
ನಿಮ್ಮ ಆರೋಗ್ಯಕ್ಕಾಗಿ ದ್ವೇಷಗಳನ್ನು ಕಡಿಮೆ ಮಾಡಿ : ಎಂ. ಎಸ್.ದಿವಾಕರ
ಕರುನಾಡ ಬೆಳಗು ಸುದ್ದಿ
ವಿಜಯನಗರ, 01- ಮನುಷ್ಯ ಸಾಯುವುದಕ್ಕೆ ಒಂದು ಕಾರಣ ಸಾಕು, ಬದುಕುವುದಕ್ಕೆ ನೂರಾರು ಕಾರಣ ಬೇಕು. ಹಾಗಾಗಿ ಆರೋಗ್ಯದ ಕಡೆ ಗಮನಕೊಡಬೇಕು. ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರ ಕಲಿಸಿದರೆ ಅದೇ ದೊಡ್ಡ ಆಸ್ತಿ. ನಿಮ್ಮ ಆರೋಗ್ಯಕ್ಕಾಗಿ ದ್ವೇಷಗಳನ್ನು ಕಡಿಮೆ ಮಾಡಿ ಹಿಂದೆ ನೀವು ಮಾಡಿದ ಸಾಧನೆಗಳೆ ಈಗಿನ ಮಕ್ಕಳಿಗೆ ಸ್ಪೂರ್ತಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ದಿವಾಕರ ಹೇಳಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ವಿಜಯನಗರ ಜಿಲ್ಲೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ನಗರ ಅಭಿವೃದ್ಧಿ ಕೋಶ,ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯನಗರ ಹಾಗೂ ವಿಶೇಷ ಚೇತನರಿಗಾಗಿ ಮತ್ತು ಹಿರಿಯ ನಾಗರಿಕಾಗಿ ಶ್ರಮಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ನಗರದ ಚರ್ಚ್ ಸಮುದಾಯ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಅತಿಯಾದ ಮಮಕಾರದಿಂದ ಮಕ್ಕಳು ತಪ್ಪು ದಾರಿಗಳನ್ನು ಹಿಡಿಯುತ್ತಾರೆ, ಆದ್ದರಿಂದ ಮಕ್ಕಳಿಗೆ ಆಸ್ತಿಯನ್ನು ಮಾಡುವುದಕ್ಕಿಂತ ಶಿಕ್ಷಣವನ್ನು ಕೊಡಿ ಅವರು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಿಮ್ಮ ಮನೆಗೆ ಬರುವ ಸೊಸೆಯಂದಿರನ್ನು ಮಕ್ಕಳಂತೆ ಕಾಣಿರಿ. ಇತ್ತೀಚಿನ ಸರ್ವೇ ಪ್ರಕಾರ 100ಜನರಲ್ಲಿ 35% ಜನಕ್ಕೆ ಬಿಪಿ ಶುಗರ್ ಕಂಡುಬರುತ್ತಿದೆ ಹಾಗಾಗಿ ನಿಮ್ಮಲ್ಲಿರುವ ಕೋಪ ಸಿಟ್ಟನ್ನು ಬಿಡಬೇಕು. ನೀವು ಮಕ್ಕಳಿಗೆ ತೋರಿಸುವ ಪ್ರೀತಿಯಿಂದ ನಿಮ್ಮ ಅಂತಿಮ ಸಮಯದಲ್ಲಿ ಮಕ್ಕಳು ನೆರವಾಗುತ್ತಾರೆ. ಗಣತೆಯ ಬಾಳಿನೊಂದಿಗೆ ವಯೋಪಕ್ವತೆ, ವಿಶ್ವವಾದ್ಯಂತ ಹಿರಿಯ ಜೀವಿಗಳಿಗೆ ಆರೈಕೆ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸದೃಢಗೊಳಿಸುವುದರ ಮಹತ್ವದ ಬಗ್ಗೆ ತಿಳಿಸಿದರು.
ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕ ಕಲ್ಯಾಣ ಅಧಿಕಾರಿ ಮಾತನಾಡಿ ಅವಿನಾಶ ಲಿಂಗ ಎಸ್ ಗೋಟಕ್ಕಿಂಡಿ ಮಾತನಾಡಿ 31ನೇ ಜಿಲ್ಲೆಯಾಗಿ ಹೊರಹೊಮ್ಮಿರುವ ವಿಜಯನಗರ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿ ವಿಶ್ವ ಹಿರಿಯ ನಾಗರಿಕ ದಿನಾಚರಣೆಯನ್ನು ಆಚರಿಸುತ್ತೇವೆ ವಿಶೇಷ ಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಸರಕಾರ ಸ್ಥಾನಕ್ಕೆ ತಂದಿರುವ ಬಹಳಷ್ಟು ಸೌಲಭ್ಯಗಳನ್ನು ಜಿಲ್ಲೆಯಲ್ಲಿ ನೀಡುತ್ತಿದ್ದೇವೆ. ನಮ್ಮ ಮಕ್ಕಳು ನಮ್ಮನ್ನು ನೋಡುವುದಿಲ್ಲ ನಮ್ಮ ಕೂಗನ್ನು ಆಲಿಸುವುದಿಲ್ಲ ಎಂದು ಯೋಚಿಸಬೇಕಾಗಿಲ್ಲ,ಸರ್ಕಾರ್ದಿಂದ ವಿವಿಧಯೋಜನೆಗಳ ಮುಖಾಂತರ ಅನುಷ್ಠಾನಗೊಳಿಸುವುದರ ಮುಖಾಂತರ ತಮ್ಮ ಮುಖದ ಮೇಲೆ ಮಂದಹಾಸ ಮೂಡುವಂತೆ ಮಾಡಿದೆ.ನಮ್ಮ ಇಲಾಖೆಯಲ್ಲಿ ವಿಶೇಷ ಚೇತನರು 19000 ಕ್ಕೂ ಹೆಚ್ಚು ಜನ ಮತ್ತು ಹಿರಿಯ ನಾಗರಿಕರು 1 ಲಕ್ಷಕ್ಕೂ ಹೆಚ್ಚು ಜನ ಇದ್ದು 93 ಸಾವಿರ ಜನ ಈಗಾಗಲೇ ಇಲಾಖೆಯ ಮಾಸಾಸನ ಮತ್ತು ಬಸ್ ಪಾಸುಗಳನ್ನು ಪಡೆದುಕೊಂಡಿದ್ದಾರೆ.
ಜೊತೆಗೆ ಆರೋಗ್ಯ ಇಲಾಖೆಯಿಂದ ಕಣ್ಣಿನ ಪರೀಕ್ಷೆಗಳನ್ನು ಮಾಡಿಸಿದ್ದೇವೆ ಎಂದು ಹೇಳಿದರು.
ನಾಟಕ ಸಂಗೀತ ಇತರೆ ಕಲೆಗಳಲ್ಲಿ ಸುಧಿರ್ಘ ಸಾಧನೆ ಗೈದವರನ್ನು ಗುರುತಿಸಿ ವೇದಿಕೆಮೇಲೆ ಹಿರಿಯ ನಾಗರಿಕರಿಗೆ ಸನ್ಮಾನ ಮಾಡಲಾಯಿತು, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜಿಲ್ಲಾಧಿಕಾರಿಗಳು ಪ್ರಮಾಣ ಪತ್ರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಹೆಚ್.ಎನ್. ಎಫ್ ಇಮಾಮ್ ನಿಯಾಜಿ ಅಧ್ಯಕ್ಷರು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ, ಬ್ರಹ್ಮಕುಮಾರಿ ಮಾನಸ, ಸಂಚಾಲಕರು ಬ್ರಹ್ಮಕುಮಾರಿ ಈಶ್ವರಿಯ ಮಹಾವಿದ್ಯಾಲಯ ಹೊಸಪೇಟೆ. ಶ್ವೇತಾ.ಎಸ್ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ತಾಲೂಕು ಸಿ.ಡಿ.ಪಿ.ಒ ಸಿಂದು ಅಂಗಡಿ ಇತರ ರಿದ್ದರು.