎಸ್ ಎನ್ ಅವರನ್ನು ಚಾಲುವಾದಿಸಿ ಹೂ ಹುಚ್ಚ ನೀಡಿ ಸನ್ಮಾನಿಸಿ, ಮಾತನಾಡಿದ ರಾಜಣ್ಣ, ಯುಪಿಎಸ್‌ಸಿ ಪರೀಕ್ಷೆಯನ್ನು ನಮ್ಮ ದಕ್ಷಿಣ ಭಾರತದಲ್ಲಿ ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ತೆಗೆದುಕೊಳ್ಳುವವರ ಸಂಖ್ಯೆ ಬಹಳ ಕಡಿಮೆ, ಅದರಲ್ಲೂ ನಮ್ಮ ಕೂಡ್ಲಿಗಿ ತಾಲೂಕಿನ ನಿಶಾ ಎಸ್ಎನ್ ಅವರು ಪರೀಕ್ಷೆಯನ್ನು ತೆಗೆದುಕೊಂಡು ಅತ್ಯಂತ ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ಪಾಸಾಗಿ ತರಬೇತಿಗೆ ತೆರಳುತ್ತಿದ್ದಾರೆ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು. ಪರೀಕ್ಷೆ ಭಯ ಎಲ್ಲರಿಗೂ ಇದ್ದದ್ದೇ ಎದೆಗುಂದದೆ ಅವಿರತ ಶ್ರಮದಿಂದ ನಾವು ಏನನ್ನಾದರೂ ಸಾಧಿಸಬಹುದು ಆದ್ದರಿಂದ ಪರೀಕ್ಷಾ ಭಯವನ್ನು ತೊಲಗಿಸಿಕೊಳ್ಳಬೇಕು ತನ್ಮೂಲಕ ಉನ್ನತವಾದ ಸ್ಥಾನವನ್ನು ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಯಾರಿಗೆ ಆಗಲಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿ ನಮ್ಮ ವೇದಿಕೆಯನ್ನು ಸಂಪರ್ಕಿಸಿದಲ್ಲಿ ಅವರಿಗೆ ನಮ್ಮ ಕೈಲಾದ ಸಹಾಯ ಮತ್ತು ಸಹಕಾರವನ್ನು ನೀಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿ ಕಟಗಿ ಸೂರಿ ಸೇರಿದಂತೆ ಇತರ ಪದಾಧಿಕಾರಿಗಳು ಮತ್ತು ನಿಶಾ ಅವರ ಪೋಷಕರು ಇದ್ದರು.

Leave a Reply

Your email address will not be published. Required fields are marked *

error: Content is protected !!