
ಶಾಸಕರಿಂದ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ, 21- ಹೋಬಳಿ ವ್ಯಾಪ್ತಿಯ ಡಣಾಯಕನಕೆರೆ ಗ್ರಾಮದಲ್ಲಿ ಗ್ರಾ.ಪಂ 2022-23ನೇ ಸಾಲಿನ ೩೫ ಲಕ್ಷ ಮೊತ್ತದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಭಾರತ್ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣದ ನೂತನ ಕಟ್ಟಡವನ್ನು ಶಾಸಕ ನೇಮಿರಾಜ್ ನಾಯ್ಕ್ ಉದ್ಘಾಟಿಸಿದರು.
ಇದು ಸಣ್ಣ ಗ್ರಾ.ಪಂ. ಆಗಿದ್ದರು ಎಲ್ಲಾ ಗ್ರಾ.ಪಂ ಸದಸ್ಯರು ಒಗ್ಗೂಡಿ ಗ್ರಾ.ಪಂ ಕಟ್ಟಡ ನಿರ್ಮಾಣಕ್ಕೆ ಸಾಕ್ಷಿಯಾಗಿದ್ದಾರೆ. ಸರ್ಕಾರದಿಂದ ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಬೇಕಾದರೆ ಗ್ರಾ.ಪಂಚಾಯಿತಿ ಮುಖಾಂತರ ಅನುದಾನ ಬರಲಿದೆ ಇದನ್ನ ಸೂಕ್ತ ರೀತಿಯಲ್ಲಿ ಅಧಿಕಾರಿಗಳು ಮತ್ತು ಗ್ರಾ.ಪಂ ಸದಸ್ಯರು ಒಗ್ಗೂಡಿ ಕೆಲಸಗಳನ್ನ ಮಾಡಿದರೆ ಗ್ರಾಮಗಳನ್ನ ಮಾದರಿ ಮಾಡಬಹುದು ಎಂದರು.
ಅಭಿವೃದ್ಧಿ ವಿಚಾರದಲ್ಲಿ ಯಾರೂ ಸಹ ರಾಜಕೀಯ ಮಾಡಬಾರದು ಒಂದು ರಾಜಕೀಯ ಮಾಡಿದ್ರೆ ಗ್ರಾಮಗಳ ಅಭಿವೃದ್ಧಿ ಮಾಡುವುದಕ್ಕೆ ಸಾಧ್ಯವಿಲ್ಲ ಹಾಗಾಗಿ ಅಭಿವೃದ್ಧಿ ಕಾರ್ಯಗಳು ಬಂದಾಗ ಯಾರೂ ಸಹ ರಾಜಕೀಯ ಮಾಡದೇ ಎಲ್ಲಾರು ಒಂದುಗೂಡಿ ಅಭಿವೃದ್ಧಿಗೆ ಕೈ ಜೋಡಿಸಿ, ನನ್ನ ಸಹಕಾರ ಯಾವಾಗಲೂ ಇದ್ದೇ ಇರುತ್ತದೆ ಎಂದರು.
ತಾ.ಪA ಇಒ ಲಕ್ಷ್ಮೀಕಾಂತ ಡಿ ಮಾತನಾಡಿ, ಡಣಾಯಕನಕೆರೆ ಗ್ರಾ.ಪಂ ೧೮ ಜನ ಸದಸ್ಯರನ್ನು ಹೊಂದಿರುವ ಪಂಚಾಯಿತಿಯಾಗಿದೆ. ಕಳೆದ ವರ್ಷ ಇದೇ ಗ್ರಾ.ಪಂ ಗಾಂಧಿ ಗ್ರಾಮ ಪುರಸ್ಕಾರ ಹೊಂದಿದ ಹೆಗ್ಗಳಿಕೆ ಹೊಂದಿದೆ, ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ತಾಲೂಕಿನದ್ಯಾಂತ ಕಚೇರಿಗಳನ್ನ ಮಾಡೊ ಗುರಿ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹೊಸಪೇಟೆ ತಾಲೂಕು ಐಇಸಿ ಸಂಯೋಜಕ ಹೆಚ್.ನಾಗರಾಜ, ಡಣಾಯಕನಕೆರೆ ಗ್ರಾ.ಪಂ ಅಧ್ಯಕ್ಷ ಚಿನ್ನಾಪ್ರಪ್ಪ, ಉಪಾಧ್ಯಕ್ಷೆ ಎಲ್.ನೇತ್ರಸೂರ್ಯ ಪ್ರಕಾಶ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜಿಲಾನ್ ಭಾಷ ಹಾಗೂ ಗ್ರಾ.ಪಂ ಸದಸ್ಯ ಉಪ್ಪಾರ ಸೋಮಪ್ಪ, ರೇಣುಕಾ, ಕುರುಬರ ರಮೇಶ್, ನಾಗಪ್ಪ ಸೇರಿದಂತೆ ತಾಂತ್ರಿಕ ಸಹಾಯಕರು ಬಿಎಫ್‌ಟಿಗಳು ಮತ್ತು ಗ್ರಾಮದ ಮುಖಂಡರು ಭಾಗಿಯಾಗಿದ್ದರು.