
ಓದು ಮಕ್ಕಳ ಜ್ಞಾನ ವಿಕಾಸದ ಹಾದಿಗೆ ತೊಟ್ಟಿಲು : ರಮೇಶ್ ಸುರ್ವೇ
ಕರುನಾಡ ಬೆಳಗು ಸುದ್ದಿ
ಕುಕನೂರು, 7- ಇಂದಿನ ಯಾಂತ್ರಿಕ ಜೀವನದಲ್ಲಿ ವಿದ್ಯಾರ್ಥಿಗಳ ಜೀವನ ಮತ್ತು ವ್ಯಕ್ತಿತ್ವ ಉಜ್ವಲ ಭವಿಷ್ಯಕ್ಕೆ ಪುಸ್ತಕ ಹಾಗೂ ಪತ್ರಿಕೆಗಳ ಓದಿನ ಅಭಿರುಚಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹಿರಿಯ ಪತ್ರ ಕತ೯ ಹಾಗೂ ಚಲನ ಚಿತ್ರ ನಿದೆ೯ಶಕ ರಮೇಶ ಸುವೆ೯ ಅಭಿಪ್ರಾಯ ಪಟ್ಟರು.
ಕುಕನೂರಿನ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ (ರಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾಲ್ಲೂಕಿನ ಇಟಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಪುಸ್ತಕ – ,ಪತ್ರಿಕೆ ಸಂಸ್ಕೃತಿ ಅಭಿಯಾನ ಹಾಗೂ ೮ ನೆಯ ಮಕ್ಕಳ ಸಾಂಸ್ಕೃತಿಕ ಪ್ರತಿಭೋತ್ಸವ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಚಾರಿತ್ರಿಕ ಹಿನ್ನಲೆಯ ವಿದ್ಯಾಥಿ೯ ಗಳ ಜ್ಞಾನ ವಿಕಾಸದ ಹಾದಿಯಲ್ಲಿ ಮುನ್ನಡೆಯಲು ಪ್ರತಿಯೊಬ್ಬರೂ ಓದುವ ವಾತಾವರಣ ಸೃಷ್ಟಿಸಿ ಉತ್ತಮ ಭವಿಷ್ಯ ಕಂಡು ಕೊಳ್ಳಬೇಕು, ಒಂದು ಕಾಲದಲ್ಲಿ ತಾವು ಇದೆ ಶಾಲೆಯಲ್ಲಿದ್ದಾಗ ಪಠ್ಯ ಪುಸ್ತಕ ಹೊರತು ಪಡಿಸಿ ಕೃತಿ ಹಾಗೂ ಪತ್ರಿಕೆ ಓದುವ ವಾತಾವರಣ ವಿರಲಿಲ್ಲ ಈಗ ಸಾಕಷ್ಟು ಅನುಕೂಲ ಇವೆ, ಓದುವ ಮೂಲಕ ಹೊಸ ಚರಿತ್ರೆಯನ್ನು ಬರೆದವರನ್ನೂ ಆಧಾರವಾಗಿ ಟ್ಟು ಕೊಂಡು ಮುನ್ನೆಲೆಗೆ ಬರುವಂತೆ ಸಲಹೆ ನೀಡಿದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಲಿಂಗರಾಜ್ ಹೊಸಭಾವಿ ಅಧ್ಯ ಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಿಮ೯ಲಾ ಮಹೇಶ್ ಹಿರೇಮನಿ , ಸಾಹಿತಿ ಶ್ರೀ ಬಿ. ಎಂ. ಹಳ್ಳಿ , ಶಿಕ್ಷಕ ಶ್ರೀಯುತ ನಾಗರಾಜ್ ಉಮಚಗಿ , ಕ.ಸಾ.ಪ ಅಧ್ಯಕ್ಷ ಕಳಕಪ್ಪ ಕುಂಬಾರ ಸಮಾರೋಪ ನುಡಿ ಹೇಳಿದರು. ಶ್ರೀ ಭೀಮಪ್ಪ ಮೀಸಿ ಮುಖ್ಯೋಪಾಧ್ಯಾಯರು ಸ .ಹಿ. ಪ್ರಾ.ಶಾಲೆ ಇಟಗಿ, ಮಲ್ಲಿಕಾಜು೯ನಗೌಡ ಹಲ್ಯಾಳ, ಎಸ್.ಡಿ.ಎಂ.ಸಿ ಸದಸ್ಯರು ,ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.
ಖ್ಯಾತ ಗಾಯಕ ಶ್ರೀ ಮೇಘರಾಜ ಎಸ್ ಜಿಡಗಿ ಹಾಗೂ ಸ್ಥಳೀಯ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದೇ ಸಂದರ್ಭದಲ್ಲಿ ರಮೇಶ್ ಸುವೆ ೯ ಹಾಗೂ ಬಸವರಾಜ ಹಳ್ಳಿ ಅವರು ಶಾಲೆಗೆ ನೂರಾರು ಪುಸ್ತಕಗಳನ್ನು ಕೊಡುಗೆ ನೀಡಿದರು.
ಶಾಲಾ ವಿದ್ಯಾರ್ಥಿನಿಯರ ಪ್ರಾಥ೯ನೆಯ ನೆರವೇರಿಸಿದರು.
ಶಿಕ್ಷಕ ವೀರಣ್ಣ ಕೊನಾರಿ ಸ್ವಾಗತಿಸಿದರು.
ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ( ರಿ) ಅಧ್ಯಕ್ಷ ರುದ್ರಪ್ಪ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು, ಶಿಕ್ಷಕ ಟೀ ಮಾಲತೇಶ್ ನಿರೂಪಿಸಿದರು.